ಕಲಬುರಗಿ : ಮಹಾನಗರ ಪಾಲಿಕೆ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿ ಮೋಹನ್ ಲಾಡ್ಜ ವೃತ್ತದಿಂದ ರಾಮಮಂದಿರ ವೃತ್ತದ ವರೆಗೆ ಫುಟಪಾತ್, ರಸ್ತೆ ವಿಭಜಕ ಹಾಗೂ ಅಲಂಕಾರಿಕ ದಾರಿದೀಪ ಕಂಬಗಳು ಲೋಕಾರ್ಪಣೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನೇರೆವರಿಸಿದರು.
ಮೇಯರ್ ಯಲ್ಲಪ್ಪ ಎಸ್ ನಾಯಕೊಡಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ ಶಿರವಾಳ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದ ಅಜೀಮೊದ್ದೀನ, ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ, ವಾರ್ಡ ಇಂಜಿನಿಯರ್ ಶ್ರೀಶೈಲ್ ತಂಬದ್, ಬಸವರಾಜ ಬಿರಾಳ, ಅಲಿಮೋದ್ದಿನ್ ಪಟೇಲ್, ರವಿ ರಾಠೋಡ, ಸಿರಾಜೋದ್ದಿನ್ ಪಟೇಲ್, ವಿಜಯಕುಮಾರ ಗಾದ್ಗಿ ಸೇರಿದಂತೆ ಇತರರು ಇದ್ದರು.