ಮರ ಬೆಳೆಸಿ ಪರಿಸರ ಉಳಿಸುವುದು ಎಲ್ಲರ ಜವಬ್ದಾರಿಯಾಗಿದೆ; ನ್ಯಾ. ಮಾರುತಿ ಕೆ

0
6

ಸುರಪುರ: ಇಂದು ವಾತಾವರಣ ಕಲುಷಿತಗೊಳ್ಳುತ್ತಿದೆ,ಬಿಸಿಲ ಧಗೆ ಹೆಚ್ಚುತ್ತಿದೆ ಇದಕ್ಕೆ ಮರ ಬೆಳೆಸದೆ ಪರಿಸರ ನಾಶ ಮಾಡುತ್ತಿರುವುದು ಕಾರಣವಾಗಿದೆ,ಅದಕ್ಕಾಗಿ ಎಲ್ಲರು ಮರ ಬೆಳೆಸುವ ಮೂಲಕ ಪರಿಸರ ಉಳಿಸುವುದು ಎಲ್ಲರ ಜವಬ್ದಾರಿಯಾಗಿದೆ ಎಂದು ದಿವಾಣಿ ನ್ಯಾಯಾಧೀಶ ಮಾರುತಿ ಕೆ ತಿಳಿಸಿದರು.

ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ನ್ಯಾಯವಾದಿಗಳ ಸಂಘ,ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇವರುಗಳ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ಮರ ಮನುಷ್ಯನ ಜೀವ ರಕ್ಷಣೆ ಮಾಡುತ್ತದೆ,ಕಾರ್ಬನ್ ಡೈ ಆಕ್ಸೈಡ್‍ನ್ನು ಹೀರಿಕೊಂಡು ನಮಗೆಲ್ಲರಿಗೆ ಆಮ್ಲಜನಕವನ್ನು ನೀಡುತ್ತಿದೆ,ಶುದ್ಧ ಗಾಳಿ ದೊರೆಯಬೇಕಾದರೆ ನಾವೆಲ್ಲರು ಮರ ಬೆಳೆಸುವುದು ಮುಖ್ಯವಾಗಿದೆ.ಅದಕ್ಕಾಗಿಯೇ ಪ್ರತಿ ವರ್ಷ ಜೂನ್ 5 ರಂದು ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಹೆಚ್ಚುವರಿ ದಿವಾಣಿ ನ್ಯಾಯಾಧೀಶರಾದ ಬಸವರಾಜ ಅವರು ಮಾತನಾಡಿ,ಇಂದು ನಾವೆಲ್ಲರು ಒಂದೊಂದು ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ.ಕಳೆದ ತಿಂಗಳಷ್ಟೆ ತಾಪಮಾನದ ಏರಿಕೆಯಿಂದ ಎಷ್ಟೊಂದು ಬಿಸಿಲಿನ ಧಗೆಯನ್ನು ಕಂಡಿದ್ದೇವೆ,ಅದನ್ನು ತಗ್ಗಿಸಲು ಮರ ಬೆಳೆಸುವುದು ಅಗತ್ಯವಾಗಿದೆ. ಅದಕ್ಕಾಗಿ ಇಂದು ನಾವೆಲ್ಲರು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಅರಣ್ಯ ಅಧಿಕಾರಿ ಬುರಾನುದ್ದಿನ್,ಶರಣಪ್ಪ ಕುಂಬಾರ, ತೋಟಗಾರಿಕೆ ಇಲಾಖೆ ಅಧಿಕಾರಿ ಪರಮೇಶ್,ವಕೀಲರಾದ ಮಹ್ಮದ ಹುಸೇನ್,ಆದಪ್ಪ ಹೊಸಮನಿ,ಎಮ್.ಟಿ ಮಂಗಿಹಾಳ ಸೇರಿದಂತೆ ಅನೇಕ ಜನ ವಕೀಲರು,ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.

ಗೃಹರಕ್ಷಕ ದಳ ವಿಶ್ವ ಪರಿಸರ ದಿನಾಚರಣೆ: ತಾಲೂಕು ಗೃಹರಕ್ಷಕ ದಳದ ವತಿಯಿಂದ ನಗರದ ಶ್ರೀ ಪ್ರಭು ಕಾಲೆಜ್ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ,ಮದ್ಯದ ಬಾಟಲಿಗಳು,ಗಾಜಿನ ಚೂರುಗಳು, ಕಸ ಹಾಗೂ ಮುಳ್ಳಿನ ಗಿಡಗಳನ್ನು ತೆರವುಗೊಳಿಸುವ ಮೂಲಕ ವಿಶೇಷವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಿದರು.ಕಂಪನಿ ಕಮಾಂಡರ್ ಯಲ್ಲಪ್ಪ ಹುಲಿಕಲ್,ಫ್ಲಾಟೂನ್ ಕಮಾಂಡರ್ ವೆಂಕಟೇಶ್ವರ ಸುರಪುರ,ರಮೇಶ ಅಂಬುರೆ,ಶರಣು ಯಾದಗಿರಿ,ಸುರೇಶ ಗೋನಾಲ,ಸುರೇಶ ಕವಡಿಮಟ್ಟಿ,ಗುರುನಾಥ ಜಾಧವ್, ಬಸ್ಸಣ್ಣ,ಹೆಚ್.ರಾಠೋಡ್,ಧರ್ಮರಾಜ್,ಮಾಧುರಿ,ಸೃಷ್ಠಿ,ಬಸಮ್ಮ,ಅವಿತಾ,ರೇಣುಕಾ,ರೇಖಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here