ಬದುಕನ್ನು ಕಟ್ಟಿಕೊಡುವ ಸಾಹಿತ್ಯವೇ ವಚನ ಸಾಹಿತ್ಯ

0
193

ಶಹಾಬಾದ: ಸಾಮನ್ಯ ಜನರ ಬದುಕನ್ನು ಕಟ್ಟಿಕೊಡುವ ಸಾಹಿತ್ಯವೇ ವಚನ ಸಾಹಿತ್ಯ ಎಂದು ಚಿಂತಕ, ಸಾಹಿತಿÀ ಸಿದ್ದು ಯಾಪಲಪರವಿ ಹೇಳಿದರು.

ಅವರು ಸೋಮವಾರ ಭಂಕೂರ ಗ್ರಾಮದ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳು ಪರ್ಯಂತ ಆಯೋಜಿಸಲಾದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಉದ್ಘಾಟಕರಾಗಿ ಮಾತನಾಡಿದರು.

Contact Your\'s Advertisement; 9902492681

ಬಸವಾದಿ ಶರಣರ ಮೌಲ್ಯಗಳನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದರೆ ಲಿಂಗಾಯತರು.
ಸರಿ ಸುಮಾರು 2 ಕೋಟಿ ಲಿಂಗಾಯತರಲ್ಲಿ ಕೇವಲ 2% ಜನರಿಗೆ ಮಾತ್ರ ಬಸವ ತತ್ವ ಗೊತ್ತಿದೆ. ಉಳಿದ 98% ಜನರಿಗೆ ಇನ್ನೂ ಗೊತ್ತಿಲ್ಲದೇ ಇರುವುದು ಖೇದಕರ್ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಮನ್ಯ ಜನರ ಬದುಕನ್ನು ಕಟ್ಟಿಕೊಡುವ ಸಾಹಿತ್ಯವಾದ ವಚನ ಸಾಹಿತ್ಯವನ್ನು ಇಂದು ಲಿಂಗಾಯತರಿಗೆ ತಲುಪಿಸುವ ಕೆಲಸ ಮಠಾದೀಶರು ಮಾಡಬೇಕಿತ್ತು.ಆದರೆ ಅವರು ಎಲ್ಲೋ ಸೋತ್ತಿದ್ದಾರೆ.ಅಲ್ಲದೇ ನಮ್ಮ ಯುವಜನರು ವೈದಿಕ ಸಂಸ್ಕøತಿಗೆ ಬಲಿಯಾಗುತ್ತಿದ್ದಾರೆ. ಕಾರಣ ಅವರಿಗೆ ತಿಳಿಸುವಲ್ಲಿ ಮುಂದಾಗುತ್ತಿಲ್ಲ. ನಮ್ಮ ಯುವಕರಿಗೆ ಆಧ್ಯಾತ್ಮ ಬೇಕಾಗಿದೆ. ಅದನ್ನು ಸರಳವಾಗಿ ಹೇಳಿಕೊಡುವವರಿಲ್ಲ.

ಹೇಳಿ ಕೊಡುವವರೂ ಇದ್ದರೇ ಅವರು ವೈದಿಕ ಸಂಸ್ಕøತಿಗೆ ಬಲಿಯಾಗುತ್ತಿರಲಿಲ್ಲ. ಜಗತ್ತಿಗೆ ಅತಿ ಹೆಚ್ಚು ಮೌಲ್ಯಗಳನ್ನು ಹೊಂದಿರುವ ವಚನ ಸಾಹಿತ್ಯವನ್ನು ಬೆಳೆಸುವಲ್ಲಿ ನಾವು ಸೋತರೇ, ಮುಂದೆ ದೊಡ್ಡ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.ಜೀವನದಲ್ಲಿ ಮೌಲ್ಯಗಳು ಇರಬೇಕು.ಇಲ್ಲದಿದ್ದರೇ ಸಮಾಜ ಅಧಃಪತನಕ್ಕೆ ದಾರಿಯಾಗುತ್ತದೆ.ಆದ್ದರಿಂದ ಜೀವನದ ಪ್ರತಿಯೊಂದು ಸಮಸ್ಯೆಗೂ ಉತ್ತರ ವಚನ ಸಾಹಿತ್ಯದಲ್ಲಿದೆ ಎಂದರು.

ಬೀದರ್‍ನ ವಚನ ಸಮೂಹ ಸಂಸ್ಥೆಯ ಅಲ್ಲಮಪ್ರಭು ನಾವದಗಿ ಮಾತನಾಡಿ, ವಚನಕಾರರು ಕಂಡುಕೊಂಡ ಜೀವನ ವಿಧಾನವನ್ನು ನಾವೆಲ್ಲ ಅನುಸರಿಸಬೇಕು. ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಪರಿಶ್ರಮ, ಪ್ರಾಮಾಣಿಕತೆ, ಸತ್ಯ, ನ್ಯಾಯ, ಆಸಕ್ತಿ ಇದ್ದಾಗ ಮಾತ್ರ ಉದಾತ್ತ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಗುರುಮಿಠಕಲ್ ಖಾಸಾ ಮಠದ ಶಾಂತವೀರ ಶರಣರು ಮಾತನಾಡಿ, ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಇದಕ್ಕೆ ಮೂಲ ಕಾರಣ ನಮ್ಮಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ. ಪ್ರತಿಯೊಬ್ಬರು ಶಿಕ್ಷಣದಿಂದ ಸತ್ಯ ಶುದ್ಧ ಕಾಯಕ ಅಳವಡಿಸಿಕೊಂಡಾಗ ಮಾತ್ರ ಮಾನವೀಯ ಮೌಲ್ಯಗಳು ಉಳಿಸಲು ಸಾಧ್ಯ ಎಂದರು.ವೈಜ್ಞಾನಿಕವಾಗಿ ಸಾಕಷ್ಟು ಮುಂದುವರೆದಿದ್ದರೂ ಮೂಢನಂಬಿಕೆ, ಮೌಢ್ಯಾಚಾರಣೆಗಳು ಸಮಾಜದಲ್ಲಿ ಇನ್ನೂ ದೂರವಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಸಾಮಾಜಿಕ ವ್ಯವಸ್ಥೆ. ಯುವಪೀಳಿಗೆಯಲ್ಲಿ ಬಸವಣ್ಣನವರ ವೈಚಾರಿಕ ಚಿಂತನೆಗಳ ಬೀಜ ಹೊತ್ತಿಸುವ ಮೂಲಕ ಮೂಢ ಆಚರಣೆಗಳನ್ನು ಹೊಡೆದೋಡಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣ್ಯರಾದ ಯಶ್ವಂತರಾವ ಪಾಟೀಲ, ಗೋಣಿರುದ್ರ ಸ್ವಾಮಿಗಳು ವೇದಿಕೆಯ ಮೇಲಿದ್ದರು.
ಬಸವ ಸಮಿತಿ ಉಪಾಧ್ಯಕ್ಷ ಅಮರಪ್ಪ ಹೀರಾಳ ಅಧ್ಯಕ್ಷೀಯ ಭಾಷಣ ಮಾಡಿದರು.

ರೇವಣಸಿದ್ದಪ್ಪ ಮುಸ್ತಾರಿ ನಿರೂಪಿಸಿದರು, ವೀರಣ್ಣ ಕುಂಬಾರ ಸ್ವಾಗತಿಸಿದರು, ಅಮೃತ ಮಾನಕರ್ ಪ್ರಾಸ್ತಾವಿಕ ನುಡಿದರು, ವೀರಭದ್ರಪ್ಪ ಕಲಶೆಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here