ಸಮಾಜವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದಾಗಿದೆ

0
7

ಶಹಾಬಾದ:ಪ್ರಸ್ತುತ ಕವಲು ದಾರಿಯಲ್ಲಿರುವ ಸಮಾಜವನ್ನು ಸರಿದಾರಿಗೆ ತರುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಪತ್ರಕರ್ತ ನಿಂಗಣ್ಣ ಜಂಬಗಿ ಹೇಳಿದರು.

ಅವರು 2023-24ನೇ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯ ಮತ್ತು ಎಸ್.ಎಸ್. ಮರಗೋಳ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಇಂದಿನ ಮಾದ್ಯಮಗಳ ಪಾತ್ರ ಕುರಿತು ಮಾತನಾಡಿದರು.

Contact Your\'s Advertisement; 9902492681

ಜನರು ಸತ್ಯಕ್ಕಾಗಿ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಪತ್ರಕರ್ತರು ತಮ್ಮನ್ನು ತಾವೇ ವಿಮರ್ಶೆಗೆ ಒಡ್ಡಿಕೊಂಡು ಕರ್ತವ್ಯ ನಿರ್ವಹಿಸಬೇಕು, ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ, ಆ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಂಡು ಹೋಗಬೇಕು ಎಂದರು.

ಪತ್ರಕರ್ತ ಲೋಹಿತ ಕಟ್ಟಿ ಮಾತನಾಡಿ, ಮಾಧ್ಯಮವನ್ನು ಸಮಕಾಲೀನ ಸಮಾಜದ “ಕನ್ನಡಿ” ಅಥವಾ ಕಾವಲು ನಾಯಿಗಳು ಎಂದು ನೋಡಲಾಗುತ್ತದೆ.ಇಂದಿನ ಮಾಧ್ಯಮಗಳು ನಮ್ಮ ಸಮಾಜದ ಅನ್ಯಾಯ, ದಬ್ಬಾಳಿಕೆ, ಮೌಡ್ಯತೆ, ದುಷ್ಕøತ್ಯಗಳು ಮತ್ತು ಪಕ್ಷಪಾತದ ವಿರುದ್ಧ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಉಪನ್ಯಾಸಕ ಶಿವಕುಮಾರ ಕುಸಾಳೆ ಮಾತನಾಡಿದರು.

ಉಪನ್ಯಾಸಕರಾದ ಎಂ ಕೆ ಬೋತಗಿ, ಡಾ. ಶ್ರೀಮಂತ ಹೂವಿನಹಳ್ಳ, ಮಹ್ಮದ ಇರ್ಫಾನ್, ಕೆಟಿ ಚಹ್ವಾಣ
ಉಪನ್ಯಾಸಕ ಶಿವಶಂಕರ ಹಿರೇಮಠ,ವಿದ್ಯಾರ್ಥಿಗಳಾದ ಕಿರಣ್ ಕುಮಾರ್ ಮಾನೆ, ಅಂಬಾದಾಸ, ರೇಣುಕಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳಾದ ಸಾಯಿ ಕೃಷ್ಣ ಸ್ವಾಗತಿಸಿದರು, ಲಕ್ಷ್ಮಿ ಹಿರೇಮಠ ನಿರೂಪಿಸಿದರು, ಶಿಲ್ಪಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here