ಇ-ಮೀಡಿಯಾ ಲೈನ್ ನ್ಯೂಸ್
ಕಲಬುರಗಿ: ಜೇವರ್ಗಿ ನಗರದ ಅಪ್ರಾಪ್ತ ಬಾಲಕಿ ಅನ್ಯ ಕೋಮಿನ ಯುವಕನ ಕಿರುಕುಳದಿಂದ ಬೇಸತ್ತು ದಿನಾಂಕ 11 : 01 : 2025 ರಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಬದುಕಿ ಬಾಳಬೇಕಾಗಿದ್ದ ಯುವತಿ. ಆತನ ಮಾನಸಿಕ ಕಿರುಕುಳದಿಂದ ಬೇಸತ್ತು.. ಆತ್ಮಹತ್ಯೆ ಮಾಡಿಕೊಂಡಿರುವುದು.. ಇಡೀ ಲಿಂಗಾಯತ ಸಮಾಜಕ್ಕೆ ತುಂಬಲಾರದ ನಷ್ಟ ಆದ್ದರಿಂದ ಆ ಯುವಕನಿಗೆ ಕಠಿಣ ಶಿಕ್ಷೆ ನೀಡಿ. ಮುಂದೆ ಇಂತಹ ಘಟನೆ ಜರಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲು ಜೇವರ್ಗಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ದಿನಾಂಕ 16.01.2025 ರಂದು ಜೇವರ್ಗಿ ಬಂದಗೆ ಕರೆ ನೀಡಲಾಗಿದೆ.
ಈ ಕರೆಗೆ ಜೇವರ್ಗಿ ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ ಸಂಪೂರ್ಣವಾಗಿ ಬೆಂಬಲಿಸಿ. ಭಾಗವಹಿಸಲು ನಿಶ್ಚಯಿಸಲಾಗಿದೆ ನೀಲಕಂಠ ಅವoಟಿ ಅಧ್ಯಕ್ಷರು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲೂಕ ಘಟಕ ಗೌಡಪ್ಪ ಗೌಡ ಪಾಟೀಲ್ ಆಂದೋಲ, ಶಿವನಗೌಡ ಪಾಟೀಲ್ ಹಂಗರಗಿ, ಶರಣಬಸವ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ಬಾಪುಗೌಡ ಪಾಟೀಲ್ ಬಿರಾಳ, ಗುರುಲಿಂಗಪ್ಪ ಗೌಡ ಮಾಲಿಪಾಟೀಲ್ ಆಂದೋಲ, ಸದಾನಂದ ಪಾಟೀಲ್ ಮಾಂತೇಶ್ ಎಸ್ ಹರ್ವಾಳ್ ಮಲ್ಲನಗೌಡ ಕನ್ಯಾ ಕೋಳೂರ, ಅಖಂಡಪ್ಪ ಎಂ. ಕಲ್ಲಾ ಮನವಿ ಮಾಡಿದ್ದಾರೆ.