ಲಕ್ಷ್ಮಣ ದಸ್ತಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿಯಿಂದ ಸನ್ಮಾನ

0
103

ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯಿಂದ ಪುರಸ್ಕೃತರಾದ ಲಕ್ಷ್ಮಣ ದಸ್ತಿಯವರಿಗೆ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ರವಿವಾರ ಸನ್ಮಾನಿಸಿ ಗೌರವಿಸಿದರು.

ಸಾಮಾಜಿಕ ಹೋರಾಟಗಾರ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಸೈದ್ಧಾಂತಿಕ ತಳಹದಿಯ ಮೇಲೆ ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡ ಲಕ್ಷ್ಮಣ ದಸ್ತಿಯವರಿಗೆ ಇತ್ತೀಚೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ನಲ್ವತೆರಡನೇ ಘಟಿಕೋತ್ಸವದ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಅವರು ದಸ್ತಿಯವರಿಗೆ ಅವರ ನಿವಾಸದಲ್ಲಿ ಗೌರವ ಸನ್ಮಾನ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ.ಅಕ್ರಮ ಲಕ್ಕಾಷ ಡಾ.ಮಾಜೀದ ದಾಗಿ, ಲಿಂಗರಾಜ ಸಿರಗಾಪೂರ, ಅಬ್ದುಲ್ ರಹೀಂ,ಅಸ್ಸಂ ಚೌಂಗೆ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here