ಶಹಾಬಾದ: ಮಹಾನ್ ನಾಯಕರ ತ್ಯಾಗ ಬಲಿದಾನಗಳ ಫಲವಾಗಿ ಹೈದ್ರಬಾದ ಕರ್ನಾಟಕ ಪ್ರದೇಶ ನಿಜಾಮಶಾಹಿ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡಿತು, ಹೋರಾಟ ಮಾಡಿದ ನಾಯಕರ ರಾಷ್ಟ್ರ ಪ್ರೇಮ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಬೇಕು ಎಂದು ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.
ಅವರು ಮಂಗಳವಾರ ನಗರದ ತಹಸೀಲ್ದಾರ ಕಚೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದರು.
ಕಲ್ಯಾಣ ಕರ್ನಾಟಕದ ಜನರು ಸ್ವಾತಂತ್ರ್ಯಕ್ಕಾಗಿ ಎರಡು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ಇತಿಹಾಸವಿದೆ.ಒಂದು ಬ್ರಟಿಷರ ವಿರುದ್ಧ, ಮತ್ತೊಂದು ನಿಜಾಮನ ವಿರುದ್ಧ ಎಂಬುದು ಅರಿಯಬೇಕು.ನಿಜಾಮ ಕೆಟ್ಟ ಆಡಳಿತ ಈ ಭಾಗದ ಜನರು ಕಷ್ಟ ಕಾರ್ಪಣ್ಯದಿಂದ ಕೂಡಿತ್ತು.ಮಹಿಳೆಯರ ಮೇಲೆ ಅತ್ಯಾಚಾರ,ಗುಂಡಿಕ್ಕಿ ಕೊಲ್ಲುವುದು ಸೇರಿದಂತೆ ಅನೇಕ ಪೈಶಾಚಿಕ ಕೃತ್ಯಗಳಿಂದ ಸಿಡಿದೆದ್ದು ದೊಡ್ಡ ಹೋರಾಟವೇ ನಡೆದು ಕೊನೆಗೆ ಉಕ್ಕಿನ ಮನುಷ್ಯ ಸರದಾರ ವಲ್ಲಬಾಯಿ ಪಟೇಲ್ ಅವರ ಕಾರ್ಯಾಚರಣೆಯಿಂದ ಸ್ವತಂತ್ರಗೊಂಡೆವು. ಇದನ್ನು ಮನಗಂಡು ಆ ಎಲ್ಲಾ ಮಹನೀಯರನ್ನು ಸ್ಮರಿಸಿಕೊಳ್ಳುವುದರ ಮೂಲಕ ಒಳ್ಳೆ ಸೌಹಾರ್ದತೆಯಿಂದ ಬದುಕು ಸಾಗಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಕಚೇರಿಯ ಸರ್ವ ಸಿಬ್ಬಂದಿಯವರು ಹಾಜರಿದ್ದರು.