ಕಲಬುರಗಿ: ರಂಗಮಂದಿರ್ದಲ್ಲಿ ನಡೆದ ಕರ್ನಾಟಕ ಸಂಘಟನಾ ವೇದಿಕೆ ಹೈದ್ರಾಬಾದ್ ಕರ್ನಾಟಕ ಯುವ ಕಲಾವಿದರ ಹಾಗೂ ಸಂಸ್ಕøತಿಕ ನೃತ್ಯ ಸಂಘದ 8 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಮಾಜ ಸೇವೆಸಲ್ಲಿಸುತ್ತಿರುವ ಯುವ ಮುಖಂಡರು ಸದಾ ಸಮುದಾಯದ ಕಾಳಜಿ ಹೊಂದಿರುವ ಯುವ ಮುಖಂಡರಾದ ಶ್ರೀಧರ್ ಎಮ್ ನಾಗನಹಳ್ಳಿ ಮತ್ತು ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲ್ ಅವರನ್ನು ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಕಲಬುರ್ಗಿ ಚಿತ್ರ ನಟ ಬುಲೆಟ್ ರಕ್ಷಕ, ಗ್ರಾಮೀಣ ಮಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮಡು, ಮಹಾಪೌರ ವಿಶಾಲ್ ದರ್ಗಿ, ವೀರಶೈವ ಮಹಾಸಭಾದ ಅಧ್ಯಕ್ಷ ಶರಣಕುಮಾರ್ ಮೋದಿ, ಯುವ ಮುಖಂಡ ಸಂಪತ್ ಹಿರೇಮಠ, ಸಂಘಟನೆ ಅಧ್ಯಕ್ಷ ಗುರು ಬಂಡಿ, ಗುರುರಾಜ್ ಅಂಬಾಡಿ ಇದ್ದರು.