ಸುರಪುರ:ಪದವಿ ಇತಿಹಾಸ ಪರೀಕ್ಷೆಯಲ್ಲಿ ಅಕ್ರಮ  11 ವಿದ್ಯಾರ್ಥಿಗಳು ಡಿಬಾರ್

0
269

ಸುರಪುರ: ಕಲಬುರಗಿ ವಿಶ್ವವಿದ್ಯಾಲಯದ ಪದವಿ ಎರಡನೆ ಸೆಮಿಸ್ಟರ್ ಇತಿಹಾಸ ವಿಷಯಕ್ಕೆ ನಡೆದ ಪರೀಕ್ಷೆಯಲ್ಲಿ ಸುರಪುರದ ಎರಡು ಕೇಂದ್ರಗಳಲ್ಲಿ ಒಟ್ಟು ಹನ್ನೊಂದು ಜನ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ.

ಇಂದು ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ ಶ್ರೀ ಪ್ರಭು ಮಹಾವಿದ್ಯಾಲಯದಲ್ಲಿ 9 ಹಾಗು ಡಾ:ಬಿ.ಆರ್.ಅಂಬೇಡ್ಕರ್ ಮಹಾವಿದ್ಯಾಲಯ ರಂಗಂಪೇಟೆಯಲ್ಲಿ ಇಬ್ಬರು ಸೇರಿದಂತೆ ಒಟ್ಟು 11 ಜನ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ.

Contact Your\'s Advertisement; 9902492681

ಕಲಬುರಗಿ ವಿವಿಯ ಡಾ:ಶಿವರಾಜಪ್ಪ ರಾಯಚೂರು ಹಾಗು ಪ್ರೋ: ಶರಣು ಜೆ.ಅರಕೇರಾ ಇವರುಗಳ ನೇತೃತ್ವದ ಜಾಗೃತ ತಂಡ ಪರೀಕ್ಷಾ ಕೋಠಡಿಗೆ ಭೇಟಿ ನೀಡಿ ಅಕ್ರಮ ನಡೆಸಿದ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here