ಕೊರೋನಾ ಭೀತಿ: ಕಲ್ಯಾಣ ಕರ್ನಾಟಕದ ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿ

0
42

ಕಲಬುರಗಿ: ಕೊರೋನಾ ಭೀತಿ ಎದುರಿಸಲು ಕೇಂದ್ರ ಸರಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ದೇಶದ ರೈತರು ಮತ್ತು ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಲ್ಲದೇ ಜಿಲ್ಲೆಯಲ್ಲಿ ಓರ್ವ ರೈತರ ಬೆಳೆದ ಕಲ್ಲಂಗಡಿ ಹಣ್ಣುಗಳು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗದೆ ಸ್ವಂತ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲಾಡ್ ಚಿಂಚೋಳಿಯಲ್ಲಿ ಇತ್ತೀಚಿಗೆ ನಡೆದಿದೆ.

Contact Your\'s Advertisement; 9902492681

ಈಗ ಟನ್ ಗಟ್ಟಲೇ ಈರುಳ್ಳಿ ಬೆಳೆದ ರೈತರು ಸಂಕಷ್ಟ ಎದುರಿಸುವಂತಹ ಸ್ಥಿತಿ ಬಂದಿದೆ ಎಂದು ರೈತ ಮುಖಂ CPI(M) ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.

ಇಲ್ಲಿನ ಚಿಂಚೋಳಿ ತಾಲ್ಲೂಕಿನ ರಟಕಲ್ ಗ್ರಾಮದ ಈರುಳ್ಳಿ ಬೆಳೆದ ರೈತರ ಸಂಜುಕುಮಾರ ಶಂಕರರಾವ್ ಪಡಶೆಟ್ಟಿ. ತನ್ನ 2 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು, ಕೊರೋನಾ ವೈರಸ್ ಭೀತಿಯಿಂದ ಜಿಲ್ಲಾದ್ಯಂತ ಲಾಕ್ ಡೌನ್ ನಿಷೇದಾಜ್ಞೆ ಜಾರಿ ಇರುವುದರಿಂದ ಈರುಳ್ಳಿ ಬೆಳೆಗಾರರು ಮಾರಟಕ್ಕಾಗಿ ಕಣ್ಣೀರು ಇಡುವಂತಹ ದುಸ್ಥಿತಿಗೆ ಎದುರಿಸುವಂತಹದಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ ತೋಟಗಾರಿಕಾ ಕ್ಷೇತ್ರದಲ್ಲಿ ಬೆರಳಿಣಿಕೆಷ್ಟು ಬೆಳಗಾರರಿದ್ದು, ಅವರ ಸಂಕಷ್ಟಕ್ಕೆ ಸರಕಾರ ನಿಲ್ಲಬೇಕು. ದೇಶದಲ್ಲಿ ಮಹಾಮಾರಿ ಉದ್ಭವವಾಗಿದ್ದು, ಅಲ್ಲದೇ ಇದರಿಂದ ರೈತರು ಸಮಸ್ಯೆ ಬಗ್ಗೆ ಸರ್ಕಾರ ಮುತುವರ್ಜಿ ವಹಿಸಿ ಕೂಡಲೆ ಸರಕಾರ ಮಧ್ಯಪ್ರವೇಶ ಮಾಡಿ ಬೆಳೆಗಾರರಿಗೆ ಪರಿಹಾರ ನ್ಯಾಯ ಒದಗಿಸಲು ನೇರ ವಾಗಬೇಕು ಎಂದು ರೈತ ಮುಖಂಡ ಮಮಶೆಟ್ಟಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here