ಪ್ರಜ್ವಲ್ ರೇವಣ್ಣ ಪ್ರಕಣ; ಮೋದಿ ಮತ್ತು ಅಮಿತ್ ಶಾ ರಾಜಿನಾಮೆಗೆ ಒತ್ತಾಯಿಸಿ ಕಲಬುರಗಿಯಲ್ಲಿ ಪ್ರತಿಭಟನೆ

0
78

ಕಲಬುರಗಿ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣರವರು ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯದ ಗಂಭೀರ ಪ್ರಕರಣ ದಾಖಲಾಗಿರುವುದರಿಂದ ಕೂಡಲೆ ವಿಧಾನಸಭಾ ಸದಸ್ಯತ್ವ ಹಾಗೂ ಸಂಸದನ ಸ್ಥಾನಗಳಿಗೆ ರಾಜಿನಾಮೆ ನೀಡಿ ಪ್ರಕರಣವನ್ನು ಎದುರಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ), ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆ ಹಾಗೂ ಡಿವೈಎಫ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ಭಾನುವಾರ ನಗರದ ತೀಮ್ಮಾಪುರಿ ಸರ್ಕಲ್ ನಲ್ಲಿ ಪ್ರತಭನಟನೆ ನಡಸಿದ ಅವರು ಪ್ರಜ್ವಲ್ ರೇವಣ್ಣ ಬಂಧಿಸುವಲ್ಲಿ ರಾಜ್ಯ ಸರಕಾರವು ಮತ್ತಷ್ಟು ವಿಳಂಬಕ್ಕೆ ಅವಕಾಶ ಕೊಡದೆ ತಕ್ಷಣ ಬಂಧಿಸಿ, ಎಸ್ಐಟಿ ತನಿಖೆ ಯಾವುದೇ ಒತ್ತಡಕ್ಕೆ ಮಣೆಯದೆ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಿಡಿಸಿ ಸಾವಿರಾರು ಮಹಿಳೆಯರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

Contact Your\'s Advertisement; 9902492681

ಪ್ರಾದೇಶಿಕ ಪಕ್ಷಗಳನ್ನು ನಾಶ ಮಾಡುವ ಬಿಜೆಪಿ ಮತ್ತು ಆರ್ ಎಸ್ ಎಸ್ ತಂತ್ರವಾಗಿದ್ದು, ಹೊಳೆ ನರಸೀಪುರದ ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರು ಅದಾಗಲೇ, ದೇಶನಾಯಕರ ಗಮನ ಸೆಳೆದು ಮಹಿಳೆಯರ ಮೇಲಿನ ದೌರ್ಜನ್ಯದ ಈ ಭಾರೀ ಪ್ರಕರಣವನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನ ಉನ್ನತ ನಾಯಕರ ಗಮನಕ್ಕೆ ತಂದರೂ ಅದನ್ನು ಮುಚ್ಚಿಟ್ಟಿದ್ದು ಯಾಕೆ ? ಮತ್ತು ಅಷ್ಟೆಲ್ಲಾ ಭಾರೀ ಹಗರಣವಿದ್ದರೂ ಎನ್ ಡಿ ಎ ಅಭ್ಯರ್ಥಿಯಾಗಿ ಪ್ರಜ್ವಲ್ ರವರನ್ನು ಯಾಕೆ ಒಪ್ಪಿಕೊಳ್ಳಲಾಯಿತು ? ಹಾಗೂ ಪ್ರಧಾನ ಮಂತ್ರಿಗಳು ಅವರ ಪರ ಹಾಸನದಲ್ಲಿ ಹೇಗೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು ? ಎಂಬ ಕುರಿತು ಬಿಜೆಪಿ ನಾಯಕರು ಬಹಿರಂಗಪಡಿಸಬೇಕೆಂದು ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯಾದರ್ಶಿಯಾಗಿರುವ ಕೆ ನೀಲಾ ಒತ್ತಾಯಿಸಿದರು.

