ಸರ್ಕಾರ ಲಾಕ್ ಡೌನ್ ನಿಯಮ ಸಡಿಲಗೊಳಿಸಿದರೆ, ಕರೊನಾ ವೈರಸ್ ಸಡಿಲು ಗೊಳಿಸಿಲ್ಲ. ಸರ್ಕಾರ ಕೆಲವು ನಿರ್ಣಯಗಳು ತರಾತುರಿಯಿಂದ ತೆಗೆದುಕೊಂಡ ಹಾಗೆ ಅನಿಸುತ್ತಿದೆ. ಏಕೆಂದರೆ ಇನ್ನೂ ಸ್ವಲ್ಪ ದಿನ ಲಾಕ್ ಡೌನ್ ಸಡಿಲಗೊಳಿಸದೆ ಬಿಗಿಗೊಳಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿತ್ತು. ಈಗ ನಾವೇನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಮುನ್ನೆಚ್ಚರಿಕೆ ವಹಿಸಿ ರೋಗ ಹರಡದಂತೆ ನಮ್ಮನ್ನು ನಾವೆ ಎಚ್ಚರ ವಹಿಸಿಕೊಂಡು ಕರೋನಾ ವೈರಸ್‌ಗೆ ಮೆಟ್ಟಿ ನಿಂತು ಜೀವನ ನಡೆಸುವುದು ಅನಿವಾರ್ಯದ ಸಂದಿಗ್ಧ ಪರಿಸ್ಥಿತಿ ಆಗಿದೆ.
ಇಂಥ ಸ್ಥಿತಿಯಲ್ಲಿ ನಾವು ಯಾರದೆ ಸಹಾಯ ಸಹಕಾರವಿಲ್ಲದೇ ಸ್ವಾತಂತ್ರವಾಗಿ ಜೀವಿಸುವುದು ಕಲಿತುಕೊಳ್ಳಬೇಕು. ಇಷ್ಟು ದಿನಗಳವರೆಗೆ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಡಳಿತ, ಪೊಲೀಸ್ ಅಧಿಕಾರಿಗಳು, ಅಂಗನಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪತ್ರಿಕಾ, ಮಾಧ್ಯಮದ ಸಹೋದರರು ನಮ್ಮನ್ನೆಲ್ಲ ಕಾಪಾಡಿ ರೋಗ ಬರದಂತೆ ರPಣೆ ಮಾಡಿzರೆ ಅವರಿಗೆ ಅನಂತ ಧನ್ಯವಾದಗಳು. ಇನ್ನು ಮುಂದೆ ನಮ್ಮ ನಿರ್ಲP ಬೇಡ ಏಕೆಂದರೆ ನಿರ್ಲಕ್ಷಿಸಿದ ಹಲವಾರು ದೇಶಗಳ ಹೆಣದ ರಾಶಿಗಳು ನಾವು ನೋಡುತ್ತಿzವೆ. ಹಾಗಾಗಿ ಇನ್ನು ಮುಂದೆ ನಿರ್ಲಕ್ಷಿಸಿದರೆ ರೋಗದ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಎಣಿಸುತ್ತ ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ.
ನಮ್ಮ ಕಾಯಕದೊಂದಿಗೆ ಅತಿ ಸುರPತೆಯಿಂದ ಹಿಂದಿನಗಿಂತಲೂ ಈಗ ಎಚ್ಚರಿಕೆಯಿಂದ ಕರೋನಾದೊಂದಿಗೆ ಕಾಯಕ ಮಾಡುವುದು ಬಹಳ ಸುಲಭದ ಕೆಲಸವಲ್ಲ. ಆದರೂ ಮೆಟ್ಟಿ ನಿಂತು ಧೈರ್ಯದಿಂದ ರೋಗ ಮುಕ್ತ ಸಮಾಜ ಮಾಡುವುದಕ್ಕೆ ಎಲ್ಲರೂ ಕೈ ಜೋಡಿಸೋಣ ಸರ್ವರಿಗೂ ಒಳ್ಳೆಯದಾಗಲೆಂದು ಅಖಿಲ ಭಾರತ ಯುವಜನ ಒಕ್ಕೂಟ (ಎಐವೈಎಫ್)ದ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.