ಯುಗ ಯುಗದ ಉತ್ಸಾಹಿ ಬಸವಣ್ಣ

0
138

“ಮತ್ತೇ ಅವತರಿಸಿ ಬರುವೆಯ ಬಸವಾ” ? ೧೨ನೇ ಶತಮಾನವು ಸುವರ್ಣ ಅಕ್ಷರಳಿಂದ ಬರೆದಿಡುವಂತಹ ಮಹತ್ವದ ಕಾಲವದು.ಶರಣ ಸಂತರ ರು ಉದಯಿಸಿದ ಸಮಯವದು,ಸಂಸ್ಕೃತಿ ಸಂಸ್ಕಾರಕ್ಕೆ ಎತ್ತಿ ಹಿಡಿದ ಕೈಗನ್ನಡಿಯ ಯುಗವದು.ನ್ಯಾಯ ನೀತಿ ಧರ್ಮ ಭಕ್ತಿ ಭಾವಗಳಲ್ಲದೆ ವಚನಗಳ ಕ್ರಾಂತಿಯ ಸಾಫಲ್ಯಕ್ಕಾಗಿ ಶ್ರಮಿಸಿದ ಸಾಂದರ್ಭಿಕವದು.ಇಂದಿಗೂ ಮುಂದೆಂದಿಗೂ ಆ ಕಾಲ ಅಜರಾಮರ,ಅಂದು ಶರಣರೆಲ್ಲರೂ ಪ್ರಾಮಾಣಿಕತೆಯ ನಿಲುವಿಗಾಗಿ ಇಡೀ ಶರಣರ ಸಮ್ಮೀಲನವು ದಾರ್ಶನಿಕವದು ಬದುಕು,ಬರಹ,ಜೀವನದ ಬಹು ಸ್ವರೂಪಿ ಹೊಂದಿದ್ದ ಒಂದು ಕುರುಹು ಆದಾಗಿತ್ತು.

ಮನುಕುಲದ ರೀತಿ, ನೀತಿ,ಆಚಾರ,ವಿಚಾರ,ನ್ಯಾಯಾ ನೀತಿ ಧರ್ಮಗಳ ಸಮಾನತೆಗೆ 900 ವರ್ಷಗಳ ಹಿಂದೆಯೇ ಕೈಗೊಂಡ ಮಾಸಿ ಹೋಗದ,ಅಳಿಸಿ ಹೋಗದ ಸದೃಶ್ಯ ಸಂಗತಿಗಳೆಂದರೆ ತಪ್ಪಾಗದು.ಈ ಭಾರತ ದೇಶದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರು ಅಣ್ಣ ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಅಧ್ಯಾಯನಗೈದು ಅರ್ಥೈಸಿಕೊಂಡವರಾಗಿದ್ದರು ಕೆಲವೊಂದು ಮಹತ್ವದ ವಿಚಾರಗಳನ್ನು ಇಂದಿನ ಪ್ರಜಾಪ್ರಭುತ್ವದ ಆಡಳಿತದ ಸಂವಿ ಧಾನದಲ್ಲಿ ಅಳವಡಿಸಿದ್ದಾರೆ ಎಂದು ಹೇಳಬಹುದು. ಅಸ್ಪೃಶ್ಯತೆ ನಿವಾರಣೆ,ಸರ್ವರಿಗೂ ಸಮಾನತೆ,ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಮೀಸಲಾತಿ,ಅಂತರ್ ಜಾತಿ ವಿವಾಹ,ಸ್ವಾತಂತ್ರ್ಯದ ಹಕ್ಕು,ಇಂತಹ ನೂರಾರು ಯೋಜನೆಗಳನ್ನು ಸಂವಿಧಾನದಲ್ಲಿ ಜಾರಿಗೆ ತಂದಿರುವುದು ನಮಗೆಲ್ಲರಿಗೂ ಸಂತೋಷವೆನಿಸುತ್ತದೆ.

