ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಭೂಕಂಪ ಸ್ಟೋಟಿಸಲಿದೆ: ಮಾಲೀಕಯ್ಯ ಗುತ್ತೇದಾರ

0
96

ಕಲಬುರಗಿ: ಲೋಕಸಭಾ ಚುನಾವಣಾ ಫಲಿತಾಂಶ ಬಂದ ಮೇಲೆ ರಾಜ್ಯದಲ್ಲಿ ದೊಡ್ಡ ಭೂಕಂಪ ಆಗಲಿದ್ದು, ದುಶ್ಶಾಸನ, ದುರ್ಯೋಧನ ಎಲ್ಲಾನೂ ಪ್ರಿಯಾಂಕ ಖರ್ಗೇನೇ ಆಗತಾರೆ, ಮಗನ ಕಾರಣಕ್ಕೆ ಅಪ್ಪ ಮಲ್ಲಿಕಾರ್ಜುನ ಖರ್ಗೆ ಸೋಲಲಿದ್ದಾರೆ, ರಾಜ್ಯದಲ್ಲಿ ಬಿಜೆಪಿಗೆ 22 ಸೀಟು ಗೆಲ್ಲೋದು ಖಚಿತ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿದ್ದರು.

ಅವರು ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಖರ್ಗೆ ಅವರಿಗೆ ಮಗನ ಮೇಲಿನ ವ್ಯಾಮೋಹಕ್ಕೆ ಪಕ್ಷ ಹಾಗೂ ಪಕ್ಷದ ನಾಯಕರಿಗೆ ತುಳಿಯುತಾ ಬಂದಿದ್ದಾರೆ ಎಂದು ಆರೋಪಿಸಿ, ಸೋಲಿಲದ ಸರದಾರನಿಗೆ ಈ ಬಾರಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರು ಸೋಲಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದರು.

Contact Your\'s Advertisement; 9902492681

ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಬಿಜೆಪಿ ಗೇಲ್ಲುವುದು ಖಚಿತ.  23ರ ಫಲಿತಾಂಶದ ನಂತರ ರಾಜ್ಯ ಸೇರಿದಂತೆ ಜಿಲ್ಲೆಗಳ ರಾಜಕೀಯದಲ್ಲಿ ಭೂಕಂಪ ಆಗಲಿದೆ ಎಂದರು.

ಸೋತ ಪೈಲ್ವಾನರು ತೊಡೆತಟ್ಟುತ್ತಿದ್ದಾರೆ ಎಂಬ ಖರ್ಗೆ ಟೀಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರ ಎಲ್ಲಾ ಆರೋಪಗಳಿಗೆ 23 ರಂದು ಲೋಕಸಭಾ ಫಲಿತಾಂಶ ಉತ್ತರಕೊಡಲಿದೆ ಎಂದು ಪ್ರತಿಕ್ರಿಯಿಸಿದರು. ಚಿಂಚೋಳಿ ಉಪ ಚುನಾವಣೆ ಪ್ರಚಾರದ ಕುರಿತು ಮಾತನಾಡಿ, ಅನಾರೋಗ್ಯದ ಕಾರಣದಿಂದ ನಾನು ಪ್ರಚಾರಕ್ಕೆ ಬಂದಿಲ್ಲ. ನಾಳೆಯಿಂದ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸೂರ್ಯ ಕಾಂತ್ ನಾ ಕೇದಾರ್ ಅವ್ವನ ಮ್ಯಾಕೇರಿ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಭಾಗ್ಯ ಸಂತೋಷ್ ತಳವಾರ್ ದೇವಿಂದ್ರ ರೆಡ್ಡಿ ಸಂಗಣ್ಣ ಇಜೇರಿ ಬಸವರಾಜ್ ಗುಂಡ ಲಗೇರಿ ರೇವಣಸಿದ್ದಪ್ಪ ಆಲ್ ಬಾವಿ ರೋಹಿತ್ ಕಲ್ಲೂರ್ ಅನಿತಾ ಕೊರಬ ಮಲ್ಲಿಕಾರ್ಜುನ್ ಕೃಷ್ಣ ಜಿ ಬಸವರಾಜ್ ಸೊಪ್ಪುಗಳ ಚೆನ್ನಪ್ಪ ಚಿನ್ನು ಮಳ್ಳಿ ನಿಂಗಣ್ಣ ಬಸಯ್ಯ ಗುತ್ತೇದಾರ್ ದೇವಿಂದ್ರ ಜಮಾದಾರ್ ಸಂತೋಷ್ ತಳವಾರ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here