ಕಲಬುರಗಿ: ಬಂಜಾರ ಸಮುದಾಯಕ್ಕೆ ಪರೀಕ್ಷೆ ಎದುರಾಗಿದೆ. ಕಾಂಗ್ರೇಸ್ ಪಕ್ಷಕ್ಕೆ ಜಾಧವ್ ದೋಖಾ ಮಾಡಿದ್ದರಿಂದ ಈ ಪರೀಕ್ಷೆ ಎದುರಾಗಿದೆ. ಕಾಂಗ್ರೇಸ್ ಪಕ್ಷ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ. ಹಾಗಾಗಿ ಸುಭಾಷ್ ರಾಠೋಡ್ ಅವರಿಗೆ ಟಿಕೇಟ್ ಕೊಟ್ಟಿದೆ ನೀವು ಆಶೀರ್ವದಿಸಿ ಎಂದರು ಶಾಸಕ ನಾರಾಯಣರಾವ್ ಕರೆ ನೀಡಿದರು.
ಅವರು ಚಿಂಚೋಳಿಯಲ್ಲಿ ಏರ್ಪಡಿಸಲಾಗಿದ್ದ ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿ, ಮೇ 23 ರ ನಂತರ ಮೋದಿಯಾಗಲೀ ಇರುವುದಿಲ್ಲ ರಾಜೀನಾಮೆ ನೀಡಿ ತನ್ನ ಮೊದಲು ಕೆಲಸ ಮಾಡಲು ಗುಜರಾತ್ ಗೆ ವಾಪಸ್ ಹೋಗಲಿದ್ದಾರೆ. ಈ ಸಲದ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಅವರ ಮಗ ಇಬ್ಬರೂ ಸೋಲಲಿದ್ದಾರೆ.
ಬಂಜಾರ ಸಮುದಾಯದ ಜನರು ಪ್ರಮಾಣ ಮಾಡಿ ನೀವು ಸುಭಾಷ್ ರಾಠೋಡ್ ಅವರನ್ನು ನೀವು ಗೆಲ್ಲಿಸಿ. ನಿಮ್ಮ ಬೆನ್ನಿಗೆ ಲಿಂಗಾಯತ ಸಮುದಾಯ, ಮುಸಲ್ಮಾನರು ಹೀಗೆ ಎಲ್ಲ ಪ್ರಮುಖ ಸಮುದಾಯದವರು ಇದ್ದಾರೆ, ಎಂದರು. ಸಂವಿಧಾನ ರಕ್ಷಿಸುವವರನ್ನು ನೀವು ಆರಿಸಿತನ್ನಿ ಜಾಧವ್ ಹಾಗೂ ಅವರ ಮಗನನ್ನು ಸೋಲಿ ಎಂದು ಕರೆ ನೀಡಿದರು.
ಮಾಜಿ ಸಚಿವ ಬಾಬುರಾವ್ ಚವ್ಹಾಣ್ ಮಾತನಾಡಿ ನಾನು ಮೊದಲು ಕಾಂಗ್ರೇಸ್ ನಲ್ಲಿ ಇದ್ದೆ ಯಾವುದೋ ಕಾರಣಕ್ಕೆ ಮುನಿಸಿಕೊಂಡು ಹೊರಗೆ ಹೋಗಿದ್ದೆ. ಈಗ ಮತ್ತೆ ಬಂದಿದ್ದೇನೆ ಇದಕ್ಕೆ ಕಾರಣ, ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ದಿ ಪರ ಚಿಂತನೆ.
ಈ ಚುನಾವಣೆ ಉಮೇಶ್ ಜಾಧವ್ ರಾಜೀನಾಮೆ ಕಾರಣ ಬಂದಿದೆ. ನಾನು ಚವ್ಹಾಣ್, ಬೆಳಮಗಿ, ಜಾಧವ್ ಎಲ್ಲರೂ ಶಾಸಕರಾಗಿದ್ದೇವೆ. ಈ ಸಲ ನೀವು ಸುಭಾಷ್ ರಾಠೋಡ್ ಅಚರಿಗೆ ಆಶೀರ್ವಾದ ಮಾಡಿ ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಡಿಸಿಎಂ ಡಾ ಜಿ ಪರಮೇಶ್ವರ, ಸಚಿವರಾದ ಪ್ರಿಯಾಂಕ್ ಖರ್ಗೆ, ಪಿ.ಟಿ.ಪರಮೇಶ್ವರ ನಾಯಕ್, ರಹೀಂಖಾನ್, ಶಾಸಕರಾದ ಎಚ್ ಟಿ ಸೋಮಶೇಖರ್, ಅಜಯ್ ಸಿಂಗ್ ಮಾಜಿ ಸಚಿವರಾದ ಬಾಬುರಾವ್ ಚವ್ಹಾಣ್, ಮಾಜಿ ಶಾಸಕಿ ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.