ಕಲಬುರಗಿ: ಪ್ರತಿ ದಿನ ಸಂಜೆ ರಂಗಮಂದಿರದಲ್ಲಿ ಏಕವ್ಯಕ್ತಿ ಮಹಿಳಾ ನಾಟಕೋತ್ಸವ

0
25

ಕಲಬುರಗಿ: ಇತ್ತಿಚಿನ ದಿನಗಳಲ್ಲಿ ಏಕವ್ಯಕ್ತಿ ನಾಟಕಗಳು ಏಕೆ ಪ್ರಸಿದ್ಧಿಯಾಗುತ್ತೇವೆ ಎಂದರೆ ಆಧುನಿ ಯುಗದಲ್ಲಿ ಮಹಿಳೆಯರು ಎದುರುಸಿತ್ತಿರುವ ಸಮಸ್ಯೆಗಳನ್ನ ಹಾಗೂ ಸವಾಲುಗಳನ್ನು ಈ ನಾಟಕದ ಮೂಲಕ ಪ್ರದರ್ಶಿಸುಲಾಗುತ್ತದೆ ಮಹಿಳೆಯರು ದಿನನಿತ್ಯ ನಡೆಸುವ ಜೀವನವೆ ಒಂದು ಏಕವ್ಯಕ್ತಿ ಅಭಿನಯವಾಗಿದೆ ಎಂದು ಬೆಂಗಳೂರು ಕವಿಯಿತ್ರಿ ಹಾಗೂ ರಂಗಕರ್ಮಿಗಳಾದ ಹೆಚ್.ಎಲ್.ಪುಷ್ಪಾ ಅವರು ಹೇಳಿದರು.

ಮಂಗಳವಾರದಂದು ಡಾ.ಎಸ್. ಎಂ. ಪಂಡಿತ ಕಲಬುರಗಿ ರಂಗಾಯಣದವರಿಂದ ಸುವರ್ಣ ಕರ್ನಾಟಕ 50 ಏಕವ್ಯಕ್ತಿ: ಮಹಿಳಾ ನಾಟಕೋತ್ಸವ ಅವರಿಂದ ಆಯೋಜಿಸಿದ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವುದರ ಮೂಲಕ ಏಕವ್ಯಕ್ತಿ: ಮಹಿಳಾ ನಾಟಕೋತ್ಸವ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಡಿಮೆ ಅವಧಿಯಲ್ಲಿ ಐದು ದಿನಗಳ ಬೃಹತ್ ಉತ್ಸವÀ ಆಚರಿಸಲಾಗುತ್ತದೆ ಇದು ಪ್ರತಿ ದಿನ ಸೆಪ್ಟೆಂಬರ್ 3 ರಿಂದ 7ನೇ ದಿನಾಂಕದೊಳಗೆ ಇರುತ್ತದೆ ಸಾಯಂಕಾಲ 6 ಗಂಟೆಯಿಂದ ಪ್ರಾರಂಭವಾಗುವುದು ತಾವೆಲ್ಲ ತಪ್ಪದೇ ನೋಡುವಂತಹ ನಾಟಕ ಇದು ಆಗಿದೆ ಎಂದರು.

ಮಹಿಳೆಯರು ಕುಟುಂಬದಲ್ಲಿರುವ ಪ್ರತಿಯೊಬ್ಬರ ನೋವುನ್ನ, ಸಮಸ್ಯೆಯನ್ನ, ತನ್ನ ನೋವು, ತನ್ನ ಸಮಸ್ಯೆ, ಎಂದು ಜೀವನ ಸಾಗಿಸುವುದೆ ಒಂದು ಸಹಸಮಯ ಕಥನವಾಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರ ನಾಟಕದಲ್ಲಿ ಬಂದರೆ ಅವರನ್ನ ನಿಭಾಯಿಸುವುದು ಕಷ್ಟ ಅಂತ ಪುರಷರೆ ಮಹಿಳೆಯರ ಪಾತ್ರವನ್ನು ನಿಭಾಯುಸುತ್ತಿದ್ದರು ಮಹಿಳೆಯರ ನೋವುವನ್ನ ಹೇಳುವುದಕ್ಕಾಗಿ ಅಕ್ಕ ಮಹಾದೇವಿಯ ಪಾತ್ರವನ್ನ ಹೆಚ್ಚಾಗಿ ಬಳಿಸಿಕೊಳ್ಳುತ್ತಿದರು ಎಂದರು.

ನಾಟಕ ” ನಿರಾಕರಣೆ” ಪ್ರಸ್ತುತಿ: ಶೃತಿ ಆದರ್ಶ ಮಾರ್ಗ ನೃತ್ಯ ಶಾಲೆ ಶಿವಮೊಗ್ಗ ರಂಗರೂಪ ನಿರ್ದೇಶನ : ಡಾ. ಸಾಸ್ವೇಹಳ್ಳಿ ಸತೀಶ , ಕಥೆ: ವೀಣಾ ಶಾಂತೇಶ್ವರ, ನಿರೂಪಣೆ ಶ್ರೀಮತಿ ಶಶಿಕಲಾ ಜಡೆ,

ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಚಂದ್ರಕಲಾ ಬಿದರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಸಾಹಿತಿಗಳು.ಕಲಬುರಗಿ ಡಾ.ಅಮೃತ ಕಟಕಿ ಅವರು ನಾಟಕವು ಸಮಾಜದಲ್ಲಿ ಇರತಕ್ಕಂತಹ ಅಂಕು ಡೊಂಕುಗಳನ್ನ ಸಮಸ್ಯೆಗಳನ್ನ ನಾಟಕದ ಮೂಲಕ ತಿಳಿಯಪಡಿಸುತ್ತಾರೆ ಮತ್ತು ನಾಟಕವು ಸಮಾಜದ ಪರಿವರ್ತನೆಗಾಗಿ ಇರುವಂತಹ ಒಂದು ಮಾಧ್ಯಮವಾಗಿದೆ ಎಂದು ಹೇಳಬಹುದು ಸ್ಥಳಯರಿಗೆ ಹೆಚ್ಚಿನದ ಅವಕಾಶ ನೀಡಬೇಕೆಂದು ಇದೆ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತ್ಯಿಗಳಾದ ಡಾ. ಅಮೃತಾ ಕಟಕೆ ,ಅವರು ಮಾತನಾಡಿ ನಾಟಕದ ರೂಪುರೇಷಗಳನ್ನು ತಿಳಿಸಿದರು.

ರಾಯಚೂರು ಹಿರಿಯ ರಂಗಕರ್ಮಿಗಳಾದ ಶಾಂತಾ ಕುಲಕರ್ಣಿ ಅವರು ಹಾಡು ಹಾಡಿದರು. ಬೆಂಗಳೂರು ಸದಸ್ಯರಾದ ರಂಗ ಸಮಾಜ ಡಿಂಗ್ರಿ ನರೇಶ ಒಂದೇ ಜಿಲ್ಲೆ ಸಿಮಿತವಾಗದೇ ಏಳು ಜಿಲ್ಲೆಗಳಿಗೆ ರಂಗಾಯಣ ಅವರಿಸುತ್ತದೆ ನಾವೆಲ್ಲರೂ ಸೇರಿಕೊಂಡು ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಂಗಾಯಣ ಉಪನಿರ್ದೇಶಕ ಜಗದೀಶ್ವರಿ ನಾಸಿ, ರಂಗಾಯಣ ನಿರ್ದೇಶಕರಾದ ಡಾ. ಸುಜಾತಾ ಜಂಗಮಶೆಟ್ಟಿ ಸ್ವಾಗತಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here