ಪದವೀಧರರಿಗೆ ಬೇಟಿ ಮಾಡಿ ಪಕ್ಷೇತರ ಅಭ್ಯರ್ಥಿ ಮತಯಾಚನೆ

0
28

ಶಹಾಬಾದ: ಕಲ್ಯಾಣ ಕರ್ನಾಟಕದ ಪದವೀಧರರ ಸಮಸ್ಯೆಗಳ ಬಗ್ಗೆ ಯಾವ ರಾಜಕೀಯ ಪಕ್ಷದ ಅಭ್ಯರ್ಥಿಗಳು ಧ್ವನಿ ಎತ್ತಿಲ್ಲ.ಆದ್ದರಿಂದ ಈ ಬಾರಿ ತಮ್ಮ ಸಮಸ್ಯೆಗಳ ಧ್ವನಿಯಾಗಲು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಕಣದಲ್ಲಿದ್ದೆನೆ ಎಂದು ವಿಧಾನ ಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸತೀಶ ಕೋಬಾಳಕರ್ ಹೇಳಿದರು.

ಅವರು ಗುರುವಾರ ವಿಧಾನ ಪರಿಷತ್ ಚುನಾವಣೆ ನಿಮಿತ್ತ ನಗರದ ಪದವೀಧರರಿಗೆ ಬೇಟಿ ಮಾಡಿ ಮತಯಾಚನೆ ಮಾಡುವಂತೆ ಮನವಿ ಮಾಡಿ ಮಾತನಾಡಿದರು.

Contact Your\'s Advertisement; 9902492681

ಕಳೆದ ಬಾರಿ ಮತದಾರರು ಕಾಂಗ್ರೆಸ್‍ನ ಚಂದ್ರಶೇಖರ ಪಾಟೀಲರನ್ನು ಆಯ್ಕೆ ಮಾಡಿದ್ದರೇ ಅವರು ಸದನದಲ್ಲಿ ಒಂದು ಪ್ರಶ್ನೆಯನ್ನು ಕೇಳಿಲ್ಲ.ಪದವೀಧರರ ಸಮಸ್ಯೆಗಳ ಕುರಿತು ಮಾತನಾಡಿಲ್ಲ.ಅವರ ಸಮಸ್ಯೆಗಳಿಗೆ ಧ್ವನಿಯಾಗಲಿಲ್ಲ.ಆದ್ದರಿಂದ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಜೂ. 3ರಂದು ನಡೆಯಲಿರುವ ಚುನಾವಣೆಯಲ್ಲಿ ವಿದ್ಯಾವಂತರಾದ ಮತದಾರರು ತಾವು ನನಗೆ ಬೆಂಬಲಿಸುವ ಮೂಲಕ ಈ ಭಾಗದ ಪದವೀಧರರ ಸಮಗ್ರ ಅಭಿವೃದ್ಧಿಗಾಗಿ ಸಹಕರಿಸಬೇಕೆಂದು ಮನವಿ ಮಾಡಿದರು.

ಮಹಾದೇವ ನಾಲವಾರಕರ್ ಮಾತನಾಡಿ,ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಸತೀಶ ಕೋಬಾಳಕರ್ ಅವರಿಗೆ ತಮ್ಮ ಅಮೂಲ್ಯ ಮತವನ್ನು ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ನಾಗಪ್ಪ ರಾಯಚೂರಕರ್, ಮಲ್ಲಿಕಾರ್ಜುನ, ಪ್ರವೀಣ ರಾಜನ್, ಚನ್ನಬಸಪ್ಪ ಕೊಲ್ಲೂರ್,ಸಾಯಿಬಣ್ಣ ಗುಡುಬಾ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here