ಓರಿಯಂಟ್ ಸಿಮೆಂಟ್ ಕಂಪನಿಯಿಂದ 500 ಆಹಾರ ಕಿಟ್ ಹಸ್ತಾಂತರ

0
41

ಚಿತ್ತಾಪುರ: ಕೊರೊನ್ ವೈರಸ್ ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಹಿನ್ನೆಲೆ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ಆಹಾರಕ್ಕಾಗಿ ಪರದಾಡುತ್ತಿರುವ ನಿರ್ಗತಿಕರಿಗೆ ಕಡು-ಬಡವರಿಗೆ ನಿಡುವಂತೆ ಓರಿಯಂಟ್ ಸಿಮೆಂಟ್ ಕಂಪನಿಯಿಂದ 500 ಆಹಾರ ಕಿಟ್ ಅನ್ನು ಓರಿಯಂಟ್ ಕಂಪನಿಯ ಮುಖ್ಯಸ್ಥ ಸತ್ಯ ಭ್ರಾತಾಪ್ ಶರ್ಮಾ ತಾಲೂಕು ಆಡಳಿತಕ್ಕೆ ನೀಡಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರ್ಹ ಕುಟುಂಬಕ್ಕೆ 16 ಕೆ.ಜಿ,ತೂಕದ ಆಹಾರ ಕಿಟ್ ನಲ್ಲಿ ಅಕ್ಕಿ (ಸೋನಾಮಸೂರಿ) 5 ಕೆ.ಜಿ, ಗೋಧಿ ಹಿಟ್ಟು 5 ಕೆ.ಜಿ, ತೊಗರಿ ಬೇಳೆ 2 ಕೆ.ಜಿ, ಸಕ್ಕರೆ 2 ಕೆ.ಜಿ, ಅಡುಗೆ ಎಣ್ಣೆ 1 ಕೆ.ಜಿ, ಸಾಸುವೆ 50 ಗ್ರಾಂ, ಜೀರಿಗೆ 50 ಗ್ರಾಂ, ಅರಶಿಣ 100 ಗ್ರಾಂ, ಪುಡಿಕಾರ 100 ಗ್ರಾಂ, 1 ಡೆಟಾಲ್ ಸಾಬೂನ್, 1 ಸ್ಯಾನಿಟೈಜರ್, ಆಹಾರ ಕಿಟ್ ನಲ್ಲಿ ಇವೆ ಎಂದರು.

Contact Your\'s Advertisement; 9902492681

ತಾಲೂಕಿನಲ್ಲಿ ಬೇರೆ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ, ಬಂದಂತ ವಲಸೆ ಕಾರ್ಮಿಕರು, ಕಟ್ಟಡ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಹಾಗೂ ಪಡಿತರ ಚಿಟ್ಟಿ ಇಲ್ಲದವರಿಗೆ ಓರಿಯಂಟ್ ಸಿಮೆಂಟ್ ಕಂಪನಿ ನೀಡಿದ 500 ಆಹಾರ ಕಿಟ್ ಸರಬರಾಜು ಮಾಡಲಾಗುತ್ತದೆ ಎಂದು ತಹಸಿಲ್ದಾರ್ ಉಮಾಕಾಂತ್ ಹಳ್ಳೆ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಓರಿಯಂಟ್ ಕಂಪನಿಯ ಎಂಜಿಎಂ ಶಿವಾನಂದ್ ಪಾಟೀಲ್, ವೆಂಕನಗೌಡ, ಶ್ರೀಮಂತ್ ಪಟ್ಟೆದಾರ, ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here