ಜುಲೈ 21ಕ್ಕೆ ವೀರಶೈವ ಸಮಾಜದ ಚುನಾವಣೆ

0
101

ಚಿತ್ತಾಪುರ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಚಿತ್ತಾಪುರ ತಾಲೂಕು ಘಟಕದ ಚುನಾವಣೆ ಜುಲೈ 21ಕ್ಕೆ ನಡೆಯಲಾಗುವುದು ಎಂದು ಉಪಚುನಾವಣಾಧಿಕಾರಿ ವೀರಭದ್ರಪ್ಪ ಹುಮನಬಾದ ಅವರು ತಿಳಿಸಿದ್ದಾರೆ.

ತಾಲೂಕು ಘಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿ ಸದಸ್ಯರಿಗೆ ಚುನಾವಣೆ ನಡೆಯಲಿದ್ದು ಜೂನ್ 27ರಿಂದ ಜುಲೈ 4ರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

Contact Your\'s Advertisement; 9902492681

ಜುಲೈ 5 ರಿಂದ 8ರ ವರೆಗೆ ನಾಮಪತ್ರ ಪರಿಶೀಲನೆ ಹಾಗೂ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಜುಲೈ 21ರಂದು ಭಾನುವಾರ ಬೆಳಿಗ್ಗೆ 8ರಿಂದ ಸಾಯಂಕಾಲ 5ರ ವರೆಗೆ ಮತದಾನ ನಡೆಯಲಿದ್ದು ಮತದಾನದ ನಂತರ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗುವುದು ಎಂದು ಪತ್ರಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9886089057ಗೆ ಸಂಪರ್ಕಿಸಿ ಚುನಾವಣೆಯ ಮಾಹಿತಿಯನ್ನು ಪಡೆಯಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here