ಮಹಾಗಾಂವದ ಮಾದರಿ ಮನೆತನದ ಪುತ್ರನನ್ನು ವಿಧಾನ ಪರಿಷತ್ ಗೆ ಗೆಲ್ಲಿಸಿ: ಸಂಸದ ಉಮೇಶ್ ಜಾಧವ್

0
71

ಕಲಬುರಗಿ: ಭಾರತ ದೇಶದಲ್ಲಿ ಹಾಗೂ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಮಾದರಿ ರಾಜಕೀಯ ಮಾಡಿ ಹೆಸರು ಪಡೆದ ಮಹಾಗಾಂವ ಮನೆತನದ ಸುಪುತ್ರನನ್ನು (ಅಮರನಾಥ ಪಾಟೀಲ್) ಈಶಾನ್ಯ ಕರ್ನಾಟಕ ಪದವೀಧರ ಮತಕ್ಷೇತ್ರದ ಅಭ್ಯರ್ಥಿಯನ್ನಾಗಿ ಆರಿಸಿ ಕಳುಹಿಸುವ ಜವಾಬ್ದಾರಿ ಪದವೀಧರ ಮೇಲಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದರು.

ಕಮಲಾಪುರ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಹಾಗಾಂವ ಸರಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕೇಂದ್ರದ ಕಾಲೇಜಿನಲ್ಲಿ ಗುರುವಾರ ಪದವೀಧರರನ್ನುದ್ದೇಶಿಸಿ ಮಾತನಾಡಿ ಮಹಾಗಾಂವ ಗ್ರಾಮದಲ್ಲೂ ಆದರ್ಶ ರಾಜಕಾರಣಕ್ಕೆ ಚಂದ್ರಶೇಖರ್ ಪಾಟೀಲ್ ಹಾಗೂ ನೀಲಕಂಠ ಪಾಟೀಲ್ ಮನೆತನ ಕೀರ್ತಿ ಪಡೆದಿತ್ತು ಆ ಮನೆತನದಿಂದ ಬೆಳೆದು ಬಂದ ಮತ್ತು ಸಜ್ಜನಿಕೆಯ ರಾಜಕಾರಣವನ್ನು ಮಾಡಿದ ಅಮರನಾಥ ಪಾಟೀಲ್ ರನ್ನು ಈಶಾನ್ಯ ಪದವೀಧರ ಮತಕ್ಷೇತ್ರದಿಂದ ಆಯ್ಕೆ ಮಾಡಿ ವಿಧಾನ ಪರಿಷತ್ತಿಗೆ ಕಳುಹಿಸಿಕೊಡುವ ಮಹತ್ತರ ಹೊಣೆ ಪದವೀಧರರು ಮತ್ತು ಶಿಕ್ಷಕರ ಕೈಯಲ್ಲಿದೆ. ಮತಪತ್ರದಲ್ಲಿ ಅವರನಾಥ ಪಾಟೀಲರ ಕ್ರಮ ಸಂಖ್ಯೆ ಒಂದರ ಮುಂದೆ ಒಂದು ಲೈನ್ ಅಥವಾ ಕನ್ನಡದ ಅಂಕಿ ಒಂದು ಇಲ್ಲವಾದಲ್ಲಿ ರೋಮನ್ ಅಂಕೆಯಲ್ಲಿ ಒಂದು ಎಂಬುದನ್ನು ಬರೆದು ಪ್ರಶಸ್ತಿದ ಮತಗಳ ನೀಡಬೇಕಾಗಿದೆ ಎಂದರು.

