ಕಲಬುರಗಿ: ಚಿಂಚೋಳಿ ಕ್ಷೇತ್ರದ ಉಪ ಚುನಾವಣೆಯ ಇಂದು ಮತದಾನ ನಡೆಯುತ್ತಿದ್ದು, ಕ್ಷೆತ್ರದಲ್ಲಿ ಕಾಂಗ್ರೆಸ್ ನಿಂದ ಹಣ ಹಂಚಿಕೆ ಮಾಡಲಾಗುತ್ತಿದೆ ಆರೋಪಿಸಿ ಮಾಜಿ ಶಾಸಕ ಡಾ.ಉಮೇಶ್ ಜಾಧವ್ ಅವರು ಪೊಲೀಸ್ ವಾಹನದ ಮುಂದೆ ಕೂತು ಪ್ರತಿಭಟನೆ ನಡೆಸಿದರು.
ಅವರು ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಕೆಲವು ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ, ಅಧಿಕಾರಿಗಳ ಹಾಗೂ ಪಂಚಾಯತ್ ಸದಸ್ಯರ ಜೊತೆಗೂಡಿ ಚಿಂಚೋಳಿಯಲ್ಲಿ ಹಣ ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರ ಕೈವಾಡವು ಇದೆ ಎಂದು ಡಾ. ಉಮೇಶ್ ಜಾಧವ್ ಪೊಲೀಸ್ ವಾಹನದ ಮುಂದೆ ಕೂತು ಪ್ರತಿಭಟನೆ ನಡೆಸಿದ್ದರು.
ಖಾನಾಪುರಕ್ಕೆ ಆಗಮಿಸಿದ ಎಸ್.ಪಿ ಯಡಾ ಮಾರ್ಟಿನ್, ಹಣ ಹಂಚಿಕೆ ಆರೋಪ ಬಿಜೆಪಿಯವರು ಮಾಡ್ತಿದ್ದಾರೆ, ನಮಗೆ ಮಾಹಿತಿ ಬಂದ ತಕ್ಷಣ ಸ್ಥಳಿಯ ಪಿ ಎಸ್ ಐ ಗೆ ಕಳುಹಿಸಿದ್ದೆ, ಎರಡು ಕಡೆಯಿಂದ ಎರಡು ರೀತಿಯಲ್ಲಿ ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ, ನಾನು ಕೂಡ ಸ್ಥಳಕ್ಕೆ ಬಂದು ಎರಡು ಪಕ್ಷದ ರಾಜಕೀಯ ಮುಖಂಡರನ್ನ ವಾಪಸ್ ಕಳುಹಿಸಿದ್ದಿನೆ, ಐದಾರು ಗಾಡಿಯಲ್ಲಿ ಹಣ ಮತ್ತು ವೆಪನ್ ನೊಂದಿಗೆ ಹಣ ಹಂಚುತ್ತಿರುವ ಆರೋಪ, ಹಣ ಹಂಚುತ್ತಿರುವ ಬಗ್ಗೆ ದೂರು ಮಾಡಿದ್ರೆ ತನಿಖೆ ಮಾಡ್ತೇವೆ, ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡ್ತಿದ್ದೆವೆ, ಹಿಂದೆ ಲೋಕಸಭೆಯಲ್ಲು ಕೂಡ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದವೆ, ನಾವು ಯಾರ ಕೂಗೊಂಬೆಗಳೆಂತೆಯು ಕೂಡ ವರ್ತಿಸ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
-ಎಸ್.ಪಿ ಯಡಾ ಮಾರ್ಟಿನ್
ಘಟನೆಯ ಕುರಿತು ಪಂಚಾಯತ್ ಸದಸ್ಯ ನಾಮದೇವ್ ರಾಠೋಡ್ ಮಾತನಾಡಿ, ಬಿಜೆಪಿಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ, ಈ ಹಿಂದೆ ಲೋಕಸಭಾ ಚುನಾವಣೆಯ ಸೇಡು ತಿರಿಸಿಕೊಳ್ಳುತ್ತಿರುವ ಜಾಧವ್, ಈ ಹಿಂದೆ ಸಚಿವ ಪರಮೇಶ್ವರ ನಾಯಕ್ ಅವರ ಮೇಲೆ ಜಾಧವ್ ಬೆಂಬಲಿಗರಿಂದ ದಾಳಿ ಮಾಡಲಾಗಿತು. ಈ ದಾಳಿಯ ಕುರಿತು ನಾನು ಬಿಜೆಪಿಯ ವಿರುದ್ದ ದೂರು ದಾಖಲಿಸಿದೆ, ಈ ಕಾರಣದಿಂದ ಅವರ ಹಳೆಯ ದ್ವೇಷದ ಹಿನ್ನಲೆಯಲ್ಲಿ ಇದೀಗ ನನ್ನ ಮೇಲೆ ಆರೋಪ ಮಾಡಿ, ಹಲ್ಲೆ ಮಾಡಿ ಕಾರಿನ ಗಾಜು ಒಡೆದಿದ್ದಾರೆಂದು ರಾಠೋಡ್ ಆರೋಪಿಸಿದ್ದರು.