ಅಂಬಾರಾಯ ಅಷ್ಠಗಿ ಅವರಿಂದ ಆಹಾರ ಸಾಮಗ್ರಿಗಳ ವಿತರಣೆಗೆ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಚಾಲನೆ

0
175

ಕಲಬುರಗಿ: ಕರೊನಾ ಮಹಾಮಾರಿ ರೋಗಾಣು ಬಗ್ಗೆ ಯಾರೂ ಹೆದರದೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕರೊನಾ ರೋಗವನ್ನು ಎದುರಿಸಬೇಕೆಂದು ಮಾಜಿ ಸಚಿವ ಮಾಲೀಕಯ್ಯಾ ವ್ಹಿ.ಗುತ್ತೇದಾರ ಹೇಳಿದರು.

ಕಿಲ್ಲರ್ ಕರೊನಾ ಸಂಕಷ್ಟದಲ್ಲಿರುವ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರಕಾರಿ ಮಹಿಳಾ ನಿಲಯದಲ್ಲಿನ ದಿನಗೂಲಿ ನೌಕರರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೂ ಆದ ಬಿಜೆಪಿ (ಗ್ರಾಮಾಂತರ) ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಹಾಗೂ ತಾಲೂಕಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಜಾತಾ ಅಷ್ಠಗಿ ಒಟ್ಟುಗೂಡಿ ಕೊಡಮಾಡಿದ ಕಿರಾಣಿ ಕಿಟ್ ಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಷ್ಠಗಿ ಪರಿವಾರದವರು ಇಂದಿನ ಕರೊನಾ ಸಂಕಷ್ಟದ ಸಂದಿಗ್ಧ ಸಂದರ್ಭದಲ್ಲಿಯೂ ಸಹ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಇವರ ಈ ಸೇವೆ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದರು.

Contact Your\'s Advertisement; 9902492681

ನೇತೃತ್ವ ವಹಿಸಿದ ಜಿಪಂ ಮಾಜಿ ಅಧ್ಯಕ್ಷ-ಬಿಜೆಪಿ (ಗ್ರಾಮಾಂತರ) ಜಿಲ್ಲಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಮಾತನಾಡಿ, ಕರೊನಾ ವೈರಸ್ ತಡೆಗಟ್ಟಲು ಬಿಜೆಪಿ ನೇತೃತ್ವದ ದೇಶದ ಪ್ರಧಾನಿ ನರೇಂದ್ರ ಮೋದಿಜೀ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಸರಕಾರ ಹಲವಾರು ರೀತಿಯ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ಬಡವರು, ಕೂಲಿ ಕಾರ್ಮಿಕರು ಹೆದರುವ ಅಗತ್ಯವಿಲ್ಲ ಎಂದ ಅವರು, ಕರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಬಡ ಜನರಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ಅಷ್ಠಗಿ ಪರಿವಾರದ ವತಿಯಿಂದ ಸಹಾಯ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕೋವಿಡ್ ಸೋಂಕು ಹರಡದಿರಲು ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಸುರಕ್ಷಾತಾ ನಿಯಮ ಪಾಲನೆ ಮಾಡಬೇಕೆಂದ ಅವರು, ಈ ನಿಟ್ಟಿನಲ್ಲಿ, ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹಾಗೂ ಪರಿವಾರದವರು ಕೂಡಿ ಸಮಾಜದಲ್ಲಿನ ನೋಂದಚರ ನೋವಿಗೆ ಸ್ಪಂದಿಸುತ್ತಿರುವ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು ಎಂದು ಹೇಳಿದರು.

ಯುವ ಮುಖಂಡ ಪ್ರೊ.ಯಶ್ವಂತರಾಯ ಅಷ್ಠಗಿ, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಅಷ್ಠಗಿ, ಪ್ರಮುಖರಾದ ಮಂಜು ರೆಡ್ಡಿ, ವನೀತಾ ಅಷ್ಠಗಿ, ಲಾಲ್ ಬಹಾದ್ದೂರ ಶಾಸ್ತ್ರಿ ಇಂಡೆ, ಸುನೀಲ್ ಕೊಟ್ರೆ, ಶಿವ ಆಷ್ಠಗಿ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಪ್ರಭುಲಿಂಗ ಮೂಲಗೆ, ಪ್ರಭವ ಪಟ್ಟಣಕರ್, ರಾಜೇಶ ಹಾಗರಗಿ, ರಮೇಶ ಹುಲಿಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ಕಣ್ಣೂರ, ಕಾನೂನು ಸಲಹೆಗಾರ ಭರತೇಶ ಶೀಲವಂತರ್,ರಾಜೇಶ್ ಹಾಗರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.m

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here