ನಡೆದಂತೆ ನುಡಿದ, ನುಡಿದಂತೆ ನಡೆದ ಮಹಾಮಾನವತಾವಾದಿ ಬಸವಣ್ಣ

0
27

ಶಹಾಬಾದ: ನಡೆದಂತೆ ನುಡಿದ, ನುಡಿದಂತೆ ನಡೆದು ಸಮಸ್ತ ಮನುಕುಲದ ಸರ್ವತೋಮುಖ ಏಳೆಗಾಗಿ ಶ್ರಮಿಸಿದ ಬಸವಣ್ಣ ಮಹಾಮಾನವತಾವಾದಿ ಸರ್ವರಿಗೂ ಎಂದೆಂದೂ ಮಾದರಿಯಾಗಿ ನಿಲ್ಲುತ್ತಾನೆ ಎಂದು ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಹೇಳಿದರು.

ಅವರು ಭಂಕೂರ ಶಾಂತನಗರದ ಬಸವ ಸಮಿತಿಯಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

12 ಶತಮಾನದ ಬಸವಾದಿ ಶರಣರು ನಡೆದಂತೆ ನುಡಿದರು, ನುಡಿದಂತೆ ನಡೆದರು. ಅದಕ್ಕಾಗಿಯೇ ಅವರ ಮಾತುಗಳು ಜಗತ್ತಿನ ಎಲ್ಲ ಕಾಲದ ಎಲ್ಲ ಜನರಿಗೆ ಮಾದರಿಯಾಗಿವೆ. ಬಸವಾದಿ ಶರಣರು ಆಡಿದ, ಹಾಡಿದ ಮಾತುಗಳು ‘ವಚನ’ಗಳಾಗಿ ಲಿಖಿತರೂಪದಲ್ಲಿ ಇಂದಿಗೂ ಉಳಿದಿಕೊಂಡಿವೆ. ಅಂದಿನವರೆಗೆ ದೇವಭಾμÉ ಎನಿಸಿದ ಪಂಡಿತರ ಸಂಸ್ಕøತ ಭಾμÉಯನ್ನು ನಿರಾಕರಿಸಿ, ಜನವಾಣಿಯಾದ ಕನ್ನಡದಲ್ಲಿ ವಚನಗಳನ್ನು ಬರೆದು ಜನವಾಣಿಯನ್ನೇ ದೇವವಾಣಿಯ ಎತ್ತರಕ್ಕೆ ಏರಿಸಿದರು. ಈ ವಚನಗಳು ವಿಶ್ವಸಾಹಿತ್ಯಕ್ಕೆ ಕನ್ನಡದ ಅಮೂಲ್ಯ ಕೊಡುಗೆಗಳಾಗಿವೆ.ಬಸವಣ್ಣ ಅಂತರ್ಜಾತಿ ವಿವಾಹ ಮಾಡುವ ಮೂಲಕ ದೊಡ್ಡ ಕ್ರಾಂತಿಯನ್ನೇ ಮಾಡಿದರು.

ಇಂದಿನ 21ನೆಯ ಶತಮಾನದಲ್ಲೂ ಅಂತರ್ಜಾತಿ ವಿವಾಹಕ್ಕೆ ಸಮಾಜ ಮನ್ನಣೆ ದೊರೆತಿಲ್ಲ. ಅಂದಮೇಲೆ ಬಸವಣ್ಣನ ಧೈರ್ಯ ಮೆಚ್ಚಲೇಬೇಕು. ಸಮಾನತೆ ನವಸಮಾಜ ನಿರ್ಮಿತಿಗೆ ಭದ್ರ ಬುನಾದಿ ಹಾಕಿದವ ಬಸವಣ್ಣ ಎಂಬ ಮಾತು ಎಲ್ಲರೂ ಒಪ್ಪಲೇಬೇಕಾದದ್ದು.

ಶರಣ ರೇವಣಸಿದ್ದಪ್ಪ ಮುಸ್ತಾರಿ ಮಾತನಾಡಿ,ಬಸವಣ್ಣ ಕಲ್ಯಾಣ ಕ್ರಾಂತಿಯ ಸಮಯದಲ್ಲಿ ರಾಜನಿಗೂ ಅಂಜದೆ ತನ್ನ ತತ್ವಗಳಿಗೆ ಬದ್ಧನಾಗಿ ಮಂತ್ರಿಪದವಿಯನ್ನೇ ತ್ಯಜಿಸಿದ ಧೀರ ವ್ಯಕ್ತಿ. ಉನ್ನತ ಹುದ್ದೆಯಲ್ಲಿದ್ದರೂ ಸದಾ ಮುಗಿದ ಕೈ ಬಾಗಿದ ತಲೆಯ ಸಜ್ಜನಿಕೆಯ ಸಾಕಾರಮೂರ್ತಿ. ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಬಸವಣ್ಣ ಕೇವಲ ರಾಜಕಾರಣಿಗಳಿಗμÉ್ಟೀ ಅಲ್ಲ, ಜಗತ್ತಿನ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾನೆ ಎಂದರು.

ಈ ಸಂದರ್ಭದಲ್ಲಿ ಅಮರಪ್ಪ ಹೀರಾಳ, ರಾಮಲಿಂಗ ಮಾಕಾ,ಮಹಾದೇವ ಮಾನಕರ್,ಸೋಮಶೇಖರ ಉಳ್ಳಾಗಡ್ಡಿ,ಶಾಂತಪ್ಪ ಬಸಪಟ್ಟಣ, ತಿಪ್ಪಣ್ಣರೆಡ್ಡಿ, ಹಣಮಂತರಾವ ದೇಸಾಯಿ, ಶರಣಯ್ಯಸ್ವಾಮಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here