16, 17 ರಂದು ಅಂಬೇಡ್ಕರ್ 133ನೇ ಜಯಂತ್ಯೋತ್ಸದ ಅಂಗವಾಗಿ ಸಂಕಲ್ಪ ಸಮಾವೇಶ

0
48

ಕಲಬುರಗಿ: ವಿಶ್ವ ಜ್ಞಾನಿ, ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸದ ಅಂಗವಾಗಿ “ಪ್ರಭುದ್ದ ಭಾರತಕ್ಕಾಗಿ ಪ್ರಜಾಪ್ರಭುತ್ವ ಉಳಿಸಿ” ಸಂಕಲ್ಪ ಸಮಾವೇಶವನ್ನು ಜೂನ್ 16.ರಂದು ಭಾನುವಾರ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚಿಂಚನಸುರ್ ಗ್ರಾಮದ 133ನೇ ಡಾ. ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಭಾವಿ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ತರುಣ ಸಂಘದ ಅಧ್ಯಕ್ಷರಾದ ಶ್ರೀ ಶಿವಶರಣಪ್ಪ ಸಜ್ಜನ ಅವರು ಜಂಟಿಯಾಗಿ ತಿಳಿಸಿದ್ದಾರೆ.

ಈ ಒಂದು ಕಾರ್ಯಕ್ರಮಕ್ಕೆ ಬಾಬಾಸಾಹೇಬರ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮೊಗನಾದ, ಡಾ.ಅಂಬೇಡ್ಕರ್ ಕುಟುಂಬದ ಕುಡಿ ಅಯುಷ್ಮಾನ್ ರಾಜರಾತ್ನ ಅಂಬೇಡ್ಕರ್ ಅವರು ವಿಶೇಷ ಭಾಷಣಕಾರರಾಗಿ ಆಗಮಿಸುತ್ತಿದ್ದು, ಈ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ ಸಚಿವ ಪ್ರಿಯಾಂಕ ಖರ್ಗೆ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಕಲಬುರಗಿಯ ನೂತನ ಸಂಸದರಾಗಿ ಆಯ್ಕಯಾದ ರಾಧಾಕೃಷ್ಣ ಮತ್ತು ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ಆರಂಭವಾಗಲಿದ್ದು ಸುತ್ತಮುತ್ತಲಿನ ಗ್ರಾಮದ ಸಾವಿರಾರು ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬುದ್ದ ಬಸವ ಅಂಬೇಡ್ಕರ್ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಆದರಿಂದ ಈ ಒಂದು ಬಾಬಾಸಾಹೇಬರ ಜಯಂತಿ ಕಾರ್ಯಕ್ರಮವನ್ನು ಕಲಬುರಗಿ ಹಾಗೂ ಎಲ್ಲಾ ತಾಲೂಕಿನ ಜನ ಭಾಗವಹಿಸಿ ಯಶಸ್ಸುಗೊಳಿಸಬೇಕು ಹಾಗೂ ಮರು ದಿನ 17ಸೋಮುವಾರ ಸಾಯಂಕಾಲ 5:30ಕ್ಕೆ ಬಾಬಾಸಾಹೇಬರ ಜಯಂತಿ ಪ್ರಯುಕ್ತ ಅವರ ಜೀವನಾಧಾರಿತ “ಬಾಬಾಸಾಹೇಬರ ಕೊನೆಯ ದಿನಗಳು” ಎಂಬ ನಾಟಕ ಪ್ರದರ್ಶನವಾಗಲಿದೆ ಈ ನಾಟಕವನ್ನು ಹರಿಕೃಷ್ಣ ಅವರ ನಿರ್ದೇಶನದಲ್ಲಿ ಜರುಗುತ್ತಿದೆ. ಹಾಗಾಗಿ ಬಾಬಾಸಾಹೇಬರ ಈ ಎರಡು ದಿನಗಳ ಜಯಂತಿಕಾರ್ಯಕ್ರಮ ಗಳಲ್ಲಿ ಎಲ್ಲಾ ತಾಲೂಕ ಗ್ರಾಮಗಳ ಎಲ್ಲಾ ಸಮುದಾಯದ ಜನಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here