” ಎಮ್ಮೆಗಳು ಮಾರಾಟವಾಗಿದ್ದನ್ನು ನೋಡಿದ್ವಿ ಈಗ ಜಾಧವ್ ನಂತ ಎಮ್ಮೆಲ್ಲೆ ಮಾರಾಟವಾಗಿದ್ದಾನೆ”: ಸಿದ್ದರಾಮಯ್ಯ

0
89

ಕಲಬುರಗಿ: ಕಾಂಗ್ರೇಸ್ ನವರು ದೇಶಕ್ಕಾಗಿ ಜೈಲಿಗೆ ಹೋಗಿದ್ದಾರೆ. ಆದರೆ ಬಿಜೆಪಿಯವರು ಏನಾದರೂ ಹೋಗಿದ್ದರೆ ಅದು ಭಷ್ಟಾಚಾರ ಮಾಡಿ ಜೈಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತೀಕ್ಷ್ಣವಾಗಿ ಟೀಕಿಸಿದರು.

ಚಿಂಚೋಳಿ ಮತ ಕ್ಷೇತ್ರದ ಕೊಡದೂರು ಗ್ರಾಮದಲ್ಲಿ ನಡೆದ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಆಹಾರ ಭದ್ರತೆ ಕಾಯಿದೆ, ಶೈಕ್ಷಣಿಕ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಹಾಗೂ ನರೇಗಾ ಜಾರಿಗೆ ತಂದಿದ್ದು ಮಾಜಿ‌ಪಿಎಂ ಮನಮೋಹನಸಿಂಗ್ ಅಂತ ಒಂದಾದರೂ ಇಂತ ಯೋಜನೆ ತಂದಿದ್ದರೇ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದರು.

Contact Your\'s Advertisement; 9902492681

ಬಿಜೆಪಿಯವರು ಲೂಟಿಕೋರರು ಎಂದು ಜರಿದ್ದ ಮಾಜಿ‌ ಸಿಎಂ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ‌ನಾಯ್ಡು, ಹಾಲಪ್ಪ, ಜನಾರ್ಧನರೆಡ್ಡಿ ಅಮಿತ್ ಶಾ  ಜೈಲಿಗೆ ಹೋಗಿ ಬಂದವರು. ಜೈಲಿಗೆ ಹೋಗಿದ್ದು ಯಾಕೆ? ಬೀಗತನ ಮಾಡಕ್ಕೋಗಿದ್ರಾ? ಎಂದು ಪ್ರಶ್ನಿಸಿದರು.

ಜಾಧನ್ ಅವರನ್ನು ಏಕವಚನದಲ್ಲಿ ಝಾಡಿಸಿದ ಸಿದ್ದರಾಮಯ್ಯ, ಎರಡು ಸಲ ನೀವು ಆರಿಸಿ ಕಳಿಸಿದ ಜಾಧವ್ ಬಿಜೆಪಿಗೆ ಹೋಗಿದ್ದು ಮತದಾರರಿಗೆ ಅಗೌವರ ತೋರಿಸಿದ್ದಾನೆ. ಅವನಿಗೆ ಮರ್ಯಾದೆ‌ ಇದೆಯೇನ್ರೀ ಎಂದು ಟೀಕಿಸಿದರು.

ಎಮ್ಮೆಗಳು ಮಾರಾಟವಾಗಿದ್ದನ್ನು ನೋಡಿದ್ದೆವು‌ ಜಾಧವ್ ಬಿಜೆಪಿಗೆ ಮಾರಾಟವಾಗಿ ಎಮ್ಮೆಲ್ಲೆ ರಾಟವಾಗಿರುವುದನ್ನು ನೋಡುವಂತಾಯ್ತು ಎಂದು ಮಾರ್ಮಿಕವಾಗಿ ಹೇಳಿದರು. ನಿಮ್ಮ ನಂಬಿಕೆಗೆ ದ್ರೋಹ ಮಾಡಿದ ಜಾಧವ್ ತನ್ನ ಮಗನನ್ನು ನಿಲ್ಲುಸಿದ್ದಾನೆ ಅವನನ್ನು ಸೋಲಿಸಿ ಎಂದು ಕರೆ ನೀಡಿದರು.‌ ಜಾಧವ್ ಹಾಗೂ ಅವನ ಮಗ ಇಬ್ಬರು ಸೋತು ಖರ್ಗೆ ಹಾಗೂ ರಾಠೋಡ್ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸಂಸದರಾದ ಹಾಗೂ ಕಾಂಗ್ರೇಸ್ ನಾಯಕರಾದ ಎಂ ಮಲ್ಲಿಕಾರ್ಜುನ ಖರ್ಗೆ,  ಎಂಎಲ್ ಸಿಗಳಾದ ಸಿಎಂ ಇಬ್ರಾಹಿಂ, ಶರಣಪ್ಪ  ಮಟ್ಟೂರು, ಶಾಸಕರಾದ ಅಮರೇಗೌಡ ಭಯ್ಯಾಪುರ, ನಾರಾಯಣರಾವ್, ಜಗದೇವ್ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಭೀಮಣ್ಣ ಸಾಲಿ, ರಾಜೇಶ್ ಗುತ್ತೇದಾರ ಸೇರಿದಂತೆ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here