ಹದಗೆಟ್ಟ ರಸ್ತೆಗಳು ದುರಸ್ಥಿಗೆ ಕರವೇ ಆಗ್ರಹ

0
64

ಕಲಬುರಗಿ : ನಗರದ ರಸ್ತೆಗಳು ಮಳೆಯಿಂದಾಗಿ ಹದಗೆಟ್ಟಿದ್ದು,ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸದರಿ ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಕರವೇ (ಪ್ರವೀಣ ಶೆಟ್ಟಿ) ಬಣದ ಜಿಲ್ಲಾ ಗೌರವಾಧ್ಯಕ್ಷರಾದ ಮಂಜು ಕುಸನೂರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

‌ನಗರದಲ್ಲಿ ಇತ್ತೀಚಿಗೆ ಕೈಗೊಂಡಿರುವ ರಸ್ತೆ ಕಾಮಗಾರಿಗಳು ಕಳಪೆಯಾಗಿದ್ದು, ಇದರಿಂದ ಸುರಿದ ಮಳೆಯಿಂದಾಗಿ ನಗರದ ಎಲ್ಲಾ ರಸ್ತೆಗಳು ಹದಗೆಟ್ಟಿರುತ್ತವೆ. ಉದಾಹರಣೆಗೆ ಅನ್ನಪೂರ್ಣ ಕ್ರಾಸ್‌ನಿಂದ ಖರ್ಗೆ ಪೆಟ್ರೊಲ್ ಪಂಪ್, ಹೊಸ ಆರ್.ಟಿ.ಓ.ಕಛೇರಿಯಿಂದ ಕುಸನೂರ ಗ್ರಾಮದವರೆಗೆ, ಶಹಾಬಾದ ವೃತ್ತದಿಂದ ಪೂಜಾ ಕಾಲೋನಿಯವರೆಗೆ ಹೀಗೆ ನಗರದ ಮುಂತಾದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ ಎಂದು ಅವರು ದೂರಿದರು.

Contact Your\'s Advertisement; 9902492681

ರಸ್ತೆ ಕಾಮಗಾರಿಗಳನ್ನು ಕೈಗೊಂಡಿರುವ ಗುತ್ತಿಗೆದಾರರು ಕಳಪೆಯಾಗಿ ಮಾಡಿರುವುದು ಇದಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಆದ್ದರಿಂದ ತಾವುಗಳು ಈ ಕುರಿತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅವರ ಪರವನಾಗಿಯನ್ನು ರದ್ದುಗೊಳಿಸಬೇಕು ಮತ್ತು ಕಲಬುರಗಿ ನಗರದಲ್ಲಿ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಅವರು ಈ ಮೂಲಕ ಮನವಿ ಮಾಡಿಕೊಂಡರು.

ಒಂದು ವೇಳೆ ಮುಂದಿನ 10 ದಿನದ ಒಳಗಾಗಿ ಎಲ್ಲಾ ರಸ್ತೆಗಳನ್ನು ದುರಸ್ತಿಗೊಳಿಸದಿದ್ದರೆ ಹೊಸ ಆರ್.ಟಿ.ಓ. ಕಚೇರಿ ಎದುರು ಸಾರ್ವಜನಿಕರೊಂದಿಗೆ ಸೇರಿ ರಸ್ತೆ ತಡೆ ಚಳುವಳಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದಾನ ಕಾರ್ಯದರ್ಶಿ ಗೋಪಾಲ ನಾಟೀಕಾರ,ಕಲ್ಯಾಣ ಕರ್ನಾಟ ಸಂಚಾಲಕ ಮನೋಹರ ಬೀರನೂರ,ಕಲ್ಯಾಣ ಕರ್ನಾಟಕ ಉಪಾಧ್ಯಕ್ಷ ಸಂತೋಷ ಚೌಧರಿ,ನಗರ ಉಪಾಧ್ಯಕ್ಷ ಶರಣು ದ್ಯಾಮ,ಸದಸ್ಯರಾದ ಕಿರಾಣ ನಾಟೀಕಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here