ಚಿತ್ತಾಪುರ: ಸಾಮಾಜಿಕ ಕ್ರಾಂತಿಯ ಹರಿಕಾರ ಅಣ್ಣಾ ಬಸವಣ್ಣ

0
17

ಚಿತ್ತಾಪುರ: ಅಣ್ಣಾ ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರ್ನಾಟಕ ಸಾoಸ್ಕೃತಿಕ ನಾಯಕ ಅಣ್ಣಾ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸುವುದರ ಮೂಲಕ 891ನೇಯ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣರವರು ಸಾಮಾಜಿಕ ವ್ಯವಸ್ಥೆಯಲ್ಲಿ ಮನೆ ಮಾಡಿದ ಜಾತೀಯತೆ, ಮೇಲು-ಕೀಳು ಹಾಗೂ ಮೂಢ ನಂಬಿಕೆಗಳ ವಿರುದ್ಧ ಹೋರಾಟಕ್ಕೆ ನಿಂತು ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ತೊಲಗಿಸಲು ವಚನ ಪರಂಪರೆಯನ್ನು ಆರಂಭಿಸಿದರು ಎಂದರು.

Contact Your\'s Advertisement; 9902492681

ಎಲ್ಲಾ ಜನರಿಗೂ ಅರ್ಥವಾಗುವ ಸಂಸ್ಕೃತ ಭಾಷೆಯಲ್ಲಿ ವಚನಗಳನ್ನು ರಚಿಸಿ, ಈ ವಚನಗಳಲ್ಲಿ ಸಮಾಜದಲ್ಲಿ ಆಚರಣೆಯಲ್ಲಿರುವ ಅನಿಷ್ಟ ಪದ್ಧತಿಗಳನ್ನು ಜನಗಳಿಗೆ ತಿಳಿ ಹೇಳಿದರು. ಸಮಾಜದಲ್ಲಿನ ಜಾತಿಯತೆಯನ್ನು ಹೋಗಲಾಡಿಸಲು ಅಂತರ್ಜಾತಿ ವಿವಾಹಗಳನ್ನು ಅವರ ನೇತೃತ್ವದಲ್ಲಿ ಮಾಡಿದರು ಎಂದು ಹೇಳಿದರು.

ಸಮಾಜದಲ್ಲಿ ಕೀಳು ಎನಿಸಿದ ಚಮ್ಮಾರ, ಬಡಗಿ, ಅಂಬಿಗರ ಚೌಡಯ್ಯ ಸೇರಿದಂತೆ ಮುಂತಾದವರನ್ನು ಶ್ರೇಷ್ಠರೆಂದು ಗುರುತಿಸಿ ತಾವು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಸ್ಥಾನಮಾನ ನೀಡುವುದರ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ ಹರಿಕಾರರಾಗಿದ್ದಾರೆ ಎಂದರು.

ಈ ಸಂಧರ್ಭದಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಕ್ತಾರ ಪಟೇಲ್, ಕಿಸಾನ ಘಟಕ ಅಧ್ಯಕ್ಷ ನಾಗರೆಡ್ಡಿ ಗೋಪಸೇನ, ಪುರಸಭೆ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಳಗಿ, ಶೀಲಾ ಕಾಶಿ, ಸಂಜಯ ಬುಳಕರ, ನಾಗಯ್ಯ ಗುತ್ತೇದಾರ, ರಾಮಲಿಂಗ ಬಾನರ, ಭಿಮಣ್ಣ ಹೊತ್ತಿನಮಡಿ, ದೇವಿಂದ್ರಾ ರೆಡ್ಡಿ ತೋಟದ್, ರಾಮರೆಡ್ಡಿ ಸೂಗೂರು, ಶಿವು ಪಾಟೀಲ್ ತುನ್ನೂರ್, ನಾಗರಾಜ್ ಕಡಬುರ್, ಸಂತೋಷ ಪೂಜಾರಿ, ಲಕ್ಷ್ಮಿಕಾಂತ್ ಸಾಲಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here