Contact Your\'s Advertisement; 9902492681

ಬಾಲ್ಯದಿಂದ ಅಪಾರ ಜ್ನಾನ,ಅರಿವು ಹೊಂದಿದ್ದ ಬಸವಣ್ಣನವರು ಕುಲದಲ್ಲಿ ಬ್ರಾಹ್ಮಣ ತಂದೆ ಮಾದರಸ ತಾಯಿ ಮಾದಲಾಂಬಿಕೆಯರ ಉದರದಲ್ಲಿ ಜನಿಸಿದನಾದರು ಹತ್ತಾರು ರೀತಿಯ ಆಚಾರ ಮೌಡ್ಯಗಳ ವರ್ಣಭೆದಗಳ ಮಡಿವಂತಿಕೆಗಳಿಗೆ ಮನನೊಂದು ವಿವಿಧತೆಯಲ್ಲಿ ಏಕತೆ ಸಾರುವ ತತ್ವ ಸಿದ್ದಾಂತಗಳನರಿತು ಅನುಸರಿಸಿಕೊಂಡು ವೀರಶೈವ ಸಿದ್ಧಾಂತಗಳಿಗೆ ತಾಗಿ ಅದರ ಕುರಿತು ಸಂಪೂರ್ಣ ಅಧ್ಯಾಯನಗೈದು ಮನ ಶುದ್ದಿಯಲಿ ವಿರಶೈವನಾಗಿ ಅದರ ಪುನರುಥಾನಕ್ಕೆ ಕಾರಣರಾದರು ಬಸವಣ್ಣನವರು.

ಬಸವ ಪ್ರಜ್ನೆ ಎಂದರೆ ಸಕಲ ಜಿವಾತ್ಮರಿಗೆ ಲೇಸನ್ನೆ ಬಯಸುವ, ಮಾನವೀಯ ಮೌಲ್ಯಗಳನು ಅರಳಿಸುವ ಸಂಸ್ಕೃತಿ ಸಂಸ್ಕಾರದ ಏಳಿಗೆಗೆ ಶ್ರಮಿಸುವುದೆ ಅಂದು ಬಸವಣ್ಣನವರು ಕಂಡುಕೊಂಡಂತೆ ಆಡಳಿತದ ರೂಪರೇಷಗಳನ್ನು ಜಾರಿಗೆ ತರುವ ವ್ಯವಸ್ಥೆಯನ್ನು ಹೊಂದಿದ ಬಸವನ್ನನವರು ಬಸವ ಪ್ರಜ್ನೆಯಾಗಿತ್ತು,ಆ ಮೂಲಕ ಸಮಾಜದ ಒಳಿತಿಗಾಗಿ ಅನುಭವ, ಅನುಭಾವದ ಅವರ ಒಂದು ವಾಣಿಗಳೆ ಸಾಕ್ಷಿಯಾಗಿವೆ. “ದಯವಿಲ್ಲದಾ ಧರ್ಮ ಅದಾವುದೆನಯ್ಯ| ದಯವಿರಬೇಕು ಸಕಲ ಪ್ರಾಣಿ ಪಕ್ಷಿಗಳಲ್ಲಿ|ದಯವೇ ಧರ್ಮದ ಮೂಲವಯ್ಯ| ಕೂಡಲ ಸಂಗಮದೇವ ಎಂದು ಬಸವಣ್ಣ ನವರ ವಾಣಿಯು ಸತ್ಯವಾಗಿದೆ. ನುಡಿದಂತೆ ನಡೆದ ಶರಣರಲ್ಲಿ ಮಹಾ ಶರಣನೆನಿಸಿಕೊಂಡಿರುವರು.ಅಂದಿನ ಶಿವಶರಣರಲ್ಲಿ ಸ್ತ್ರೀ ಸಮಾನತೆ ಜಾತಿ ಕುಲಭೇದ,ಮೇಲು ಕೀಳೆಎಂಬ ಭಾವನೆಯನ್ನು ತೊಲಗಿಸಲು,ತಮ್ಮ ತಮ್ಮ ಅಭಿವ್ಯಕ್ತಿಯನ್ನ ಮಾತುಗಳನ್ನ ಹಂಚಿಕೊಳ್ಳಲು ಅಂದಿನ ವೆದಿಕೆಯೇ “ಅನುಭವ ಮಂಟಪವೆ”ಇಂದಿನ ಆಡಳಿತದ “ವಿಧಾನ ಸೌಧವವಾಗಿದೆ.” ಎಂದು ಹೇಳಬಹುದು.

ಸಿ.ಎಸ್.ಮಾಲಿಪಾಟೀಲ
ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here