ಅಧ್ಯಕ್ಷರಾಗಿ ನೀಲಕಂಠರಾವ ಮುಲಗೆ, ಕಾರ್ಯಾಧ್ಯಕ್ಷರಾಗಿ ದಿಲೀಪ್ ಆರ್ ಪಾಟೀಲ್ ಆಯ್ಕೆ

0
434

ಕಲಬುರಗಿ : ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಜೂನ್ ತಿಂಗಳ ಮೂರನೇ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ, ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹಿರಿಯ ಸಾಹಿತ್ಯ ಪ್ರೇರಕರು – ಸಮಾಜ ಸೇವಕರಾದ ನೀಲಕಂಠರಾವ ಮುಲಗೆ ಮತ್ತು ಕಾರ್ಯಾಧ್ಯಕ್ಷರಾಗಿ ಸಾಹಿತ್ಯ ಪ್ರೇಮಿಗಳು – ಮಾಜಿ ಜಿ ಪಂ ಸದಸ್ಯರಾದ ದಿಲೀಪ್ ಆರ್ ಪಾಟೀಲ್ ಅವರುಗಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ ಹಾಗೂ ಸುಮ್ಮೇಳನದ ಸಂಚಾಲಕರಾದ ಪ್ರೊ. ಯಶವಂತರಾಯ ಅಷ್ಠಗಿ ಜಂಟಿಯಾಗಿ ತಿಳಿಸಿದ್ದಾರೆ.

ನಗರದ ಐ ಎಫ್ ಬಿ ಸಭಾಂಗಣದಲ್ಲಿ ಗುರುವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿದ್ದ, ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ ಮಾತನಾಡಿ, ಜಿಲ್ಲೆಯ ಎಲ್ಲ ಸಾಹಿತಿಗಳ, ಲೇಖಕರ ಹಾಗೂ ಸಾಹಿತ್ಯ ಸಂಘಟಕರ ಅಭಿಪ್ರಾಯದಂತೆ ಈಗಾಗಲೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ.
ಈ ಸಮ್ಮೇಳನದ ಯಶಸ್ಸಿಗೆ ಪೂರಕವಾಗಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Contact Your\'s Advertisement; 9902492681

ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಯಶಸ್ವಿಗೆ ಸ್ವಾಗತ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಸಹಕರಿಸಲಿದ್ದಾರೆ.

ನಗರದ ಬುದ್ಧಿಜೀವಿಗಳು ವಿಚಾರವಾದಿಗಳು, ಚಿಂತಕರು ಹಾಗೂ ಸಾಹಿತ್ಯ ಪ್ರೇರಕರು ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಮತ್ತು ಗಣ್ಯರು ಸಹಕಾರ ನೀಡಬೇಕೆಂದು ಶರಣಗೌಡ ಪಾಟೀಲ್ ಪಾಳಾ ಕೋರಿದರು.

ಸ್ವಾಗತ ಸಮಿತಿಯ ಇನ್ನೂಳಿದ ಪದಾಧಿಕಾರಿಗಳ ಹೆಸರುಗಳನ್ನು ನಾಳೆ ಪ್ರಕಟಿಸಲಾಗುವುದು ಎಂದು ಶರಣಗೌಡ ಪಾಟೀಲ್ ಪಾಳಾ ಹಾಗೂ ಪ್ರೊ ಯಶವಂತರಾಯ ಅಷ್ಠಗಿ ತಿಳಿಸಿದ್ದಾರೆ.

ಕಲಬುರಗಿ ನಗರದಲ್ಲಿ ಜೂನ್ ತಿಂಗಳ ಮೂರನೇ ವಾರದಲ್ಲಿ ನಡೆಯಲಿರುವ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರಾಗಿ ನಮ್ಮನ್ನು ನೇಮಿಸುವ ಮೂಲಕ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಬಹು ದೊಡ್ಡ ಜವಾಬ್ದಾರಿ ವಹಿಸಲಾಗಿದೆ.

