ಸಪ್ತ ನೇಕಾರರ ಕಚೇರಿಗೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಭೇಟಿ

0
42

ಕಲಬುರಗಿ; ಈಶಾನ್ಯ ಪದವಿಧರರ ಮತ ಕ್ಷೇತ್ರದ ಅಭ್ಯರ್ಥಿಯಾದ ಅಮರನಾಥ ಪಾಟೀಲ್ ರವರು ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆ ಕಚೇರಿಗೆ ಭೇಟಿ ನೀಡಿ ಮತಯಾಚಿಸಿದರು.

ಕಳೆದ 3 ದಶಕಗಳಿಂದ ಕ.ಕ ಭಾಗದಲ್ಲಿ ನೇಕಾರರು ಬಿಜೆಪಿ ಜೊತೆ ಇದ್ದ ಕಾರಣವೇ, ಇಂದು ಶರಣರ ಕೃಪಾಶೀರ್ವಾದ ದಿಂದ PM Mitra ಯೋಜನೆ ಕಲಬುರಗಿ ಬಂದಿದೆ, ಅದನ್ನು ಉಳಿಸಿ, ಈ ಭಾಗದ ಪಧವಿದರ ನೇಕಾರ ಯುವಕರಿಗೆ ಉದ್ಯೋಗ ನೀಡುವ ಕೆಲಸವಾಗಲು,ಈ ಭಾಗದ ನೇಕಾರರ ಅಸ್ತಿತ್ವ ಉಳಿಸಿ,ಬೆಳೆಸುವ ನಿಟ್ಟಿನಲ್ಲಿ ಮತ್ತು ಅಭಿವೃದ್ಧಿ ವಾಗಿ ಶೈಕ್ಷಣಿಕ ವಲಯದಲ್ಲಿ, ನೇಕಾರರ ಮೂಲ ಉದ್ಯೋಗ ಕಲಿಕೆಗಾಗಿ ಟೆಕ್ಸಟೈಲ್ಸ್ ಕೋಸ್೯ ಪ್ರಾರಂಭಿಸಿಲು ಶರ್ಮಿಸಬೇಕು ಎಂದು ಸಂಸ್ಥಾಪಕ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಪ್ರಾಸ್ತಾವಿಕವಾಗಿ ಮತನಾಡಿ ಮನವಿ ಮಾಡಿದ್ದರು.

Contact Your\'s Advertisement; 9902492681

ನಂತರ ಅಭ್ಯರ್ಥಿ ಯಾದ ಅಮರನಾಥ ಪಾಟೀಲ ಮಾತನಾಡಿ, ನಿಮ್ಮೆಲ್ಲರಸೌಹಾರ್ದತೆ ಮತ್ತು ಔದಾರ್ಯಕ್ಕೆ ನಾನು ಸದಾ ತಲೆ ಬಾಗುತ್ತೆನೆ, ಕ.ಕ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸುಮಾರು 7000 ಸಾವಿರ ನೇಕಾರ ಪಧವಿದರರು ನಾಳೆ, ದಿ. 3 ನೇ ಜೂನ್ 2024, ಸೋಮವಾರ ದಂದು ನಿಮ್ಮ ಹಕ್ಕಿನ ಮೊದಲನೇ ಪ್ರಾಶಸ್ತ್ರದ ಮತ ದಾನ ಮಾಡುವ ಮೂಲಕ ನಿಮ್ಮ ಸೇವೆಗೆ ಅವಕಾಶ ಮಾಡಿಕೊಡುವಂತೆ ತಮ್ಮ ಸೇವಾ ಕೇಂದ್ರ ಮುಖಾಂತರ 7 ಜಿಲ್ಲೆಯ ನೇಕಾರ ಪದವಿಧರ ಬಂಧುಗಳಲ್ಲಿ ಬೆಂಬಲ ಮತ್ತು ಆಶೀರ್ವಾದಕ್ಕೆ ಮನವಿ ಮಾಡಿದರು.

ಸಪ್ತ ನೇಕಾರರ ಸಂಚಾಲಕ ಮ್ಯಾಳಗಿ ಚಂದ್ರಶೇಖರ್ ವಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ಪಟ್ಟಸಾಲಿ ಸಮಾಜದ ಕಾರ್ಯದರ್ಶಿ ರೇವಣ್ಣಸಿದ್ದಪ್ಪ ಗಡ್ಡದ,ಕುರಹಿನ ಶೆಟ್ಟಿ ಸಮಾಜದ ಅಧ್ಯಕ್ಷರಾದ ಬಸವರಾಜ ಕರದಳ್ಳಿ, ಉಪಾಧ್ಯಕ್ಷರಾದಕುಶಾಲ ಯಡವಳ್ಳಿ, ನೇಕಾರ ಬಳಗದ ಸದಸ್ಯರಾದ ಚಂದ್ರಕಾಂತ ಯಳಸಂಗಿ, ಶಿವಕುಮಾರ ಅರಳಿಕಟ್ಟಿ, ಜ್ಞಾನಪ್ಪಾ ಹಿಪ್ಪರಗಿ, ಸಾಗರ ನಂದಿ, ತೊಗಟವೀರ ಸಮಾಜದ ಅಧ್ಯಕ್ಷರಾದ ಶ್ರೀನಿವಾಸ ಬಲಪೂರ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here