ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ 21 ದಿನಗಳ ಇಂಡಕ್ಷನ್ ಕಾರ್ಯಕ್ರಮ

0
44

ಕಲಬುರಗಿ; ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ನೆರವು ಮತ್ತು ಸಮಾಲೋಚನೆ ನೀಡಿ ಅವರ ಶೈಕ್ಷಣಿಕ ವೃತ್ತಿಜೀವನದಲ್ಲಿ ಅವರನ್ನು ಸರಿಯಾದ ದಾರಿಗೆ ಕೊಂಡೊಯ್ಯಲು ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕ್ರಿಯಾತ್ಮಕ ಸಮಾಲೋಚನೆ ಕೇಂದ್ರವನ್ನು ಸ್ಥಾಪಿಸುವ ಅಗತ್ಯವನ್ನು ಖ್ಯಾತ ಮನೋವೈದ್ಯ ಮತ್ತು ಪ್ರೇರಕ ಉಪನ್ಯಾಸಕ ಡಾ. ಆನಂದ ಪಾಂಡುರಂಗಿ ಒತ್ತಿ ಹೇಳಿದರು.

ಭಾನುವಾರ ಶರಣಬಸವ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ, ಶರಣಬಸವ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿಧ ಪದವಿಪೂರ್ವ ವಿಭಾಗಗಳಿಗೆ ಸೇರ್ಪಡೆಗೊಂಡ ಹೊಸ ವಿದ್ಯಾರ್ಥಿಗಳ 21 ದಿನಗಳ “ದೀಕ್ಷಾರಾಂಭ” (ಇಂಡಕ್ಷನ್ ಕಾರ್ಯಕ್ರಮ) ವನ್ನು ಉದ್ಘಾಟಿಸಿ ಡಾ. ಪಾಂಡುರಂಗಿ ಮಾತನಾಡಿದರು.

Contact Your\'s Advertisement; 9902492681

ತರಬೇತಿ ಪಡೆದ ಸಲಹೆಗಾರರನ್ನು ಹೊಂದಿರುವ ಸಮಾಲೋಚನೆ ಕೇಂದ್ರಗಳು, ಆರಂಭಿಕ ಹಂತಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಶೈಕ್ಷಣಿಕ ಪ್ರಯಾಣದಲ್ಲಿ ಅವರನ್ನು ಸರಿಯಾದ ದಾರಿಗೆ ಬರಲು ಅನುಕೂಲವಾಗುತ್ತದೆ ಎಂದರು.

ಇಂದಿನ ದಿನಗಳಲ್ಲಿ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 20 ಪ್ರತಿಶತದಷ್ಟು ಯುವಕರು ಒಂದಲ್ಲ ಒಂದು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಈ ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ಮೊಳಕೆಯೊಡೆಯುವ ಹಂತದಲ್ಲೇ ಶಮನ ಮಾಡುವ ಅಗತ್ಯವಿದೆ ಎಂದು ಡಾ. ಪಾಂಡುರಂಗಿ ಅಭಿಪ್ರಾಯಪಟ್ಟರು.

ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಡಾ. ಪಾಂಡುರಂಗಿ, ಒತ್ತಡವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಒತ್ತಡವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. “ಒತ್ತಡವನ್ನು ನಿರ್ವಹಿಸುವುದು ಒಂದು ಕಲೆ ಮತ್ತು ನಿಮ್ಮ ಗಮನವನ್ನು ಶೈಕ್ಷಣಿಕ ಚಟುವಟಿಕೆಗಳ ಕಡೆಗೆ ತಿರುಗಿಸುವ ಮೂಲಕ ನೀವು ಒತ್ತಡವನ್ನು ನಿರ್ವಹಿಸುವಲ್ಲಿ ಪಾಂಡಿತ್ಯವನ್ನು ಸಾಧಿಸಬಹುದು” ಎಂದು ಹೇಳಿದರು.

ಜೀವನದಲ್ಲಿ ಒತ್ತಡವಿಲ್ಲದೆ ತನ್ನ ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಹೊರತರಲು ಸಾಧ್ಯವಿಲ್ಲ ಎಂಬುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ. ಧ್ಯಾನ, ಯೋಗ, ಸಂಗೀತ ಮತ್ತು ಇತರ ಸೃಜನಾತ್ಮಕ ಚಟುವಟಿಕೆಗಳನ್ನು ಅಭ್ಯಾಸ ಮಾಡುವ ಮೂಲಕ ಜೀವನದಲ್ಲಿ ಒತ್ತಡವನ್ನು ನಿವಾರಿಸಬಹುದು. ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಗೆ ಬಲಿಯಾಗುವ ಮುನ್ನ ಯುವಜನತೆ ಎರಡೆರಡು ಬಾರಿ ಯೋಚಿಸಿ ಸುರಕ್ಷಿತ ಜೀವನ ನಡೆಸಲು ಪ್ರಜ್ಞಾವಂತರಾಗಬೇಕು ಎಂದರು.

