ಸಾಹಿತ್ಯಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೆ ಇನ್ನಷ್ಟು ಅನುದಾನ

0
34

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಬಾಪೂಗೌಡ ದರ್ಶನಾಪೂರ ರಂಗಮಂದಿರದ ಅಭಿವೃದ್ಧಿಗೊಳಿಸಿ ಸಾಹಿತ್ಯಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸಲು ಅದಕ್ಕೆ ಅಗತ್ಯವಿದ್ದ ಕಾಮಗಾರಿಗಳನ್ನ ಪೂರ್ಣಗೊಳಿಸಲು ಅನುದಾನ ನೀಡಲಾಗುವುದು ಎಂದು ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅವರು ಭರವಸೆ ನೀಡಿದರು.

ನಗರದ ಕನ್ನಡ ಭವನಕ್ಕೆ ಭೆಟ್ಟಿ ಕೊಟ್ಟ ನಂತರ ಮಾತನಾಡಿದ ಅವರು,  ಈ ಹಿಂದೆ ತಮ್ಮ ತಂದೆಯವರ ಕನಸಿನ ಕೂಸಾದ ಬಾಪೂಗೌಡ ದರ್ಶನಾಪೂರ ರಂಗಮಂದಿರ ನಿರ್ಮಾಣಗೊಂಡು ಅನೇಕ ವರ್ಷಗಳು ಕಳೆದಿವೆ. ಅದರಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಬಾಕಿ ಕಾಮಗಾರಿಗಳಾದ ಸ್ಪಷ್ಟವಾದ ಧ್ವನಿ ಹಾಗೂ ಆಸನಗಳ ವ್ಯವಸ್ಥೆ, ದೃಶ್ಯ ಬೆಳಕು ಹೀಗೆ ಇನ್ನೂ ಅನೇಕ ಬಾಕಿ ಇರುವ ಕೆಲಸ ಕಾರ್ಯಗಳನ್ನು ಬಾಕಿ ಉಳಿದಿದ್ದು, ಅದಕ್ಕೆ ಶೀಘ್ರದಲ್ಲಿ ಪರಿಹಾರ ಒದಗಿಸಿ ಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದರು.

Contact Your\'s Advertisement; 9902492681

ಈ ಕುರಿತು ಅದಕ್ಕೆ ತಗಲುವ ಅಂದಾಜು ವೆಚ್ಚದ ಪಟ್ಟಿಯನ್ನು ತಯ್ಯಾರಿಸಿ ಕೊಡಲು ಪರಿಷತ್ತಿಗೆ ಸೂಚಿಸಿದ್ದು, ಬೇಡಿಕೆಗಳ ಈಡೇರಿಕೆಗೆ ಪ್ರಮಾಣಿಕ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭವನದ ಆವರಣದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಾಹಿತ್ಯಿಕವಾಗಿ ಮತ್ತು ಭೌತಿಕವಾಗಿ ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ ಎಂದರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಅನಂದ ನರೋಣಾ, ರಾಜು ಕೋಷ್ಟಿ, ಮಲ್ಲಿನಾಥ ಸಂಗಶೆಟ್ಟಿ, ಶಿವಾನಂದ ಮಠಪತಿ, ವಿನೋದ ಪಾಟೀಲ ಸರಡಗಿ, ವಿನೋದಕುಮಾರ ಜೇನವೇರಿ, ಚಂದ್ರಶೇಖರ ಮ್ಯಾಗೇರಿ, ರಾಜೇಂದ್ರ ಮಾಡಬೂಳ, ಎಂ ಎನ್ ಸುಗಂಧಿ, ಚಂದ್ರಕಾಂತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here