ಉತ್ತಮ ಬದುಕಿಗೆ ಶಿಕ್ಷಣವೇ ಆಸರೆ: ಕಲ್ಯಾಣಿ ಯಳಸಂಗಿ ಕರೆ

0
82

ಆಳಂದ: ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕೆಂದರೆ ಶಿಕ್ಷಣವನ್ನು ಪಡೆದ ಮಾತ್ರ ಸಮಾಜದಲ್ಲಿ ಗೌರವ ದೊರಕುತ್ತದೆ ಎಂದು ಪೋಲಿಸ್ ಇಲಾಖೆಯ ಸಿಬ್ಬಂದಿ ಕಲ್ಯಾಣ ಯಳಸಂಗಿ ಕರೆ ಮಕ್ಕಳಿಗೆ ಕರೆ ನೀಡಿದರು.

ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ‘ಕಲಬುರಗಿ ಪ್ರಭ’ ದಿನಪತ್ರಿಕೆಯ ವತಿಯಿಂದ ಸಾಮಾಜಿಕ ಹೋರಾಟಗಾರರು ಹಾಗೂ ಭೀಮ ವಿಜಯ ಪತ್ರಿಕೆಯ ಉಪ ಸಂಪಾದಕರಾದ ಭವ್ಯ ನಾಗರಾಜ ರವರ ಜನ್ಮ ದಿನಾಚರಣೆ ನಿಮಿತ್ಯ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು, ವಿದ್ಯಾರ್ಥಿಗಳು ದಿನನಿತ್ಯ ವಿದ್ಯಾಭ್ಯಾಸ ಮಾಡಿ ತಂದೆ, ತಾಯಿಗಳಿಗೆ ಹಾಗೂ ಕಲಿಸಿದ ಗುರುಗಳಿಗೆ ಹೆಸರನ್ನು ತಂದು ಕೂಡಬೇಕು ಅಂದಾಗ ಮಾತ್ರ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಜೀವನದಲ್ಲಿ ಗುರಿ ಇರಬೇಕು ಹಿಂದೆ ಗುರುಗಳು ಇರಬೇಕು ಅಂದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಇವತ್ತು ವಿಜಯಕುಮಾರ ಜಿಡಗಿ ಅವರು ಭವ್ಯ ನಾಗರಾಜ ಮೇಡಂ ರವರ ಮಾರ್ಗದರ್ಶನ ಪಡೆದು ಸಮಾಜದಲ್ಲಿನ ಮೌಡ್ಯಚಾರಣೆ, ಭ್ರಷ್ಟಾಚಾರದ ವಿರುದ್ಧ ಧ್ವನಿಯಾಗುವಂತ ಪತ್ರಿಕಾ ಮಾದ್ಯಮಕ್ಕೆ ಬಂದಿದ್ದಾರೆ. ಹಾಗೆ ನೀವು ಕೂಡ ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಂಡು ಒಳ್ಳೆಯ ನಾಗರಿಕರಾಗಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಅಂಬೇಡ್ಕರ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಕ್ಕಾಮಹಾದೇವಿ ಶರಣ ಮಾತನಾಡಿದವರು. ಪ್ರಸ್ತುತ ಸಂದರ್ಭಗಳಲ್ಲಿ ಜನ್ಮ ದಿನಾಚರಣೆಯು ತುಂಬಾ ಆಡಂಬರದ ರೀತಿಯಲ್ಲಿ ಆಚರಿಸುವದನ್ನು ನೋಡುತ್ತಿದೇವೆ ಆದರೆ ಇವತ್ತು ‘ಕಲಬುರಗಿ ಪ್ರಭ’ ಪತ್ರಿಕೆ ಭವ್ಯ ನಾಗರಾಜ ಜನ್ಮದಿನಾಚರಣೆಯು ಮಕ್ಕಳಿಗೆ ಉಪಯೋಗವಾಗುವ ನೋಟಬುಕ್ ಹಾಗೂ ಪೆನ್ ಗಳನ್ನು ನೀಡುವ ಮೂಲಕ ಅರ್ಥಪೂರ್ಣ ಜನ್ಮ ದಿನಾಚರಣೆ ಮಾಡುತ್ತಿರುವದು ಮಕ್ಕಳ ಭವಿಷ್ಯದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಂದಿನ ಮಕ್ಕಳೆ ಮುಂದಿನ ದೇಶದ ಸಂಪತ್ತು ಅವರಿಗೆ ಪ್ರೋತ್ಸಾಹಿಸಿ ಬೆಳೆಸುವಂತ ಸಾಮಾಜಿಕ ಕಾರ್ಯಗಳು ಹೆಚ್ಚೆಚ್ಚು ಆಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ದುಂಡಪ್ಪ ಜಮಾದಾರ, ಯಲ್ಲಾಲಿಂಗ ಪೂಜಾರಿ, ಶಾಂತೇಶ್ವರ ಬಿಲ್ಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೋಲಿಸ್ ಇಲಾಖೆಯ ಸಿಬ್ಬಂದಿ ಲಕ್ಷ್ಮೀಪುತ್ರ ಗೌಂಡಿ, ಗ್ರಾ.ಪಂ. ಸದಸ್ಯೆ ಶ್ರೀಮತಿ ಸುರೇಖಾ ಸೂರ್ಯಕಾಂತ ಜಿಡಗಿ, ಆಶಾಕಾರ್ಯಕರ್ತೆ ಚಂದ್ರಭಾಗಮ್ಮ ಮಂಗನಕರ್, ಶಿಕ್ಷಕರಾದ ಪರಮೇಶ್ವರ್ ಕೂಲಾಲಿ, ಅಶೋಕ ಜಮಾದಾರ್, ಸಂಗಮ್ಮ ಪುಕ್ಕನ್, ಪ್ರಭಾವತಿ, ಸುನೀತಾ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಾಸ್ತಾವಿಕವಾಗಿ ವಿಜಯಕುಮಾರ ಜಿಡಗಿ ಮಾತನಾಡಿದರು. ನಿರೂಪಣೆ ಶರಣಬಸಪ್ಪಾ ನಿರ್ಮಲ್ಕರ್, ಸ್ವಾಗತ ಶ್ರೀಕಾಂತ ಗಾಯಕವಾಡ ಹಾಗೂ ವಂದನಾರ್ಪಣೆ ದ್ರಾವಿಡ ನ್ಯಾಮನ್ ನೆರವೇರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here