ಪ್ರತಿಯೊಬ್ಬ ಯುವಕರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಅನೇಕ ವಿಷಯಗಳತ್ತ ಆಕರ್ಷಿತರಾಗುವ ಸಾಮಾನ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ ಡಾ. ಪಾಂಡುರಂಗಿ, ಹದಿಹರೆಯದ ವಯಸ್ಸಿನಲ್ಲಿ ಆಕರ್ಷಣೆಗಳು ಸಹಜ ಆದರೆ ಈ ಆಕರ್ಷಣೆಗಳನ್ನು ಸೃಜನಶೀಲತೆ ಮತ್ತು ರಚನಾತ್ಮಕವಾಗಿ ಪರಿವರ್ತಿಸಿ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಪ್ರತಿಯೊಬ್ಬ ಯುವಕರು ಜೀವನದಲ್ಲಿ ಯಶಸ್ಸನ್ನು ಸಾಧಿಸುವ ಉತ್ಕಟ ಬಯಕೆಯನ್ನು ಹೊಂದಿರಬೇಕು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಮತ್ತು ಉತ್ತಮ ವೃತ್ತಿಪರ ವೃತ್ತಿಜೀವನಕ್ಕಾಗಿ ಶೈಕ್ಷಣಿಕ ವೃತ್ತಿಜೀವನದ ಉದ್ದಕ್ಕೂ ಈ ಬಯಕೆಯನ್ನು ಜೀವಂತವಾಗಿರಿಸಿಕೊಳ್ಳಬೇಕು ಎಂದು ಹೇಳಿದರು.

ಡಾ. ಪಾಂಡುರಂಗಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಶೈಕ್ಷಣಿಕ ವೃತ್ತಿಜೀವನವನ್ನು ಉನ್ನತ ಶಿಕ್ಷಣ ಕೇಂದ್ರದಲ್ಲಿ ಪ್ರಾರಂಭಿಸುವ ಮೊದಲು ಗುರಿ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕು ಮತ್ತು ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಈ ಗುರಿ ಮತ್ತು ದೂರದೃಷ್ಟಿಯನ್ನು ಸಾಧಿಸಬಹುದು. ವಿದ್ಯಾರ್ಥಿಗಳು ದೈಹಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವಂತೆ ಅವರವರ ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೂ ಸಮಾನ ಪ್ರಾಮುಖ್ಯತೆಯನ್ನು ನೀಡಬೇಕು. ಇದು ಶೈಕ್ಷಣಿಕ ವೃತ್ತಿಜೀವನದ ಯಶಸ್ಸಿಗೆ ಸಮಾನವಾಗಿ ಕೊಡುಗೆ ನೀಡುತ್ತದೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಮಾತನಾಡಿ, ಇಂದು ಅಭಿಯಂತರರ ದಿನವನ್ನಾಗಿ ಆಚರಿಸುವ ಸರ್. ಎಂ. ವಿಶ್ವೇಶ್ವರಯ್ಯ ಅವರ ಜೀವನ ಮತ್ತು ಸಾಧನೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾದರಿಯಾಗಿ ಪರಿಗಣಿಸಬೇಕು ಎಂದರು.

ಶರಣಬಸವ ವಿಶ್ವವಿದ್ಯಾಲಯದ ಪೆÇೀರ್ಟಲ್‍ಗಳು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಲು, ಪರಿಪೂರ್ಣ ಉಡಾವಣಾ ಕೇಂದ್ರವಾಗಿ ಕಾರ್ಯನಿರ್ವಹಿಸಲು, ಅತ್ಯಾಧುನಿಕ ಪ್ರಯೋಗಾಲಯಗಳು ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಮತ್ತು ಆಧುನಿಕ ಬೋಧನಾ ಸಾಧನಗಳನ್ನು ಒದಗಿಸಿವೆ ಎಂದು ಅವರು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ ಅವರು ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಎಲ್ಲಾ ವಿಭಾಗಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ತಿಳಿ ಹೇಳಿದರು.

ವಿವಿಯ ಕುಲಸಚಿವ ಡಾ. ಎಸ್. ಜಿ. ಡೊಳ್ಳೇಗೌಡರ್ ಇಂಡಕ್ಷನ್ ಕಾರ್ಯಕ್ರಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದಾಲಯವು ಇಂಜಿನಿಯರ್‍ಗಳ ದಿನಾಚರಣೆಯನ್ನು ಆಚರಿಸಿತು. ಸಮಾರಂಭದಲ್ಲಿ ಪ್ರಮುಖರಾದÀ ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಡೀನ್ (ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ) ಡಾ. ಶಿವಕುಮಾರ ಜವಳಿಗಿ, ಡೀನ್ (ಸಂಶೋಧನೆ) ಡಾ. ಸುಜಾತಾ ಮಲ್ಲಾಪುರೆ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here