ಗ್ರಾಮಕ್ಕೆ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

0
78
oplus_2

ಶಹಾಬಾದ್; ನಗರದ ನೆಹರು ಚೌಕನಲ್ಲಿ ಹೊನಗುಂಟ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು.

ಈ ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‍ಒ ಶಹಾಬಾದ್ ಉಪಾಧ್ಯಕ್ಷರಾದ ದೇವರಾಜ್.ಎಸ್ ರವರು ಮಾತನಾಡುತ್ತ ಕಳೆದ ಹಲವಾರು ವರ್ಷಗಳಿಂದ ಹೊನಗುಂಟ ಗ್ರಾಮಕ್ಕೆ ಬಸ್ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಗ್ರಾಮದ ನೂರಾರು ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಕಲಬುರಗಿ ನಗರಕ್ಕೆ ಹಾಗೂ ಜೇವರ್ಗಿ, ಚಿತ್ತಾಪೂರ ತಾಲೂಕಕ್ಕೆ ಹೋಗುವುದು ತಮಗೆ ತಿಳಿದ ವಿಷಯವಾಗಿದೆ.

Contact Your\'s Advertisement; 9902492681

ವಿದ್ಯಾರ್ಥಿಗಳು ತರಗತಿಗೆ ಸರಿಯಾದ ಸಮಯಕ್ಕೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ಸರಿಯಾದ ಶೈಕ್ಷಣಿಕ ವಿದ್ಯಾಭ್ಯಾಸ ಮಾಡಬೇಕಾದರೆ ಅವರಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಅವಶ್ಯಕತೆ ಇದೆ. ಆದರೆ ಪ್ರತೀ ವರ್ಷ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಬಸ್ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆವಾಗಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದರು.

ನಂತರ ಮಾತನಾಡಿದ ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ ಅರ್.ಜಿ. ರವರು ಮಾತನಾಡುತ್ತ   ಈಗ ಬರುವ ಬಸ್ಸುಗಳು ವಿದ್ಯಾರ್ಥಿಗಳಿಗೆ ಸಮಯಕ್ಕೆ ತಕ್ಕಂತೆ ಬಾರದ ಕಾರಣ ಖಾಸಗಿ ವಾಹನಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ. ವಿದ್ಯಾರ್ಥಿಗಳ ಹತ್ತಿರ ಬಸ್ಸ ಪಾಸ್ ಇದ್ದರೂ ಉಪಯೋಗವಾಗುತ್ತಿಲ್ಲ.

ಆದ್ದಕಾರಣ ತಾವುಗಳು ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಆಗದಿದ್ದಲ್ಲಿ ಮುಂದಿನ ಹಂತದ ಹೋರಾಟಕ್ಕೆ ಅಧಿಕಾರಿಗಳೆ ನೇರ ಹೊಣೆ ಎಂದು ಹೇಳಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಮಾನ್ಯ ತಹಶೀಲ್ದಾರರಾದ ಜಗದೀಶ್. ಚೌರ್. ರವರು ಮನವಿ ಪತ್ರ ಸ್ವೀಕರಿಸಿ ಬಸ್ ನಿಯಂತ್ರಣಾಧಿಕಾರಿ ಜೊತೆ ಮಾತನಾಡಿ ನಾಳೆಯಿಂದಲೇ ಬಸ್ ಸೌಲಭ್ಯ ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಈ ಪ್ರತಿಭಟನೆ ನೇತೃತ್ವವನ್ನು ಶಹಾಬಾದ್ ಕಾರ್ಯದರ್ಶಿ ಅಜಯ್ ಗುರುಜಾಲ್‍ಕರ್ ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿಯಾದ ತುಳಜರಾಮ ಎನ್.ಕೆ, ಸದಸ್ಯರಾದ ಸಿದ್ಧಾರ್ಥ, ಬಾಬುಪವಾರ್, ಚೇತನ್,ವಿದ್ಯಾರ್ಥಿಗಳಾದ ಮಿಲಿನ್,ಲಿಂಗರಾಜ್,ರೇಖಾ,ಸ್ನೇಹಾ,ಜ್ಯೋತಿ,ಸಂತೋಷ,ದ್ರಾವಿಡ್ ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here