ಬಸಮ್ಮ ಪಾಟೀಲ್, ಲಕ್ಷ್ಮಿ ಬಿರಾದರ್ ಗೆ ಬಹುಮಾನ

0
7

ಕಲಬುರಗಿ: ತಾಲೂಕಿನ ಮಿಣಜಿಗಿ ಗ್ರಾಮದಲ್ಲಿ ಶ್ರೀ ದತ್ತ ಟುಟೋರಿಯಲ್ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿದ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಪಡೆದ ಶಿಬಿರದ ವಿದ್ಯಾರ್ಥಿನಿಯರಾದ ಬಸಮ್ಮ ಪಾಟೀಲ್ ಅವರಿಗೆ ರೂ. 5,000 ಹಾಗೂ ದ್ವಿತೀಯ ಸ್ಥಾನ ಪಡೆದ ಲಕ್ಷ್ಮಿ ಬಿರಾದರ್ ವಿದ್ಯಾರ್ಥಿನಿಗೆ 2500 ರೂ. ಬಹುಮಾನ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗೊಳಾ (ಬಿ) ಶಿಕ್ಷಕ ಶರಣು ಬಿರಾದಾರ್ ಮತ್ತು ಶಿಕ್ಷಣ ಇಲಾಖೆ ಆಯುಕ್ತರಾದ ಗೋದಾವರಿ ಎಸ್. ಪಾಟೀಲ ಅವರು ಸಂಸ್ಥೆಯನ್ನು ಮತ್ತು ವಿದ್ಯಾರ್ಥಿಗಳನ್ನೋದ್ದೇಶಿಸಿ ಮಾತನಾಡುತ್ತಾ ಈ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದೆಂದು ತಿಳಿಸಿದರು.

Contact Your\'s Advertisement; 9902492681

ಅನನ್ಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಪ್ರಾಂಶುಪಾಲ ಡಾ. ಶರಣು ಬಿ. ಹೊನ್ನಗೆಜ್ಜಿ (ಪೂಜಾರಿ) ಇವರು ಮಾತನಾಡಿ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ವಿದ್ಯಾರ್ಥಿಯಾದ ಸಂಗಮನಾಥ ನಾಟೀಕಾರ ಅವರು ಶ್ರೀ ದತ್ತ ಟುಟೋರಿಯಲ್ ಈ ಸಂಸ್ಥೆ ತೆಗಿದಿದ್ದಾರೆ ಈ ಸಂಸ್ಥೆಗೆ ಯಾವಾಗಲೂ ಪೆÇ್ರೀತ್ಸಾಹಿಸುತ್ತೇವೆಂದು ಹೇಳಿದರು.

ಈ ಸಂಸ್ಥೆಯ ಏಳಿಗೆಯ ಉದ್ದೇಶದಿಂದ ತನು, ಮನ, ಧನ ದಿಂದ ಸಹಕರಿಸಿದರು. ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಈ ಟ್ಯುಟೋರಿಯಲ್ ನಲ್ಲಿ ತರಬೇತಿ ಪಡೆದ ನಾವೇ ಧನ್ಯರು ಎಂದು ಹೇಳುತ್ತಾ ಶಿಬಿರದ ಬಗ್ಗೆ ತಮ್ಮ ಅನಿಸಿಕೆಯನ್ನು ಹೊನ್ನಗೆಜ್ಜಿ ಅವರು ವ್ಯಕ್ತಪಡಿಸಿದರು.

ಸಂಸ್ಥೆಯ ಸಂಸ್ಥಾಪಕರಾದ ಸಂಗಮನಾಥ್ ಬಿ ನಾಟಿಕರ್ ಅವರು ಮಾತನಾಡುತ್ತಾ 2023-24ನೇ ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಪಡೆದ ಬಸಮ್ಮ ಗುಂಡಣ್ಣ ಪಾಟೀಲ್ ವಿದ್ಯಾರ್ಥಿನಿಗೆ 5,000 ಹಾಗೂ ದ್ವಿತೀಯ ಸ್ಥಾನ ಪಡೆದ ಲಕ್ಷ್ಮಿ ವೀರಣ್ಣ ಬಿರಾದರ್ ವಿದ್ಯಾರ್ಥಿನಿಗೆ 2500 ರೂಪಾಯಿಗಳು ಬಹುಮಾನ ರೂಪದಲ್ಲಿ ನೀಡಿ ಶಿಬಿರ ಯಶಸ್ವಿಗೊಳ್ಳಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಹಲವು ಉಪನ್ಯಾಸಕರು, ಎಸ್‍ಡಿಎಂಸಿ ಅಧ್ಯಕ್ಷರು, ಗ್ರಾಮದ ಮುಖಂಡರು ಹಾಗೂ ಈ ಶಿಬಿರದದಲ್ಲಿ 200 ವಿದ್ಯಾರ್ಥಿಗಳು ಹಾಜರಿದ್ದರು. ಅನಿಲ್ ಆರ್ ನಾಯ್ಕೋಡಿ ನಿರೂಪಿಸಿದರು, ಬಸವರಾಜ್ ಜಗತ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here