ಕಲಬುರಗಿ: ಶ್ರೀರೇವಣಸಿದ್ದೇಶ್ವರ ಹುಂಡಿಯಲ್ಲಿ ಚಿನ್ನ, ಬೆಳ್ಳಿ 37.94 ಲಕ್ಷ ರೂ. ನಗದು ಸಂಗ್ರಹ

0
111

ಕಲಬುರಗಿ: ಇಲ್ಲಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ತಾಪ್ತಿಯ ಸುಪ್ರಸಿದ್ಧ ದೇವಸ್ಥಾನದಲ್ಲಿ ಒಂದಾಗಿರುವ ರೇವಗ್ಗಿ ರಟಕಲ್ ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಸುಮಾರು 6 ತಿಂಗಳಲ್ಲಿ ಸಂಗ್ರವಾದ ಹುಂಡಿಯ ಹಣ ಮತ್ತು ಇತರೆ ಅಮೂಲ್ಯವಾದ ಕಾಣಿಕೆ ಎಣಿಕೆ ಮಾಡಲಾಯಿತು.

ಶನಿವಾರ ಸೇಡಂ ಸಹಾಯಕ ಆಯುಕ್ತರಾದ ನಾಗನಾಥ್ ತರಗೆ ಮತ್ತು ದೇವಸ್ಥಾನ ಕಾರ್ಯದರ್ಶಿಗಳಾದ ಶ್ರೀ ಸದಾಶಿವ ವಗ್ಯ ಅವರ ನೇತೃತ್ವದಲ್ಲಿ ಹುಂಡಿಯ ಎಣಿಕೆ ಕಾರ್ಯಾಕೈಗೊಳ್ಳಲಾಯಿತು. ಒಟ್ಟು 37,94,560 ರೂ. ನಗದು, 25 ಗ್ರಾಂ ಚಿನ್ನ, ಬೆಳ್ಳಿ 1.745 ಗ್ರಾಂ. ಹುಂಡಿಯಲ್ಲಿ ಕಾಣಿಕೆ ಹರಿದುಬಂದಿದೆ.

Contact Your\'s Advertisement; 9902492681

ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ವರೆಗೆ 40ಕ್ಕೂ ಹೆಚ್ಚು ಜನರಿಂದ ಸಿಸಿಟಿವಿಯ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯಾಕೈಗೊಳ್ಳಲಾಯಿತು. ಈ ವೇಳೆ ಕಾಳಗಿ ತಹಶೀಲ್ದಾರರು, ಕಂದಾಯ ನಿರಕ್ಷಕರಾದ ಮಂಜುನಾಥ್ ಹಾಗೂ ಕೆಜಿಬಿ ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಮ ಲೇಕ್ಕಾಧಿಕಾರಿಗಳು ಮತ್ತು ಭಕ್ತಾದಿಗಳಾದ ವೀರಣ್ಣ ಗಂಗಾಣಿ ರಟಕಲ್ ಅವರು ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here