ಬಾಲ್ಯ ವಿವಾಹ ಪ್ರಕರಣಗಳು ದಾಖಲಿಸಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಸೂಚನೆ

0
18

ಕಲಬುರಗಿ: ಬಾಲ್ಯ ವಿವಾಹ ಪ್ರಕರಣಗಳು ದಾಖಲಿಸಬೇಕು ಬಾಲ್ಯವಿವಾಹ ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು ನಿರ್ಲಕ್ಷ್ಯ ವಹಿಸದೆ ಕೆಲಸ ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.

ಸೋಮವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆ ಕುರಿತು ಬಾಲ್ಯ ವಿವಾಹ ಇನ್ನೂ ಎರಡು ಪ್ರಕರಣಗಳು ಬಾಕಿ ಇದ್ದು ಅವುಗಳನ್ನು ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

Contact Your\'s Advertisement; 9902492681

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಪ್ರಗತಿ ಪರಿಶೀಲನೆ ಕೈಗೊಂಡಗಾ ಯೋಜನೆಯಡಿ 1 ನೇ ಹೆರಿಗೆಯಲ್ಲಿ ಕಲಬುರಗಿ ಜಿಲ್ಲೆಯ ರಾಜ್ಯದ ಮೊದಲನೆ ಸ್ಥಾನವನ್ನು ಪಡೆದಿದೆ ಮತ್ತು 2ನೇ ಹೆರಿಗೆ ( ಹೆಣ್ಣು ಮಗು) ಯಲ್ಲಿ ರಾಜ್ಯದಲ್ಲಿ 2 ನೇ ಸ್ಥಾನವನ್ನು ಪಡೆದಿರುವ ಬಗೆ PMMVY ಸಂಯೋಜಕರಾದ ವಿಜಯಲಕ್ಷ್ಮಿ ಜಾಧವ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇಂದು ಕಲಬುರಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿಯೋಜನೆ ಬಾಲ ವಿವಾಹ ಸಮನ್ವಯ ಸಮಿತಿ ಘೋಷಣಾ ಅಭಿಯಾನ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ, ಕೌಟುಂಬಿಕ ದೌರ್ಜನ್ಯ ತಡಯುವ ಸಮಿತಿ ಬಾಲಕಿಯರ ವಸತಿ ನಿಲಯ ಸ್ಫೂರ್ತಿ ಯೋಜನೆ ದಮನಿತ ಮಹಿಳೆಯ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು.

ಬಾಲಕಿಯರ ವಸತಿ ನಿಲಯಗಳಲ್ಲಿ ಹಾಗೂ ರಾಜ್ಯ ಮಹಿಳಾ ನಿಲಯಗಳಲ್ಲಿ ವಾಸಿಸುತ್ತಿರುವ ಮಹಿಳೆಯರ ಬಗ್ಗೆ ಚರ್ಚಿಸಲಾಯಿತು. ಈ ಮಹಿಳೆಯರಿಗೆ ಕೌಶಲ್ಯ ಇಲಾಖೆಯಿಂದ ಅವರಿಗೆ ತರಬೇತಿಯನ್ನು ನೀಡಿ ಹೆಚ್ಚಿನ ಕೌಶಲ್ಯಗಳನ್ನು ನೀಡಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸೂಚಿಸಿದರು.

ಬಾಲ್ಯವಿಹಾಕ್ಕೆ ಸಂಬಂಧಪಟ್ಟಂತೆ ಶಿಶು ಅಭಿವೃದ್ಧಿಯೋಜನಾಧಿಕಾರಿಗಳು ಪ್ರಕರಣಗಳು ದಾಖಲಿಸಲು ಮುಂದಾಗಲು ತಿಳಿಸಿದರು.

ಬಾಲ್ಯವಿವಾಹ ತಡೆಯುವ ಪ್ರಮುಖ ಜವಾಬ್ದಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅವರದ್ದಾಗಿದ್ದು ಸ್ಥಳೀಯ ಇತರ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾದ ಪಿ.ಡಿ.ಓ. ಶಾಲಾ ಮುಖ್ಯೋಪಾಧ್ಯಯರು ಇವರನ್ನು ಸಂಪರ್ಕಿಸಿ ಕಡ್ಡಾಯವಾಗಿ ಪ್ರಕರಣ ದಾಖಲಾಗುವಂತೆ ನೋಡಿಕೊಳ್ಳಬೇಕೆಂದು ಸಿ.ಡಿ.ಪಿ.ಓ ರವರಿಗೆ ಗೌರವಾನ್ವಿತ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯಾದರ್ಶಿ ಶ್ರೀನಿವಾಸ ನವಲೆ ಸೂಚಿಸಿದರು.

ಬಾಲ್ಯವಿವಾಹಗಳಲ್ಲದ ಕೂಡಲೆ ಪೋಲಿಸರಿಗೆ ಸಹಕಾರ ಕೊಡುವಂತೆ ಹೆಚ್ಚುವರಿ ಎಸ್.ಪಿ., ಎನ್. ಶ್ರೀನಿಧಿ ಹಾಗೂ ಎಸಪಿ ಬಿಂದುಮಣಿ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಬಾಲ್ಯ ವಿವಾಹ ಪೋಕ್ಸ ಪ್ರಕರಣ ಬಂದಲ್ಲಿ ಕೂಡಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ. ಅವರು ಪ್ರಕರಣ ದಾಖಲಿಸಬೇಕು ಏಕೆಂದರೆ ಅವರು ತಾಲ್ಲೂಕು ಮಕ್ಕಳ ರಕ್ಷಣೆ ಅಧಿಕಾರಿಗಳಾಗಿದ್ದು, ಮತ್ತು ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾಗಿರುತ್ತಾರೆ ಎಸಿಪಿ ಬಿಂದುಮಣಿ ಸಭೆ ತಿಳಿಸಿದರು.

ಮಕ್ಕಳ ದೌರ್ಜನ್ಯ ಪ್ರಕರಣಗಳು ಬಂದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಗಂಭೀರ ಪರಿಗಣಿಸಿ ದೂರು ದಾಖಲಿಸಲು ಹೆಚ್ಚುವರಿ ಎಸ್.ಪಿ.ಎನ್. ಶ್ರೀನಿಧಿ ಅವರು ತಿಳಿಸಿದರು.

