ವೈಜನಾಥ ಪಾಟೀಲ ಮತ್ತು ಪ್ರಾಮಾಣಿಕತೆ

0
149

ನಾನು ಮತ್ತು ಪಾಟೀಲರು ಸಮಾಜವಾದಿಗಳ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಲು ಹೈದ್ರಾಬಾದ್‌ಗೆ ಪಾಟೀಲರ ಹಳೆಯ ಅಂಬ್ಯಾಸಿಡರ್ ಕಾರಿನಲ್ಲಿ ಗುಲ್ಬರ್ಗದಿಂದ ಹೋಗಿದ್ದೇವು.

ಸಮಾವೇಶದಲ್ಲಿ ಭಾಗವಹಿಸುವುದರ ಜೊತೆಗೆ ಆಂಧ್ರ ಸರ್ಕಾರ ಅಲ್ಲಿಯ ಐಎಎಸ್ ಅಧಿಕಾರಿಯಾದ ಗ್ರಿಕಲಾನಿಯವರ ನೇತೃತ್ವದಲ್ಲಿ ತೆಲಂಗಾಣದಲ್ಲಿ ಏಕೆ ಪರಿಚ್ಚೇದ ೩೭೧ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ? ಎನ್ನುವುದನ್ನು ಅಭ್ಯಸಿಸಲು ಒಂದು ಸಮಿತಿಯನ್ನು ರಚಿಸಲಾಗಿದ್ದು, ಆ ಅಧಿಕಾರಿಯೊಂದಿಗೆ ಚರ್ಚೆಮಾಡುವುದು ಅವರ ಭೇಟಿಯ ಉದ್ದೇಶವಾಗಿತ್ತು.

Contact Your\'s Advertisement; 9902492681

ಗುಲ್ಬರ್ಗದಿಂದ ಅವರು ಸರಿಯಾದ ಸಮಯಕ್ಕೆ ಬಿಟ್ಟರಾದರೂ ರಸ್ತೆಯ ಮಧ್ಯದಲ್ಲಿ ಅವರ ಅಂಬ್ಯಾಸಿಡರ್ ಕಾರು ಕೈಕೊಟ್ಟಿತು. ಹೇಗೂ ದುರಸ್ತಿಮಾಡಿಸಿಕೊಂಡು ಅವರು ಸ್ವಲ್ಪ ವಿಳಂಬವಾಗಿ ಹೈದ್ರಾಬಾದ್ ತಲುಪಿದರು.ಅಲ್ಲಿ ಪಾಟೀಲರು ತಮ್ಮ ಇಬ್ಬರು ಬಿಹಾರಿ ಗೆಳೆಯರನ್ನು ಭೇಟಿಯಾದಾಗ, ಒಬ್ಬ ಬಿಹಾರಿ ಗೆಳೆಯ ಮತ್ತೊಬ್ಬನಿಗೆ ಪಾಟೀಲರ ಪರಿಚಯ ಮಾಡಿದ: ” ಹಿ ಈಜ್ ವೈಜನಾಥ ಪಾಟೀಲ್ ಅಂಡ್ ಹಿ ಈಜ್ ಆನ್ ಹಾನೆಸ್ಟ್ ಪಾಲಿಟೀಶಿಯನ್”. ಅದಕ್ಕೆ ಪಾಟೀಲರು ತಟ್ಟನೆ “ನೋ, ನೋ, ಐ ಟೇಕ್ ಮನಿ ಫ್ರಮ್ ಪೀಪಲ್ ಬಟ್ ಐ ಸ್ಪೆಂಡ್ ಫರ್ ದೆಮ್”. ಎಷ್ಟು ಜನ ರಾಜಕಾರಣಿಗಳು ಈ ರೀತಿಯ ಉತ್ತರ ನೀಡಬಹುದು ನೀವೆ ಯೋಚಿಸಿ?

-ಶಿವಶಂಕರ ಗಾರಂಪಳ್ಳಿ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here