2025ರ ಕೆಬಿಎನ್ ಪ್ರೀಮಿಯರ ಲೀಗ T20 ಆಕ್ಷನ್

0
69

ಕಲಬುರಗಿ : ಕಲ್ಯಾಣ ಕರ್ನಾಟಕದಲ್ಲಿನ ಭಾಗದಲ್ಲಿನ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶ ನೀಡುವ ಸಲುವಾಗಿ ಕೆಬಿಎನ್ ಪ್ರಿಮಿಯರ್ ಲೀಗ್ ಆರಂಭಿಸಲಾಗಿದೆ. ಈ ಪಂದ್ಯಾವಳಿ ರಾಜ್ಯ ಮಟ್ಟದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂದು ಕೆಬಿಎನ್ ವಿವಿಯ ಕುಲಾಧಿಪತಿ ಜನಾಬ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಹೇಳಿದರು.

ಅವರು ಕೆಬಿಎನ್ ಟರ್ಫ್ ಮೈದಾನದಲ್ಲಿ ಶುಕ್ರವಾರ ಜರುಗಿದ ಕೆಬಿಎನ್ ಪ್ರಿಮಿಯರ ಲೀಗ T20 ಟೂರ್ನಮೆಂಟನ ಆಕ್ಷನನಲ್ಲಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಸಯ್ಯದ್ ಶಾಹ ಖುಸ್ರೋ ಹುಸ್ಸೇನಿಯವರು ಕಲ್ಯಾಣ ಕರ್ನಾಟಕದ ಯುವಕರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಸುವ ನಿಟ್ಟಿನಿಂದ ಕೆಬಿಎನ್ ಹೌಸ್ ಆಫ್ ಸ್ಪೋರ್ಟ್ಸ್ ಪ್ರಾರಂಭಿಸಿದರು. ನಾವು ಅವರನ್ನೆಲ್ಲ ಇಂದು ನೆನಪಿಸುವ ಕೆಲಸ ಮಾಡುತ್ತಿದ್ದೆವೆ ಎಂದರು.

Contact Your\'s Advertisement; 9902492681

ಸುಮಾರು 185 ಆಟಗಾರರಲ್ಲಿ ತಂಡಗಳ ಮಾಲೀಕರು ತಮಗೆ ಬೇಕಾದ ಪ್ಲೇಯರ್ ಆಯ್ಕೆ ಮಾಡಿಕೊಂಡರು. ಆರ್ ಕೆ ಮಡಕಿ ಐವಾನ ಈ ಶಾಹಿ ರಾಯಲ್ಸ್, ಗಂಗಾವತಿ ಲಯನ್ಸ್, ಎಂ ಈ ಎಂ ಸ್ಟೇಷನ್ ಈಗಲ್ಸ್, ಎಂ ಎಸ್ ಬಿ ರೌಜಾ ಸ್ಟಾರ್ಸ್ ಮತ್ತು ಮೊಮೀನ್ ಪುರ ಮಾಸ್ಟರ್ಸ್, ಮಾಮೂಪುರಿ ಮಾರ್ಕೆಟ್ ಸೂಪರ್ ಕಿಂಗ್ಸ್ 6 ತಂಡಗಳು ಹೊರ ಹೊಮ್ಮಿದವು. ಕ್ರಾಂತಿ ಕುಮಾರ್ ಅತಿ ಹೆಚ್ಚು ಪಾಯಿಂಟ್ಸ್ 80 ಸಾವಿರಗೆ ಗಂಗಾವತಿ ಲಯನ್ಸ್ ತಮ್ಮದಾಗಿಸಿಕೊಂಡರು. ಅತಿ ಹೆಚ್ಚು ಪಾಯಿಂಟ್ಸ್ ಗೆ ಹರಾಜಾದ ಮತ್ತೊಬ್ಬ ಆಟಗಾರ ಅವಿನಾಶ್ ಡಿ (76000) ನನ್ನು ರೌಜಾ ಸ್ಟಾರ್ಸ್ ಖರೀದಿಸಿತು. ಪ್ರತಿಯೊಂದು ತಂಡದಲ್ಲಿ 16 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here