ಆದ್ದರಿಂದ, ಟ್ರಸ್ಟ್ ಅಧ್ಯಕ್ಷರು ಹಾಗೂ ಸುಮ್ಮೇಳನದ ಸಂಚಾಲಕರು ಸೇರಿದಂತೆ ಸ್ವಾಗತ ಸಮಿತಿಯ ಪದಾಧಿಕಾರಿಗಳ ಹಾಗೂ ಸಾಹಿತ್ಯಾಸಕ್ತರ ಸಹಕಾರದೊಂದಿಗೆ ಅತ್ಯಂತ ಅದ್ದೂರಿ ಮತ್ತು ಯಶಸ್ವಿ ಸಮ್ಮೇಳನ ಮಾಡಲು ಸಂಪೂರ್ಣವಾಗಿ ಶ್ರಮಿಸಲಾಗುವುದು ಎಂದು ಸ್ವಾಗತ ಸಮಿತಿಯ ಅಧ್ಯಕ್ಷರಾದ ನೀಲಕಂಠರಾವ ಮುಲಗೆ ಹಾಗೂ ಕಾರ್ಯಾಧ್ಯಕ್ಷರಾದ ದಿಲೀಪ ಆರ್ ಪಾಟೀಲ್ ಹೇಳಿದ್ದಾರೆ.

ಈ ಸಂದರ್ಭದಲ್ಲಿಶರಣಗೌಡ ಪಾಟೀಲ ಪಾಳಾ, ಡಾ.ಆನಂದ ಸಿದ್ಧಮಣಿ, ಮಲ್ಲಣ್ಣ ಕುಲಕರ್ಣಿ ಕೋಳಕೂರ, ಮೇಘರಾಜ ಅರಳಿ, ಗೌಡಪ್ಪಗೌಡ ಪಾಟೀಲ, ಅಣವೀರ ಪಾಟೀಲ,ಲಿಂಗರಾಜ ಸಿರಗಾಪೂರ, ಡಾ ಕೆ ಗಿರಿಮಲ್ಲ, ಡಾ.ಶರಣಬಸಪ್ಪ ವಡ್ಡನಕೇರಿ, ಪ್ರಕಾಶ ಕುರನಳ್ಳಿ, ಶಾಂತಲಿಂಗ ಪಾಟೀಲ, ದಯಾನಂದ ಪಾಟೀಲ, ರಾಜು ಜೈನ್. ಮಾಪಣ್ಣ ತಳಕೇರಿ, ಶಿವಯೋಗಿ ಭಜಂತ್ರಿ, ಬಸವರಾಜ ದಂಡಿನ, ವಿರುಪಾಕ್ಷಯ್ಯ ಸ್ವಾಮಿ ಗೌಡಗಾಂವ, ಶಿವಲಿಂಗಯ್ಯ ಸ್ವಾಮಿ ಗರೂರ್,ಅಣ್ಣಾರಾಯ ಮತ್ತಿಮಡು,ನಿತ್ಯಾನಂದ ಬಳಬಟ್ಟಿಮಠ,ಸಾಯಬಣ್ಣ ನೀಲೂರಪ್ರಸಾದ್ ಪಟ್ಟಣಕರ್,
ಅಂಬಾರಾಯ ಕೋಣೆ, ಪ.ಮಾನು ಸಗರ್, ಮಲ್ಲಿಕಾರ್ಜುನ್ ಇಟಗಿ, ಅಣ್ಣಾರಾಯ ಜಾಪುರ್, ಗಿರೀಶ್ ಗೌಡ ಇನಾಮ್ದಾರ್, ಬಸವಂತರಾಯ ಕೊಳಕೂರ್, ಎಚ್ ಎಸ್ ಬರಗಾಲಿ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

೧೨ ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯ ತತ್ವಾದರ್ಶಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಪ್ರೊ.ಯಶವಂತರಾಯ ಅಷ್ಠಗಿ, ಸಂಚಾಲಕರು. ಕಲಬುರಗಿ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here