ಬೆಳೆ ವಿಮೆ ಪರಿಹಾರದ ಸಂಪೂರ್ಣ ಹಣ ವಿತರಣೆಗೆ ಆಗ್ರಹ

0
40

ಕಲಬುರಗಿ: ಜಿಲ್ಲೆಯ ರೈತರಿಗೆ ಖರೀಫ್-2023-24ನೇ ಸಾಲಿಗೆ ಸಂಬಂಧಪಟ್ಟಂತೆ ಮಂಜೂರಾಗಿರುವ ಬೆಳೆ ವಿಮೆ ಪರಿಹಾರ ಹಣ ಸಂಪೂರ್ಣವಾಗಿ ಸಂಬಂಧಪಟ್ಟ ರೈತರಿಗೆ ಕೂಡಲೇ ವಿಳಂಬದ ಬಡ್ಡಿಯೊಂದಿಗೆ ವಿತರಿಸುವಂತೆ ಗಾಂಧೀಜಿ ಗ್ರಾಹಕರ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈಜನಾಥ ಎಸ್. ಝಳಕಿ ಮನವಿ ಮಾಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು,
ಕಲಬುರಗಿ ಜಿಲ್ಲೆಯಲ್ಲಿ ಖರೀಫ್-2023-24ನೇ ಸಾಲಿನಲ್ಲಿ ಸಹಸ್ರಾರು ರೈತ ಬಾಂಧವರು ತೊಗರಿ,ಹೆಸರು, ಉದ್ದು, ಸೊಯಾಬಿನ್, ಸೂರ್ಯಪಾನ ಹಾಗೂ ಇನ್ನಿತರ ಬೆಳೆಗಳಿಗೆ ಸಂಬಂಧಪಟ್ಟ ವಿಮಾ ಕಂಪನಿಯಲ್ಲಿ ಬೆಳೆ ವಿಮೆ ಮಾಡಿಸಿದ್ದು, ಆದರೆ ಸದರಿ ಸಾಲಿನಲ್ಲಿ ಮಳೆಯ ಅಭಾವದಿಂದ ರೈತರು ಕಷ್ಟಪಟ್ಟುಹಣ ಖರ್ಚು ಮಾಡಿ ಬೆಳೆದ ವಿಮೆ ವ್ಯಾಪ್ತಿಗೆ ಒಳಪಟ್ಟ ಸದರಿ ಬೆಳೆಗಳು ಫಸಲು ನೀಡದೆ ಹಾಳಾಗಿವೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಈ ಬಗ್ಗೆ ಸಹಸ್ರಾರು ರೈತರು ತಮಗೆ, ಕೃಷಿ ಇಲಾಖೆಗೆ ಹಾಗೂ ಸಂಬಂಧಪಟ್ಟ ವಿಮಾ ಕಂಪನಿಗೆ ಮಾಹಿತಿ ನೀಡಿದ್ದು, ಅದರನ್ವಯ ತಮ್ಮ ಅಧಿಕಾರಿಗಳು ಕೂಡ ಬೆಳೆ ಕಟಾವು ಸಂಬಂಧಪಟ್ಟ ಜಿಲ್ಲೆಯ ರೈತರಜಮೀನುಗಳಲ್ಲಿ ವಿಮೆ ವ್ಯಾಪ್ತಿಗೆ ಒಳಪಟ್ಟ ಬೆಳೆಗಳಿಗೆ ಮಾಡಿ ಈ ಬಗ್ಗೆ ವಿವರವಾದ ವರದಿ ಪಡೆದು ಜಿಲ್ಲೆಯ ರೈತರಿಗೆ ಈಗಾಗಲೇ ಸುಮಾರು 124 ಕೋಟಿ ಮಧ್ಯಂತರ ಬೆಳೆ ವಿಮೆ ಮಂಜೂರು ಮಾಡಿ ಎರಡು ವಾರದಲ್ಲಿ ರೈತರ ಖಾತೆಗೆ ಜಮಾ ಮಾಡುವುದಾಗಿ ಹೇಳಿದರೂ ಸಹ ಸುಮಾರು ವಾರಗಳು ಕಳೆದರೂ ಕೂಡ ಲಭ್ಯವಿರುವ ಮಾಹಿತಿ ಪ್ರಕಾರ ಅದರಲ್ಲಿ ಇಲ್ಲಿಯ ವರೆಗೆ ಕೇವಲ ಸುಮಾರು 96.24 ಕೋಟಿ ಮಾತ್ರ ಸಂಬಂಧಿಸಿದ ರೈತರಿಗೆ ಮಧ್ಯಂತರ ಬೆಳೆ ವಿಮಾ ಪರಿಹಾರ ವಿತರಣೆ ಮಾಡಿದ್ದು ತಿಳಿದು ಬಂದಿದ್ದು, ಆದರೆ ಬೆಳೆ ವಿಮೆ ಹಾನಿಯ ವರದಿ ಪಡೆದು ಸುಮಾರು ತಿಂಗಳುಗಳಾದರೂ ಸಹಿತ ಸಂಬಂಧಪಟ್ಟ ರೈತರ ವಿಮಾ ವ್ಯಾಪ್ತಿಗೆ ಒಳಪಟ್ಟ ಸದರಿ ಬೆಳೆಗಳಿಗೆ ಸಿಗಬೇಕಾದ ಸಂಪೂರ್ಣ ಬೆಳೆ ವಿಮಾ ಪರಿಹಾರ ಸಿಗದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈಗಾಗಲೇ ಜಿಲ್ಲೆಯು ಬರಪಿಡಿತ ಎಂದು ಘೋಷಣೆಯಾಗಿ ಹಲವು ತಿಂಗಳುಗಳು ಆದರೂ ಹಾಗೂ ಸಂಬಂಧಪಟ್ಟ ಬೆಳೆ ವಿಮೆ ಕಂಪನಿ ರೈತರಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕಲಬುರಗಿ ಜಿಲ್ಲೆಯಲ್ಲಿಖರೀಫ್-2023-24ನೇ ಸಾಲಿನಲ್ಲಿ ಒಟ್ಟು 160.31 ಕೋಟಿ ಬೆಳೆ ವಿಮೆ ಪ್ರೀಮಿಯಮ್ ರೂಪದಲ್ಲಿ ಪಡೆದರೂ ಸಹಿತ ಬೆಳೆ ವಿಮೆ ಮಾಡಿಸಿ ಹಾನಿಗೊಳಗಾಗಿ ನಷ್ಟ ಅನುಭವಿಸಿದ ರೈತ ಗ್ರಾಹಕರಿಗೆ ಘೋಷಣೆಯಾಗಿರುವ ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ವಿಮಾ ಪರಿಹಾರ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯ ನೀತಿ ನಿಯಮಗಳನ್ವಯ ನಿಗಧಿಪಡಿಸಿದ ಕಾಲಪರಿಮಿತಿಯೊಳಗೆ ವಿತರಿಸದೇ ಅನಗತ್ಯವಾಗಿ ವಿಳಂಬ ಮಾಡಿದ್ದು ಇದು ವಿಮಾ ಕಂಪನಿಯೂ ಬೆಳೆ ವಿಮಾ ಯೋಜನೆಯ ಧ್ಯೆಯ ಉದ್ದೇಶಗಳನ್ನು ಗಾಳಿಗೆ ತೂರಿದ್ದು ಸ್ಪಷ್ಟವಾಗಿ ಗೊಚರಿಸಿದೆ ಹಾಗೂ ಇದು ಸದರಿ ಬೆಳೆ ವಿಮಾ ಕಂಪನಿಯ ಸೇವಾ ನ್ಯೂನತೆ ಎತ್ತಿ ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಿಂದ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ಮುಂಗಾರು ಮಳೆಗೆ ಮುನ್ನ ಬಿತ್ತನೆ ಕಾರ್ಯ ಕೈಗೊಳ್ಳಲು ಕಾಯುತ್ತಿರುವ ಜಿಲ್ಲೆಯ ಸಹಸ್ರಾರು ರೈತರಿಗೆ ಬೀಜ, ಗೊಬ್ಬರ ಹಾಗೂ ಇನ್ನಿತರೇ ಕೃಷಿ ಚಟುವಟಿಕೆಗೆಬೇಕಾಗುವ ಸಾಮಗ್ರಿಗಳ ಖರೀದಿಗೆ ತೊಂದರೆಯಾಗುತ್ತಿದ್ದು, ಕೂಡಲೇ ತಾವುಗಳು ಸಂಬಂಧಪಟ್ಟ ಬೆಳೆವಿಮಾ ಕಂಪನಿಯಿಂದ ಜಿಲ್ಲೆಯ ರೈತರಿಗೆ ಸಿಗಬೇಕಾಗಿರುವ ಸಂಪೂರ್ಣ ಬೆಳೆ ವಿಮಾ ಪರಿಹಾರದ ಹಣಈಗಾಗಲೇ ರೈತರಿಗೆ ನೀಡಬೇಕಾಗಿರುವ ಬೆಳೆ ವಿಮೆ ಪರಿಹಾರ ಹಣ ವಿತರಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here