ಆಳಂದ: ಖಜೂರಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರುದ್ರವಾಡಿಯಲ್ಲಿ ಅರ್ಥಪೂರ್ಣವಾಗಿ ಜರುಗಿದವು.
ಕಾರ್ಯಕ್ರಮದ ಮುಖ್ಯ ಅತಿಥಿ ಕಲ್ಬುರ್ಗಿ ಡಿಡಿಪಿಐ ಕಛೇರಿ ವಿಷಯ ಪರಿವೀಕ್ಷಕ ರಾಜಕುಮಾರ ಪಾಟೀಲ ಮಾತನಾಡಿ, ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ಸೂಕ್ತ ವೇದಿಕೆಯನ್ನು ಒದಗಿಸಿ ಪ್ರತಿಭೆಯನ್ನು ಹೊರ ತೆಗೆಯುವಂತೆ ಪ್ರಾಮಾಣಿಕ ಪ್ರಯತ್ನವಾಗಬೇಕು. ಪ್ರತಿಭೆ ಎನ್ನುವುದು ಯಾರ ಸ್ವತ್ತು ಅಲ್ಲ, ಇಂದು ಇಲ್ಲಿ ಭಾಗವಹಿಸಿರುವ ಮಕ್ಕಳು ರಾಜ್ಯ ಹಂತದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಆಗಬೇಕು ಎಂದು ಶುಭ ಹಾರೈಸಿದರು.
ಕ್ಲಸ್ಟರ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ನಾಗೇಂದ್ರಪ್ಪ ಗಾಡೆರವರು ಪ್ರಸ್ತಾವಿಕವಾಗಿ ಮಾತನಾಡಿ, ಸ್ಪರ್ಧೆಯಲ್ಲಿ 18 ಶಾಲೆಗಳಿಂದ 350ಕ್ಕೂ ಹೆಚ್ಚು ಮಕ್ಕಳು 46 ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು ಎಲ್ಲ ಮಕ್ಕಳಿಗೂ ಶುಭ ಹಾರೈಸಿದರು ಹಾಗೂ ತೀರ್ಪುಗಾರರು ಯಾರಿಗೂ ಅನ್ಯಾಯವಾಗದಂತೆ ಸೂಕ್ತ ಪ್ರತಿಭೆಯನ್ನು ಗುರುತಿಸಿ ಮುಂದಿನ ಹಂತಕ್ಕೆ ಕಳುಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು ಹಾಗೂ ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರಗಳು ಹಾಗೂ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಮ್ಮ ಕರುನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಗಂಗಾಧರ ಕುಂಬಾರ, ಕಲಬುರಗಿ ಉತ್ತರ ವಲಯ ಅಧ್ಯಕ್ಷ ಜಾನಪದ ಪರಿಷತ್ತು ಅಧ್ಯಕ್ಷ ಹಣಮಂತ ಅಟ್ಟೂರ, ರುದ್ರವಾಡಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹರಳಯ್ಯ, ಗ್ರಾ.ಪಂ ಸದಸ್ಯರಾದ ರವಿ ಪಾಟೀಲ, ಮಹೇಶ್ವರಿ ಗುಡ್ಡೆ, ಗೌತಮ ವಾಗಮೊರೆ, ಅಪ್ಸರಾ ಬೇಗಂ ಮುಜಾವರ, ಮಹಾನಂದ ಪಾಟೀಲ, ಜ್ಯೋತಿ ಮುಲಗೆ, ಶ್ರೀಶೈಲ ಚಿತ್ತಕೋಟೆ ಮುಖ್ಯ ಗುರುಗಳಾದ ಶ್ರೀನಾಥ ನಾಗೂರ, ಕಿರಣ ಬಂಗರಗೆ, ಶಿವಾನಂದ, ಸಂತೋಷ ರಿಜ್ವಾನ ಹಾಗೂ ವಿವಿಧ ಶಾಲೆಗಳ ಮುಖ್ಯ ಗುರುಗಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯ ಗುರುಗಳಾದ ವಿಜಯಾನಂದ ಹೀಚಗೆ ಅಧ್ಯಕ್ಷತೆ ವಹಿಸಿದ್ದರು, ಅನಿಲ ರಾಠೋಡ ನಿರೂಪಿಸಿದರು ಕುಮಾರಿ ಮಲ್ಲಮ್ಮ ಸ್ವಾಗತಿಸಿದರು, ಹವಳಪ್ಪ ಮಂಟಗಿ ವಂದಿಸಿದರು.