ಪೋಷಣಾ ಅಭಿಯಾನ ಯೋಜನೆಯಡಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ಮೊಬೈಲ್‍ಗಳನ್ನು ವಿತರಿಸಿ ಸಮಯಕ್ಕೆ ತಕ್ಕಂತೆ ರಿಚಾರ್ಜ ಮಾಡಿಸಲು ಕ್ರಮಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉ ಉಪನಿರ್ದೇಕ ರಾಜಕುಮಾರ ರಾಠೋಡ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಲೈಂಗಿಕ ಅಲ್ಪಸಂಖ್ಯಾತರಗೆ ಮತ್ತು ಟ್ರಾನ್ಸ ಜೆಂಡರ್ ಸೂಕ್ತ ಮಾರ್ಗದರ್ಶನ, ಆಪ್ತ ಸಮಾಲೋಚನೆ ನೀಡಿ ಅವರಿಗೆ ಕೌಶಲ್ಯ ಯುಕ್ತ ತರಬೇತಿಗಳನ್ನು ನೀಡಲು ಇಲಾಖೆ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಈ ಕುರಿತು ಸಂಯೋಜನೆ ಮಾಡಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ಅಧಿಕಾರಿಗಳ ಮನದಟ್ಟ ಸ್ಪೂರ್ತಿ ಯೋಜನೆಯ:- ಸ್ಪೂರ್ತಿ ಯೋಜನೆ ಗ್ರಾಮಾಂತರ ಪ್ರದೇಶದಲ್ಲಿ ಬಾಲಕಿಯರ ಮನಮುಟ್ಟವಲ್ಲಿ ಯಶಸ್ವಿಯಾಗಿದ್ದು, ಜೀಲ್ಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಸ್ಪೂರ್ತಿ ಯೋಜನೆಯಿಂದ ಉತ್ತೇಜಿತರಾಗಿ ಬಾಲ್ಯವಿವಾಹದಿಂದ ರಕ್ಷಿತರಾದ ಶಾಲೆಯಿಂದ ಮರಳೀ ದಾಖಲಾದ ಮತ್ತು ಇದರಿಂದ ಶಿಕ್ಷಣ ಕಲಿಯುತ್ತಿರುವ ಬಗ್ಗೆ ಅನೇಕ ಬಾಲಕೀಯರು ತಮ್ಮ ಅನುಭವಗಳನ್ನು ಹಂಚಿಕೊಂಡ ಉತ್ತೇಜಿತರಾಗಿ ಬಾಲ್ಯ ವಿವಾಹದಿಂದ ರಕ್ಷಿಸಲು ಪ್ರತಿಯೊಂದು ಶಾಲೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನಮುಟ್ಟುವ ಹಾಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಕ್ಕಳ ಮೇಲೆ ಬೀರುವ ಕೆಟ್ಟ ಪ್ರಭಾವಗಳನ್ನು ಅನುಭವದಲ್ಲಿ ಇಟ್ಟುಕೊಂಡು ಶಿಕ್ಷಣ ಕಲಿಯುತ್ತಿರುವ ಬಗ್ಗೆ ಅನೇಕ ಬಾಲಕಿಯರು ತಮ್ಮ ಅನುಭವವನ್ನು ಜಿಲ್ಲಾಧಿಕಾರಿ ಅವರೊಂದಿಗೆ ಹಂಚಿಕೊಂಡರು.

ಸಂಯೋಜಕ ಶಿವಯೋಗಿ ಮಠಪತಿ ಅವರು ಮಾತಾಡಿ ಸ್ಪೂರ್ತಿ ಯೋಜನೆಯಿಂದ ಬಾಲಕಿಯರು ಮರಳಿ ಶಾಲೆಗೆ ಬರುತ್ತಿರುವುದು ಮತ್ತು ಅನೇಕ ಹಳ್ಳಿಗಳಿಗೆ ಬಸ್ಸಿನ ಸೌರ್ಯ ಒದಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ನ್ಯಾಯಾಧೀಶರು ಪೆÇಲೀಸ ಅಧಿಕಾರಿಗಳ ಸ್ಪೂರ್ತಿ ಯೋಜನೆಯ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಅವರನ್ನು ಹುರಿದುಂಬಿಸಿದರು. ಬಾಲಕಿಯೊಬ್ಬಳಿಗೆ ಶೈಕ್ಷಣಿಕ ಸಹಾಯಧನ ಸಹಾಯ ಮಾಡುವುದಾಗಿ ಡಿಸಿಪಿ ಕ್ರೈಂ ಪ್ರವೀಣ ನಾಯಕ ತಿಳಿಸಿದರು.

ಮಕ್ಕಳ ವಿಶೇಷ ಪೆÇಲೀಸ್ ಘಟಕದ ಎಸಿಪಿ ಜಿ.ಚಂದ್ರಶೇಖರ್ ಡಿ.ಹೆಚ್.ಓ. ಡಾ. ರತಿಕಾಂತ ಸ್ವಾಮಿ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಸಿಡಿಪಿಓ ಭೀಮಾರಾಯ ಕಣ್ಣೂರು, ಶ್ರೀಕಾಂತ ಮೆಂಗಜಿ, ಪ್ರೇಮಾ , ಆರತಿ ತುಪ್ಪದ, ಸವಿತಾ, ಕಾನೂನು ಅಧಿಕಾರಿ ಭಾರತೀಶ್ ಶೀಲವಂತರ , ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ್, ಮತ್ತು ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here