Contact Your\'s Advertisement; 9902492681

ಕೆಲವೊಮ್ಮೆ ಪ್ರಬುದ್ಧ ಮತದಾರರಿದ್ದರೂ ಮತ್ತೆ ಚಲಾವಣೆಯ ವೇಳೆ ಮಾಡುವ ತಪ್ಪಿನಿಂದ ಮತಗಳು ಆ ಸಿಂಧುಗುಳ್ಳುವ ಸಂಭವವಿದೆ. ಅಂತಹ ಸಂದರ್ಭವನ್ನು ರಾಷ್ಟ್ರಪತಿ ಚುನಾವಣೆಗಳ ಲ್ಲಿ ನಮ್ಮ ಸಂಸದರು ತಪ್ಪೇ ಸಗಿದ ಪ್ರಸಂಗವಿದೆ. ಆದುದರಿಂದ ಎಚ್ಚರಿಕೆಯಿಂದ ಕನ್ನಡ ಅಂಕಿ ಅಥವಾ ರೋಮನ್ ಅಂಕಿಯಲ್ಲಿ ಮೊದಲ ಪ್ರಾಶಸ್ತ್ಯದ ಒಂದು ಸಂಖ್ಯೆಯನ್ನು ಮತಪತ್ರದಲ್ಲಿ ಗುರುತಿಸಿ ಮತ ಚಲಾವಣೆ ಮಾಡಬೇಕಾಗಿದೆ. ಮತಪತ್ರದಲ್ಲಿ ಅಭ್ಯರ್ಥಿಯ ಹೆಸರು ಹಾಗೂ ಪಕ್ಷದ ಹೆಸರು ಮಾತ್ರ ಮುದ್ರಣಗೊಂಡಿರುತ್ತದೆ. ಇತರ ಯಾವುದೇ ಚಿಹ್ನೆಗಳು ಇರುವುದಿಲ್ಲ ಎಂದು ತಿಳಿಸಿದರು.

ಆದುದರಿಂದ ಒಂದು ಮತವು ನಷ್ಟವಾಗದಂತೆ ಕಲ್ಬುರ್ಗಿ ಜಿಲ್ಲೆಯಿಂದ ಒಟ್ಟು ಸುಮಾರು 38 ಸಾವಿರಷ್ಟಿರುವ ಮತದಾರರಲ್ಲಿ 30 ಸಾವಿರ ಮತಗಳನ್ನು ಬಿಜೆಪಿಗೆ ನೀಡಿ ಗೆಲ್ಲಿಸಬೇಕು. ಕಳೆದ ಹಲವಾರು ದಿನಗಳಿಂದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದು ಐನಾಪುರ, ಕಾಳಗಿ, ಚಿಂಚೋಳಿ, ಸೇಡಂ ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿದಾಗ ಬಿಜೆಪಿ ಅಭ್ಯರ್ಥಿಯ ಪರ ಪದವೀಧರರು ಹೆಚ್ಚಿನ ಒಲವು ತೋರಿದ್ದು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಮರನಾಥ ಪಾಟೀಲರು ಈ ಹಿಂದಿನ ಆರು ವರ್ಷಗಳಲ್ಲಿ ವಿಧಾನ ಪರಿಷತ್ತಿನಲ್ಲಿ ಪದವೀಧರರನ್ನು ಹಾಗೂ ಶಿಕ್ಷಕರನ್ನು ಪ್ರತಿನಿಧಿಸಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುವ ಪ್ರಶ್ನೆಗಳನ್ನು ಕೇಳಿ ಉತ್ತಮ ಸಾಧನೆ ಮಾಡಿದ ರೆಕಾರ್ಡು ಹೊಂದಿದ್ದಾರೆ ಅಂಥವರಿಗೆ ಇನ್ನೊಂದು ಅವಕಾಶವನ್ನು ನೀಡುವುದಲ್ಲದೆ ನೆರೆದ ಪದವೀಧರರು ತಮ್ಮ ಬೀಗರು ನೆಂಟರು ಅಭಿಮಾನಿಗಳು ಕೂಡ ಮತ ಚಲಾಯಿಸುವಂತೆ ಮನವಿ ಮಾಡಬೇಕು. ಸಜ್ಜನಿಕೆಯ ಮತ್ತು ಅಭಿವೃದ್ಧಿ ಪರವಾಗಿರುವ ಅಮರನಾಥ ಪಾಟೀಲ್ ರನ್ನು ಆಯ್ಕೆ ಮಾಡುವ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಜಾಧವ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಶಾಸಕರಾದ ಬಸವರಾಜ್ ಮತ್ತಿಮುಡು, ಯುವ ಮುಖಂಡರಾದ ನಿತಿನ್ ಗುತ್ತೇದಾರ್ ಮಾತನಾಡಿ ಮತಯಾಚಿಸಿದರು. ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ನಂತರ ಮಹಾಗಾಂವ ಕ್ರಾಸ್ ನಲ್ಲಿ ಮಹಾಗಾಂವ ಕಲ್ಯಾಣ ಮಂಟಪದಲ್ಲಿ ಪ್ರಬುದ್ಧ ಮತದಾರರನ್ನು ಉದ್ದೇಶಿಸಿ ಪ್ರಚಾರ ಸಭೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here