4 ದಿನಗಳ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮ

0
18

ಕಲಬುರಗಿ: ನಗರದ ಅಲ್ ಬದರ್ ದಂತ ಕಾಲೇಜು ಒರಲ್ ಮೆಡಿಸಿನ್ ಮತ್ತು ರೆಡಿಯಾಲಜಿ ವಿಭಾಗ ಮತ್ತು ಆಸ್ಪತ್ರೆಯು ಐ.ಎ.ಓ.ಎ.ಆರ್ ಕರ್ನಾಟಕ ಶಾಖೆಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್ ಗ್ರೂಪ್ ಪ್ರಾಯೋಜಿಸಿರುವ ದಂತ ವೈದ್ಯಶಾಸ್ತ್ರ ತಂತ್ರಜ್ಞಾನ ಸಕ್ರಿಯಗೊಳಿಸಿದ ಬೋಧನೆ ಕಲಿಕೆ ಮತ್ತು ಮೌಲ್ಯಮಾಪನ ಕುರಿತು 4 ದಿನಗಳ ಫ್ಯಾಕಲ್ಟಿ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಿತು.

ಕಾರ್ಯಕ್ರಮವು ಡಿಜಿಟಲ್ ತಂತ್ರಜ್ಞಾನದ ಬಳಕೆ ಮತ್ತು ಜನರೇಟಿವ್ ಕೃತಕ ಬುದ್ಧಿಮತ್ತೆಯ ಬಳಕೆಯೊಂದಿಗೆ ವಿವಿಧ ನವೀನ ಬೋಧನಾ ಕಲಿಕೆ ಮತ್ತು ಮೌಲ್ಯಮಾಪನ ವಿಧಾನಗಳನ್ನು ಹೈಲೈಟ್ ಮಾಡಿತು. ನಂತರ ಕೆಲಸದ ಸ್ಥಳದ ಡೈನಮಿಕ್ಸ್ ಕುರಿತು ಕಾರ್ಯಗಾರ ಮತ್ತು ಕಲಬುರಗಿಯ ಜಿಮ್ಸ್ ನಲ್ಲಿರುವ ಬಹು ಶಿಸ್ತಿನ ಸಂಶೋಧನಾ ಘಟಕಕ್ಕೆ ಭೇಟಿ ನೀಡಿತು. ನಾಗಪುರ್ ಬೆಳಗಾವಿ ಬೀದರ್ ಮತ್ತು ಕಲಬುರಗಿಯಿಂದ ಉಪನ್ಯಾಸಕರು ಆಗಮಿಸಿದರು.

Contact Your\'s Advertisement; 9902492681

ಕರ್ನಾಟಕ ತೆಲಂಗಾಣ ಮಹಾರಾಷ್ಟ್ರದ ಡೆಂಟಲ್ ಕಾಲೇಜುಗಳ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಕೆಬಿಎನ್ ವಿಶ್ವವಿದ್ಯಾನಿಲಯದ ಪ್ರೊ. ಡಾ. ಪಿ. ಎಸ್. ಶಂಕರ್ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಪ್ರೊಚ್ಚನ್ಸ್ ಲರ್ ಪ್ರೊಫೆಸರ್ ವೈ ಎಂ ಜಯರಾಜ್ ಜೀಮ್ಸ್ ಡಿನ ನಿರ್ದೇಶಕ ಡಾ. ಉಮೇಶ್ ಪ್ರಾಂಶುಪಾಲ ಡಾ. ಸೈಯದ್ ಜಕಾವುಲ್ಲ ಉಪ ಪ್ರಾಂಶುಪಾಲ ಡಾಕ್ಟರ್ ಅರ್ಷದ್ ಹುಸೇನ್ ಮತ್ತು ಸಂಘಟನಾ ಅಧ್ಯಕ್ಷ ಪ್ರೊಫೆಸರ್ ಡಾ. ಸೈಯದ ಆರ್ಸಿಯ ಆರಾ ಉಪಸ್ಥಿತಿಯಲ್ಲಿ ಡಾಕ್ಟರ್ ಎಂ ಎ ಮುಜಿಬ್ ಅಧ್ಯಕ್ಷತೆ ವಹಿಸಿದರು.

ಪ್ರತಿನಿಧಿಗಳ ಉತ್ತಮ ಪ್ರತಿಕ್ರಿಯೆಯೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here