ಯುವಕರು ಶಿವಾಜಿ ಮಹಾರಾಜರ ದೇಶಪ್ರೇಮ ಮೈಗೂಡಿಸಿಕೊಳ್ಳಿ: ಸೂಫಿಯಾ ಸುಲ್ತಾನ

0
39

ಸುರಪುರ: ಇಂದಿನ ನಮ್ಮ ಯುವ ಪೀಳಿಗೆಯು ಶಿವಾಜಿ ಮಹಾರಾಜರ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ಇತಂಹ ಮಹಾನ ಪುರುಷರ ತತ್ವಗಳನ್ನು ಅಳವಡಿಸಿಕೊಂಡು ಮಹಾನ ದೇಶಭಕ್ತರಾಗಿ ಉತ್ತಮ ಸಮಾಜವನ್ನು ಸಾಧ್ಯ ಎಂದು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮಾತನಾಡಿದರು.

ನಗರದ ತಹಸಿಲ್ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಶಿವಾಜಿ ಮಹಾರಾಜನಲ್ಲಿ ಸಾಹಸ ಮತ್ತು ದೇಶಪ್ರೇಮ ಬೆಳೆಸುವಲ್ಲಿ ಅವರ ತಾಯಿ ಜೀಜಾಯಿಬಾಯಿಯ ಪಾತ್ರ ದೊಡ್ಡದಿದ್ದು,ಇಂದಿನ ತಾಯಂದಿರು ಜೀಜಾಬಾಯಿಯಾಗಿ ತಮ್ಮ ಮಕ್ಕಳನ್ನು ಬೆಳೆಸಬೇಕೆಂದರು.

Contact Your\'s Advertisement; 9902492681

ಉಪನ್ಯಾಸಕರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಪಂಡಿತ ಜನಾರ್ಧನರಾವ್ ಪಾಣಿಭಾತೆ ಮೊಘಲ ಅರಸರ ಆಡಳಿತದಲ್ಲಿ ಅವನತಿಹೊಂದುತ್ತಿರುವ ನಮ್ಮ ಸನಾತನ ಹಿಂದು ಧರ್ಮವನ್ನು ತನ್ನ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡು ಮೊಘಲರ ದಾಳಿ ಮತ್ತು ಬಲವಂತದಿಂದ ಮತಾಂತರವನ್ನು ತಡೆದು ಹಿಂದು ಧರ್ಮವನ್ನು ಪುರ್ನ ಪ್ರತಿಷ್ಠಾಪನೆಗೊಳಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದರು.

ಶಿವಾಜಿ ಮಹಾರಾಜರ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಲ್ಲ ಹಿಂದೆ ಸ್ವಾತಂತ್ರ್ಯ ಹೋರಾಟಗಳು ನಡೆಯುತ್ತಿರುವಾಗ ಜನರನ್ನು ಪ್ರೇರೆಪಿಸಲು ಮತ್ತು ಒಂದೆಡೆ ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಎರಡು ರಾಷ್ಟ್ರೀಯ ಹಬ್ಬಗಳನ್ನು ಆಚರಣಮಾಡಲು ಪ್ರಾರಂಭಿಸಿದರು ಅದರಲ್ಲಿ ಒಂದು ಗಣೇಶ ಚರ್ತುಥಿ ಹಬ್ಬ ಮತ್ತು ಛತ್ರಪತಿ ಶಿವಾಜಿ ಮಹರಾಜರ ಜಯಂತಿ ಆಚರಣೆಗಳನ್ನು ಮಾಡಿ ಜನರನ್ನು ಪ್ರೇರೆಪಿಸಿದ ಉದಾರಹಣೆಗಳಿವೆ ಉತ್ತರದಲ್ಲಿ ಶಿವಾಜಿ ಮಹರಾಜರು ಮತ್ತು ದಕ್ಷಿಣದಲ್ಲಿ ಸುರಪುರದ ಗಡ್ಡಿಪಿಡ್ಡನಾಯಕರಂತಹವರು ಔರಂಗಜೇಬನನ್ನು ಸೂಲಿಸಿರುವುದರಿಂದ ಇಂದಿಗೂ ನಮ್ಮ ಸಂಸ್ಕೃತಿ ಹಾಗೂ ಧರ್ಮ ಉಳಿದಿದೆ ಇಲ್ಲವಾದರೆ ನಮ್ಮ ದೇಶವುಕೂಡಾ ಇಸ್ಲಾಂ ದೇಶವಾಗುತಿತ್ತು ಎಂದು ಹೇಳಿದರು.

ಇದಕ್ಕೂ ಮೂದಲು ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರದೆ ಇರುವುದಕ್ಕೆ ಬಾವುಸಾರ ಕ್ಷತ್ರಿಯ ಸಮಾಜದ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಯಾವೊಬ್ಬ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿಲ್ಲ ಪೂರ್ವಭಾವಿ ಸಭೆಯಲ್ಲಿ ಕಡ್ಡಾಯವಾಗಿ ಹಾಜರಾಗಲು ತಾಲೂಕು ಆಡಳಿತ ಸೂಚಿಸಿದ್ದರು ಸಹ ಯಾವೊಬ್ಬ ಅಧಿಕಾರಿಗಳು ಬಾರದೆ ಇರುವುದನ್ನು ನೋಡಿದರೆ ಅಧಿಕಾರಿಗಳು ತಾಲೂಕು ಆಡಳಿತಕ್ಕೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವಮಾನಿಸುತ್ತಿದ್ದಾರೆ. ತಾಲೂಕು ಆಡಳಿತದಿಂದ ಕಾರ್ಯಕ್ರಮವನ್ನು ಆಯೋಜಿಸುವ ಪ್ರಯೋಜನವೇನು ತಕ್ಷಣವೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು. ತಹಶೀಲ್ದಾರು ಸುಫಿಯಾ ಸುಲ್ತಾನವರು ಕಾರ್ಯಕ್ರಮ ಗೈರಾದ ಎಲ್ಲಾ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರಾಕೇಶ ಹಂಚಾಟೆ, ರಾಮಚಂದ್ರ ಟೊಣಪೆ, ಭೀಮಣ್ಣ ಸಿಂಧೆ ಪಡಕೋಟೆ ವೇದಿಕೆಯಲ್ಲಿದ್ದರು, ಅಮರೇಶ ಜಾಲಿಬೆಂಚಿ, ರಾಜುಪುಲ್ಸೆ, ಗೊವಿಂದ ಮಾಳದ್ಕರ್, ದಾಮೊದರ್, ಮುರಳಿ ಅಂಬುರೆ, ವಿನೊದ ಕಾಂಬ್ಳೆ, ಪ್ರವಿಣ ವಿಭೂತೆ, ರಮೇಶ ಅಂಬುರೆ, ನೂತನ, ಶರಣು ನಾಯಕ, ದೀಪಕ ಚವ್ಹಾಣ, ಅಂಬಾಜಿ ಕಾಂಬ್ಳೆ, ಮಲ್ಲಕಾರ್ಜುನ ದೈಜೊಡ್, ಶ್ಯಾಮ ಚವ್ಹಾಣ ಸೇರಿದಂತೆ ಇನ್ನಿತರರಿದ್ದರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here