ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

0
40

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್ ಹೇಳಿದರು.

ಅವರು ಶನಿವಾರ ಮಾದಿಗ ಸಮಾಜದ ವತಿಯಿಂದ ಡಾ.ಬಾಬುಜಗಜೀವನರಾಮ ಅವರ ಪುಣ್ಯ ಸ್ಮರಣೆ ನಿಮಿತ್ತ ನಗರಸಭೆಯ ಆವರಣದ ಡಾ.ಬಾಬುಜಗಜೀವನರಾಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಜನಪರ ಕಾರ್ಯಕ್ರಮಗಳು ಇಂದಿಗೂ ಮಾದರಿಯಾಗಿವೆ ಎಂದು ಹೇಳಿದರು.

Contact Your\'s Advertisement; 9902492681

ಮಾದಿಗ ಸಮಾಜ ಹಿರಿಯ ಮುಖಂಡ ಶ್ರೀ ಶಿವರಾಜ ಕೋರೆ ಶ್ರೀ ರವಿ ಬೆಳ ಮಗಿ ಲೋಹಿತ್ ಕಟ್ಟಿ ಶರಣಗೌಡ ಪಾಟೀಲ್ ಶರಣು ಬಿ ಪಗ ಲಾ ಪುರ್ ಮುಂತಾದವರು ಉಪಸ್ಥಿತರಿದ್ದರು ‘
ಮಾದಿಗ ಸಮಾಜ ಹಿರಿಯ ಮುಖಂಡ ಶಿವರಾಜ ಕೋರೆ ಹಾಗೂ ಶರಣು ಪಗಲಾಪೂರ ಮಾತನಾಡಿ, ಬಾಬುಜಿ’ ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ.

ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು ಎಂದರು.

ಮುಖಂಡ ರವಿ ಬೆಳಮಗಿ ಹಾಗೂ ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ಮಾತನಾಡಿ,ಬಾಬು ಜಗಜೀವನರಾಮ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here