ರಾಜ್ಯದ ಎರಡು ಕ್ಷೇತ್ರದ ಉಪ ಚುನಾವಣೆ ಮತದಾನ ಬಹುತೇಕ ಸುಗಮ

0
105

ಕಲಬುರಗಿ: ರಾಜ್ಯದ ಎರಡು ಕ್ಷೇತ್ರದ ಉಪಚುನಾವಣೆ ಮತದಾನ ಬಹುತೇಕ ಸುಗಮ ಹಾಗೂ ಶಾಂತಿಯುತ ನಡೆಯಿತು. ಭಾನುವಾರ ಇದ್ದಕಾರಣ ಮತದಾರರು ತಮ್ಮ ದಿನ ನಿತ್ಯ ಕೆಲಸವನ್ನು ಬದಿಗಿಟ್ಟು ಮತದಾನಕ್ಕಾಗಿ ಮನೆಯಿಂದ ಹೊರಬಂದು ಮತಚಲಾಯಿಸಿದರು.

ಚಿಂಚೋಳಿ ಕ್ಷೇತ್ರದಲ್ಲಿ ಬಹುತೇಕ ಕಡೆಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದರೆ ಇನ್ನೂ ಕೆಲವು ಕಡೆ ಮತಯಂತ್ರಗಳು ಕೈಕೊಟ್ಟಿದವು, ರುಸ್ತಂಪುರ ಸೇರಿದಂತೆ ಕೆಲವೆಡೆ ಪೋಲಿಂಗ್ ಭೂತ್ ಗಳಲ್ಲಿ ಮತಯಂತ್ರಗಳು ಸತಾಯಿಸಿದವು. ಅಲ್ಲದೇ ಕೆಲವೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಸಣ್ಣ ಪುಟ್ಟ ಘರ್ಷಣೆ ನಡೆಯಿತು. ಕಾಂಗ್ರೆಸ್ ಹಣ ಹಂಚುತ್ತಿದ್ದಾರೆ ಎಂದು ಆರೋಪಿ ಮಾಜಿ ಶಾಸಕ ಡಾ. ಉಮೇಶ್ ಜಾಧವ್ ಅವರು ಖಾನಾಪುರದಲ್ಲಿ ಪೊಲೀಸ್ ವಾಹನದ ಮುಂದೆ ಕೂತು ಪ್ರತಿಭಟನೆ ನಡೆಸಿದ ಘಟನೆಯು ನಡೆಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Contact Your\'s Advertisement; 9902492681

ಚಿಂಚೋಳಿ ವಿಧಾನಸಭಾ ಉಪ ಚುನಾವಣೆ: ಮಧ್ಯಾಹ್ನ 6 ಗಂಟೆಗೆ ಶೇ. 70.75 ರಷ್ಟು ಮತದಾನವಾಯಿತು.ಇನ್ನೂ ಸ್ಪಷ್ಟ ಮತದಾನ ಮಾಹಿತಿ ಹೊರಬೀಳಬೇಕಾಗಿದೆ.

ಕಂದಗೋಳ ವಿಧಾನಸಭಾ ಉಪ ಚುನಾವಣೆ: ಮಧ್ಯಾಹ್ನ 4 ಗಂಟೆಗೆ ಶೇ. 61.75 ರಷ್ಟು ಮತದಾನವಾಯಿತು.ಇನ್ನೂ ಸ್ಪಷ್ಟ ಮತದಾನ ಮಾಹಿತಿ ಹೊರಬೀಳಬೇಕಾಗಿದೆ.

ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್ ಅವರ ನಡುವೆ ಜಿದ್ದಾ ಜಿದ್ದಿಯಾಗಿ ಪೈಟ್ ಈ ಕ್ಷೇತ್ರದಲ್ಲಿ ಇದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here