ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

0
14

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ ಅಂಗವಾಗಿ ಭವ್ಯ ಮೆರವಣಿಗೆ ನಡೆಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ಮನೋಹರ ಬಿ.ಕಂಚಗಾರ ಅವರ ಮನೆಯಿಂದ ಪ್ರಭಾವಳಿಯೊಂದಿಗೆ ನಿರ್ಮಾಣಗೊಂಡ ಮರಗಮ್ಮ ದೇವಿಯ ಮೂರ್ತಿಯನ್ನು ಹಾಗೂ ಮೌನೇಶ ಬಿ.ನಾಲವಾರ ಅವರ ಮನೆಯಿಂದ ದೇವಸ್ಥಾನದ ಮತ್ತು ಘಂಟೆಗಳನ್ನು ತೆಗೆದುಕೊಂಡು ಸುಮಂಗಲೆಯರ ಕುಂಭ ಕಳಸಗಳೊಂದಿಗೆ ದೊಡ್ಡಬಾವಿಗೆ ಗಂಗಾಸ್ನಾನಕ್ಕೆ ಕರೆದುಕೊಂಡು ಹೋಗಲಾಯಿತು.

Contact Your\'s Advertisement; 9902492681

ದೊಡ್ಡ ಬಾವಿಯಲ್ಲಿ ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಯವರ ದಿವ್ಯ ಸಾನಿಧ್ಯದಲ್ಲಿ ಗಂಗಾಸ್ನಾನ ಮುಗಿಸಿ ನಂತರ ದೇವಿಯ ತವರು ಮನೆಯಾದ ನರಸಿಂಗ ಮಾರುತಿರಾವ್ ಪತಂಗೆ ಇವರ ಮನೆಗೆ ಹೋಗಿ ವಿರಮಿಸಿ ನಂತರ ಡೊಳ್ಳು,ವಾದ್ಯಗಳೊಂದಿಗೆ ದೇವಿಯ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಾವಿರಾರು ಜನರು ಭಾಗವಹಿಸಿ ಮರಗಮ್ಮ ದೇವಿಯ ಜಯಘೋಷ ದೊಂದಿಗೆ ಭಂಡಾರವನ್ನು ಎರಚುತ್ತಾ ಜನರು ಹರ್ಷದಿಂದ ಪಾಲ್ಗೊಂಡರು. ಮಧ್ಹ್ಯಾನ ದಿಂದ ಆರಂಭಗೊಂಡ ಮೆರವಣಿಗೆ ರಾತ್ರಿ ಎಂಟು ಗಂಟೆಯ ವರೆಗೆ ನಡೆಯಿತು.ನಂತರ ದೇವಿಯ ಮೂರ್ತಿಯನ್ನು ನೂತನವಾಗಿ ನಿರ್ಮಿಸಲಾಗಿರುವ ದೇವಸ್ಥಾನದ ಆವರಣದಲ್ಲಿ ಕಂಬಳಿಯ ಮೇಲೆ ಮೂರ್ತಿಯನ್ನು ವಿರಾಜಮಾನಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ದೇವಸ್ತಾನದ ಅರ್ಚಕರು ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾವಿರಾರು ಜನ ಭಕ್ತರು ಭಾಗವಹಿಸಿದ್ದರು.ಗಂಗಾಸ್ನಾನದ ಅಂಗವಾಗಿ ಭಾಗವಹಿಸಿದ್ದ ಎಲ್ಲಾ ಸಾವಿರಾರು ಜನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ರಂಗಂಪೇಟೆ,ತಿಮ್ಮಾಪುರ,ಸುರಪುರ,ದೀವಳಗುಡ್ಡ,ಹಸನಾಪುರ,ಸತ್ಯಂಪೇಟೆ,ಲಕ್ಷ್ಮೀಪುರ ಸೇರಿದಂತೆ ಅನೇಕ ಕಡೆಗಳಿಂದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here