ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ 117 ನೇ ಜನ್ಮದಿನೋತ್ಸವ

0
27

ರಾಯಚೂರು: ಭಾರತದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117 ನೇ ಜನ್ಮದಿನೋತ್ಸವವನ್ನು ಅಖಿಲಭಾರತ ಕ್ರಾಂತಿಕಾರಿ ವಿದ್ಯಾರ್ಥಿ ಸಂಘಟನೆ-ಎಐಆರ್ ಎಸ್ ಓ ಹಾಗೂ ಅಖಿಲಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟ ಆರ್ ವೈಎಫ್ ಐ ಜಂಟಿ ಸಂಘಟನೆಗಳ ನೇತೃತ್ವದಲ್ಲಿ ನಗರದ ಆಶಾಪೂರ ರಸ್ತೆಯಲ್ಲಿರುವ ಟಿಯುಸಿಐ ಕಾರ್ಮಿಕ ರಾಜ್ಯ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಭಗತ್ ಸಿಂಗ್ ಜನ್ಮದಿನದ ನಿಮಿತ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ವಿದ್ಯಾರ್ಥಿ-ಯುವಜನ ರಾಜ್ಯ ಮುಖಂಡರಾದ, ಅಜೀಜ್ ಜಾಗಿರ್ದಾರ್, ಭಗತ್‌ ಸಿಂಗ್‌ 1907ರ ಸೆಪ್ಟಂಬರ್‌ 28ರಂದು. ಈಗ ಪಾಕಿಸ್ಥಾನದ ಭಾಗವಾಗಿರುವ ಪಂಜಾಬ್‌ ಪ್ರಾಂತ್ಯದ ಲ್ಯಾಲ್‌ಪುರ ಜಿಲ್ಲೆಯ ಜರನ್‌ವಾಲಾ ತಹಶೀಲ್‌ನ ಬಾಂಗಾ ಎಂಬ ಜಿಲ್ಲೆಯಲ್ಲಿ ಭಗತ್‌ ಸಿಂಗ್‌ ಹುಟ್ಟಿದ್ದು. ತನ್ನ ತಾರುಣ್ಯದಲ್ಲೇ ಭಗತ್‌ ಸಿಂಗ್‌ ಕಟ್ಟಾ ಕ್ರಾಂತಿಕಾರಿಯಾಗಿದ್ದರು. ಕಾರ್ಲ್ ಮಾರ್ಕ್ಸ್, ಲೆನಿನ್‌ ಮೊದಲಾದವರ ಚಿಂತನೆಗಳಿಂದ ತೀವ್ರ ಪ್ರಭಾವಿತರಾಗಿದ್ದ ಭಗತ್‌ ಸಿಂಗ್‌ ಸಹಜವಾಗಿಯೇ ಸಮಾಜವಾದದೆಡೆಗೆ ಆಕರ್ಷಿತರಾಗಿದ್ದರು.

Contact Your\'s Advertisement; 9902492681

ಧರ್ಮವು ಅಫೀಮು ಆಗಬಲ್ಲುದು ಎಂಬ ಸತ್ಯವನ್ನು ಅರಿತ ಭಗತ್‌ ಸಿಂಗ್‌, ತನ್ನ ಕ್ರಾಂತಿಕಾರಿ ಹೋರಾಟವನ್ನು ಧರ್ಮ ನಿರಪೇಕ್ಷತೆಯ ಆಧಾರದಲ್ಲೇ ನಡೆಸಬೇಕೆಂಬ ಧ್ಯೇಯ ಹೊಂದಿದ್ದು ಅಂತೆಯೇ ನಡೆದರು. ನಾವು ಅವರ ಮಾರ್ಗದರ್ಶನದ ಆಶಯಗಳನ್ನು ಈಡೇರಿಸುವ ದೃಡ ಸಂಕಲ್ಪ ಮಾಡಬೇಕು.

ದೇಶದಲ್ಲಿ ಹಸಿವು,ಬಡತನ,ನಿರುದ್ಯೋಗ ತಾಂಡವಾಡುತ್ತಿದೆ. ಜಾತಿ,ಧರ್ಮದ ವಿಷ ಬೀಜ ಬಿತ್ತುತ್ತಿರುವ ಕಾರ್ಪೊರೇಟ್ ಶಕ್ತಿಗಳ ಕೃಪಾ ಪೋಷಿತ ಮನುವಾದವು ದೇಶದ ಜನರ ಭಾವೈಕ್ಯತೆಯ ಅಭಿವೃದ್ಧಿಗೆ ಕಂಟಕವಾಗಿದೆ. ಸಮಸ್ತ ದುಡಿಯುವ ವರ್ಗವನ್ನು ಸಂಘಟಿಸಿ ಭಗತ್ ಸಿಂಗ್ ಕಂಡಂತಹ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಲು ವಿದ್ಯಾರ್ಥಿ-ಯುವಜನರು ಬೀದಿಗಿಳಿಯಬೇಕಾಗಿದೆ. ಶಿಕ್ಷಣ ಪಡೆದರೂ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ಯುವಜನರು ಉದ್ಯೋಗದ ಹಕ್ಕಿಗಾಗಿ ಕ್ರಾಂತಿಕಾರಿ ಹೋರಾಟಗಳನ್ನು ಮುನ್ನೆಡೆಸುವುದು ಇಂದಿನ ಯುವ ಪಿಳಿಗೇಯ ಧ್ಯೇಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ ನಿರಂಜನ್ ಕುಮಾರ್, ಎಲ್ಲಪ್ಪ, ರವಿಚಂದ್ರನ್, ಆನಂದ್ ಕುಮಾರ್, ಹನೀಫ್ ಅಬಕಾರಿ, ಸಂತೋಷ್, ಮಾರೆಪ್ಪ ಸೇರಿದಂತೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here