ವಡ್ಡರವಾಡಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಲು ಒತ್ತಾಯಿಸಿ ಮನವಿ

0
18

ಶಹಾಬಾದ: ತಾಲೂಕಿನ ವಡ್ಡರವಾಡಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಮಂಗಳವಾರ ಎಐಡಿವೈಓ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎಐಡಿವೈಓ ಜಿಲ್ಲಾಧ್ಯಕ್ಷ ಜಗನ್ನಾಥ.ಎಸ್.ಹೆಚ್ ವಡ್ಡರವಾಡಿ ಗ್ರಾಮವು ಮೂಲ ಸೌಲಭ್ಯಗಳಿಂದ ಹಾಗೂ ಸರಕಾರದ ಸೌಕರ್ಯಗಳಿಂದ ವಂಚಿತವಾಗಿದೆ.ಮುಖ್ಯವಾಗಿ ಶುದ್ಧಕುಡಿಯುವ ನೀರು ಮತ್ತು ಮಹಿಳಾ ಶೌಚಾಲಯ ಇಲ್ಲzವಿಲ್ಲಿನ ಜನರು ಪರಿತಪಿಸುತ್ತಿದ್ದಾರೆ.

Contact Your\'s Advertisement; 9902492681

ಸ್ವತಂತ್ರ ಬಂದು ದಶಕಗಳೇ ಕಳೆದರೂ ಸೂಕ್ತ ಸೌಲಭ್ಯ ನೀಡದೇ ಇರುವುದು ದುರ್ದೌವದ ಸಂಗತಿ. ಸರಕಾರವು ಮಹಿಳೆಯರಿಗೆ ಭಾಗ್ಯಗಳ ಯೋಜನೆಗಳನ್ನು ನೀಡಿದರೆ ಸಾಕಾಗುವುದಿಲ ಅವರಿಗೆ ಘನತೆ-ಗೌರವದಿಂದ ಬದುಕುವ ಹಾಗೆ ಕನಿಷ್ಠ ಮಟ್ಟದ ಮಹಿಳಾ ಶೌಚಾಲಯಗಳು ನಿರ್ಮಿಸಬೇಕು.ಇಂದಿಗೂ ಗ್ರಾಮಗಳಲ್ಲಿ ಮಹಿಳೆಯರು ಬೆಳಕಾಗುವ ಮೊದಲು ಅಥವಾ ಕತ್ತಲಾದ ಮೇಲೆ ಬಯಲಿನಲ್ಲಿಯೇ ಬಹಿರ್ದೆಸೆಗೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಈ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಅಧ್ಯಕ್ಷ ರಘು ಪವಾರ ಮಾತನಾಡಿದ ನಂತರ ತಹಶೀಲ್ದಾರ ಮಲಶೆಟ್ಟಿ ಚಿದ್ರೆ ಹಾಗೂ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿನಾಥ ರಾವೂರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಪ್ರತಿಭಟನೆಯಲ್ಲಿ ಸಂಘಟನೆ ಕಾರ್ಯದರ್ಶಿ ರಮೇಶ ದೇವಕರ್, ಸದಸ್ಯರಾದ ದೇವರಾಜ್ ಮಿರಲ್ಕರ್ ಆನಂದ್ ದಂಡಗುಲ್ಕರ್, ತೇಜಸ್.ಇಬ್ರಾಹಿಂಪೂರ್, ರಾಕೇಶ್ ಪೆÇೀತನ್ಕರ್ ಚಂದ್ರಕಾಂತ್ ಪವಾರ್, ತಿಪ್ಪಣ್ಣ ಮಿರ್ಲಕರ್, ವೆಂಕಟೇಶ್ ಪವಾರ್, ತಿಮ್ಮಣ್ಣ ಬೋಸಗಿ, ಅಂಬ್ರೇಂಶ್ ಪವಾರ, ಸೀತಾರಾಮ್ ಪವಾರ್, ತಿರುಪತಿ ಪವಾರ್, ಮಾರುತಿ ವಡ್ಡರವಾಡಿ, ವೆಂಕಟೇಶ್ ಬೋಸಗಿ, ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here