ಬಹುಶಃ ಇಂತಹ ಪ್ರಕರಣಗಳನ್ನೇ ಬಿಜೆಪಿ ಆರ್ ಎಸ್ ಎಸ್ ಗಳು ತಮ್ಮ ಜೊತೆ ಜೆಡಿಎಸ್ ಕೈ ಜೋಡಿಸುವಂತೆ ಮಾಡಿಕೊಳ್ಳಲು ಮತ್ತು ಅದನ್ನು ನಾಶ ಮಾಡಲು ದುರುವಯೋಗ ಪಡಿಸಿಕೊಂಡಿರುವ ಸಾಧ್ಯತೆಗಳು ಇಲ್ಲದಿಲ್ಲ. ಬಿಜೆಪಿ ಜೊತೆ ಕೈ ಜೋಡಿಸುವ ಪ್ರಾದೇಶಿಕ ಪಕ್ಷಗಳನ್ನು ಸ್ವಾಹ ಮಾಡುತ್ತಿರುವುದು ಹೊಸದೇನಲ್ಲಾ ಹೀಗಾಗಿ, ಈ ಪ್ರಾದೇಶಿಕ ಪಕ್ಷವನ್ನು ಮುಗಿಸಲು ಈ ಪ್ರಕರಣವನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ. ಆದಾಗಲೇ ಬಿಜೆಪಿ ಜೊತೆ ಜೆಡಿಎಸ್ ಕೈ ಜೋಡಿಸಿದೆ ಎಂದು ಕೀಡಿಕಾರಿದರು.

ಅತ್ಯಾಚಾರಿ ಎಂದು ಗೊತ್ತಿದರು ಅವರೊಂದಿಗೆ ಫೋಟೋ ತೆಗಿಸಿಕೊಂಡಿರವು ಪ್ರಧಾನಿ ಮೋದಿ ಇಂತಹ ವಿಕೃತ್ಯ ವ್ಯಕ್ತಿಯ ಪರವಾಗಿ ಹಾಸನದಲ್ಲಿ ಮತಯಾಚಿಸಿರುವುದು ದೇಶದ ಜನರಿಗೆ ಮಾಡಿರುವ ಅಪಮಾನವಾಗಿದೆ. ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ನೈತ ಹೊಣೆಹೊತ್ತು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಬೇಕೆಂದು ಅಖಿಲ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮಿನಾಕ್ಷಿ ಬಾಳಿ ಅವರು ಒತ್ತಾಯಿಸಿದರು.

ಹುಬ್ಬಳ್ಳಿ ನೇಹಾ ಪ್ರಕರಣ ಖಂಡಿಸಿ ಮಾತನಾಡಿದ ಡಿ.ಎಫ್.ವೈ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಲವೀತ್ರ ಮಾತನಾಡಿ ಪ್ರಜ್ವಲ್ ರೇವಣ್ಣ ಕಾಮದಾಹಕ್ಕೆ ನೂರಾರು ಹಿಂದೂ  ಮಹಿಳೆಯರು ಬಲಿಯಾಗಿದ್ದಾರೆ. ಈವಾಗ ನಮ್ಮ ಹಿಂದೂ ಸಂಸ್ಕೃತಿಗೆ ಧಕ್ಕೆಗಾಗಿಲ್ವೆ, ರಾಜಕಾರಣಿಗಳು ತನ್ನ ಅಧಿಕಾರಿ ದರ್ಪದಲ್ಲಿ ನೊಂದ ಮಹಿಳೆಯರಿಗೆ ಮಾಡುತ್ತಿರುವ ದೃಹವಲ್ಲವೇ ಎಂದು ಪ್ರಶ್ನಿಸಿದ ಅವರು ಪ್ರಜ್ವಲ್ ರೇವಣ್ಣನಿಗೆ ಈ ನೆಲದ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಲವು ಮಹಿಳೆಯರುವ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here