ಶೈಕ್ಷಣಿಕ ಧನ ಸಹಾಯ ಪಡೆಯಲು ಅವಧಿ ವಿಸ್ತರಿಸಲು ಆಗ್ರಹ

0
24

ಶಹಾಬಾದ: ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2023-24ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಜಿ ಸಲ್ಲಿಸುವ ರಿಜಿಸ್ಟರ್ ಮಾಡುವ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಮಿತಿ ವತಿಯಿಂದ ಕಟ್ಟಡ ಮತ್ತು ನಿತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಕಾರ್ಮಿಕ ನಿರೀಕ್ಷಕರ ಮೂಲಕ ಮನವಿ ಪತ್ರ ಸಲ್ಲಿಸಿದರು.

ನೊಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2023-24ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಅರ್ಜಿ ಸಲ್ಲಿಸಲು ಕಲ್ಯಾಣ ಮಂಡಳಿಯು 16ನೇ ಮಾರ್ಚದಿಂದ ಮೇವರೆಗೆ ಅವಕಾಶ ಕಲ್ಪಿಸಲಾಗಿತ್ತು.ಇದರ ಜತೆಗೆ ಸೇವಾಸಿಂದು ಗುರುತು ಚೀಟಿಯನ್ನು ಮಂಡಳಿಯ ತಂತ್ರಾಂಶದಲ್ಲಿ ರಿಜಿಸ್ಟರ್ ಮಾಡಲು ಜೂನ್ 30ವರೆಗೆ ಅವಕಾಶ ನೀಡಲಾಗಿದೆ.ಈಗಾಗಲೇ ವಿದ್ಯಾರ್ಥಿ ವೇತನ ಸಲ್ಲಿಸುವ ತಂತ್ರಾಶದಲ್ಲಿ ರಿಜಿಸ್ಟ್ ಮಾಡುವ ಅರ್ಜಿ ನಮೂನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

Contact Your\'s Advertisement; 9902492681

ಸರ್ವರ್ ಸಮಸ್ಯೆ ಮತ್ತು ತಂತ್ರಾಂಶ ಮಧ್ಯದಲ್ಲಿ ಸ್ಥಗಿತಗೊಳ್ಳುತ್ತಿದೆ.ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿರುವುದಿಲ್ಲ.ಆದ್ದರಿಂದಶೈಕ್ಷಣಿಕ ಧನ ಸಹಾಯ ಪಡೆಯಲು ಅರ್ಜಿ ಸಲ್ಲಿಸುವ ರಿಜಿಸ್ಟರ್ ಮಾಡುವ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿದರು.

ಅಧ್ಯಕ್ಷ ರಾಮು ಜಾಧವ, ಖಜಾಂಚಿ ಪ್ರಕಾಶ ಕುಸಾಳೆ, ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ವಿಮಲಾಬಾಯಿ, ನಸರೀನ್, ಲಕ್ಷ್ಮಿಬಾಯಿ, ಕಮಲಾಬಾಯಿ, ಸರಿನಾಭಾನು ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here