ಅತಿಥಿ ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಹೆಚ್ಚಿಸಲು ಆಗ್ರಹಿಸಿ ಮನವಿ

0
68

ಶಹಾಬಾದ: ಅತಿಥಿ ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಹೆಚ್ಚಿಸಬೇಕು. ನೇಮಕ ಮಾಡಿದವರಿಗೆ ಆದೇಶ ಪ್ರತಿಗಳನ್ನು ನೀಡಬೇಕು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೋಮವಾರ ಅತಿಥಿ ಶಿಕ್ಷಕರು, ಉಪನ್ಯಾಸಕರು ತರಗತಿಯನ್ನು ಬಹೀಷ್ಕರಿಸಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ನೊಂದ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಾದ ನಮಗೆ ಪ್ರಸ್ತುತ ನೀಡುತ್ತಿರುವ ವೇತನದಿಂದ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತಿದ್ದು, ಜತೆಗೆ ಉದ್ಯೋಗ ಭದ್ರತೆ ಇಲ್ಲದೇ ಅನೇಕ ಸಮಸ್ಯೆಗಳಿಂದ ನರಳುತ್ತಿದ್ದೆವೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ಕಳೆದ 2023 ಮಾರ್ಚ ತಿಂಗಳಿಂದ ಹೆಚ್ಚಾಗಿದ್ದು, ಅವರμÉ್ಟೀ ಕಾರ್ಯಭಾರವವನ್ನು ನಾವು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಿರ್ವಹಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯನ್ನು ಮಾತೃ ಇಲಾಖೆಯೆಂದು ಭಾವಿಸಿ ಅದರ ನಿಯಮ-ನಿರ್ದೇಶನಗಳನ್ನು ಅನುಸರಿಸುವ ತಾವುಗಳು ಅಲ್ಲಿಯಂತೆ ಅತಿಥಿ ಶಿಕ್ಷಕರ ವೇತನದಲ್ಲಿ ಮಾತ್ರ ತಾರತಮ್ಯ ಮಾಡುತ್ತಿರುವುದು ತುಂಬಾ ನೋವಿನ ಸಂಗತಿ.

Contact Your\'s Advertisement; 9902492681

ವಸತಿ ಶಾಲೆಯಲ್ಲಿ ಖಾಯಂ ನೌಕರರμÉ್ಟ ನಾವು ಕೂಡಾ ವಿದ್ಯಾರ್ಥಿಗಳ ಭವಿಷ್ಯಗೋಸ್ಕರ ಕಡಿಮೆ ವೇತನವಿದ್ದರೂ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ವಿದ್ಯಾರ್ಥಿಗಳ ಫಲಿತಾಂಶಕ್ಕಾಗಿ ಕಷ್ಟ ಪಡುತ್ತಿದ್ದೆವೆ. ಸುಮಾರು 2017-18 ಸಾಲಿನಿಂದ ಇಲ್ಲಿಯವರೆಗೆ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕೂಡ ಕೃಪಾಂಕಗಳಾಗಲಿ, ಉದ್ಯೋಗ ಭದ್ರತೆಯಾಗಲಿ, ಯಾವುದೇ ಇತರೇ ಸೌಲಭ್ಯಗಳು ನಮಗೆ ಇರುವುದಿಲ್ಲಾ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರಿಗೆ ಕೊಡುವ ವೇತನವನ್ನು ನಾಗೆ ಕೊಡುತ್ತಿರುವುದು ತುಂಬಾ ಖಂಡನೀಯ, 05,06,07 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಅತಿಥಿ ಶಿಕ್ಷಕರಿಗೆ 10,000/- ವೇತನವಿದ್ದು, 08,09.10ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ 30 ಶಿಕ್ಷಕರಿಗೆ 10,500/- ವೇತನವಿದ್ದು ನಾವು 06 ರಿಂದ 10ನೇ ತರಗತಿವರೆಗೆ ಸುಮಾರು 05 ತರಗತಿಗಳಿಗೆ ಬೋಧನೆ ಮಾಡುತ್ತಿದ್ದು ಜೊತೆಗೆ ಎಮ್.ಓ.ಡಿ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ವೇತನ ತಾರತಮ್ಮ ತುಂಬಾ ಖಂಡನೀಯ.

ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿನ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರಿಗೊ/ಉಪನ್ಯಾಸಕರಿಗೆ ಪ್ರಸ್ತುತ ನೀಡುತ್ತಿರುವ ಅತಿಥಿ ಶಿಕ್ಷಕರ 16,50/- ಉಪನ್ಯಾಸಕರ 18,150/- ಈ ವೇತನವನ್ನು ನಮಗೂ ಕೂಡಾ ಅನ್ವಯವಾಗುವಂತೆ ಹೆಚ್ಚಳ ಮಾಡುವುದರ ಮೂಲಕ ಸೇವಾ ಭದ್ರತೆ ನೀಡಬೇಕು. ಹಾಗಾಗಿ ಈ ನಮ್ಮ ಮನವಿಗೆ ಒಂದು ವಾರದೊಳಗೆ ಸ್ಪಂದಿಸಿ. ಈ ಕೆಳಕಾಣಿಸಿದ ಬೇಡಿಕೆಗಳನ್ನು ಈಡೇರಿಸದೇ ಹೋದರೆ ತರಗತಿಗಳನ್ನು ಬಹಿಷ್ಕರಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ಅಣಿಯಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಈಸಂದರ್ಭದಲ್ಲಿಪಿ.ಎಸ್.ಮೇತ್ರೆ, ಎಸ್.ಪೂಜಾರಿ, ಅಶ್ವಿನಿ,ಶಬಾನಾ ಬೇಗಂ, ಸುರೇಶಕುಮಾರ, ಸುರೇಖಾ.ಪಿ, ತೇಜಸ್ವಿನಿ,ಪ್ರದೀಪಕುಮಾರ,ಅಂಬಿಕಾಮರತೂರ,ವಿಜಯಲಕ್ಷಮಿ,ಸುವನಾ ಪವಾರ್,ಮಹಾದೇವಪ್ಪ, ಸನಾಫರ್ಜೋಜ್,ಪರ್ವಿಬೇಗಂ, ಮಹಮ್ಮದಿ ಇನಾಂದಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here