ಅಪರಿಚಿತ ವ್ಯಕ್ತಿಯ ಶವ ಪತ್ತೆ,ಪೊಲೀಸ್ ಇಲಾಖೆಯಿಂದ ಶವ ಸಂಸ್ಕಾರ

0
45

ಸುರಪುರ: ನಗರದ ಝಂಡದಕೇರಾ ಬಳಿಯ ಈದ್ಗಾ ಬಳಿಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.ಶುಕ್ರವಾರ ಮದ್ಹ್ಯಾನ ಶವ ಪತ್ತೆಯಾಗಿದ್ದು,ಮೃತ ವ್ಯಕ್ತಿಯು ಸುಮಾರು 70 ವರ್ಷ ವಯಸ್ಸಿನವರಾಗಿದ್ದು ಬಿಳಿ ಅಂಗಿ ಮತ್ತು ಧೋತೆ ಧರಿಸಿದ್ದು ಕಪ್ಪು ಬಣ್ಣದವರಾಗಿದ್ದಾರೆ. ಶವದ ಬಳಿಯಲ್ಲಿ ನಗರದ ಆಪ್ಟಿಕಲ್ ಒಂದರ ಸಣ್ಣ ಬ್ಯಾಗ್ ಇದ್ದು,ನೀರಿನ ಬಾಟಲ್‍ಕೂಡ ಬಿದ್ದಿದೆ.ಬಿಸಿಲಿನ ಬೇಗೆಯಿಂದ ಮೃತನಾಗಿರಬಹುದು ಎಂದು ಶಂಕಿಸಲಾಗಿದೆ.

ಶುಕ್ರವಾರ ಪತ್ತೆಯಾದ ಶವವನ್ನು ಮೂರು ದಿನಗಳಿಂದ ನಗರದ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು,ಮೂರು ದಿನಗಳಿಂದ ಮೃತ ವ್ಯಕ್ತಿಗಾಗಿ ಯಾರೂ ಬಾರದಿರುವುದರಿಂದ ಪೊಲೀಸ್ ಅಧಿಕಾರಿಗಳು ನಗರಸಭೆ ಸಿಬ್ಬಂದಿಗಳ ಮೂಲಕ ಶವ ಸಂಸ್ಕಾರ ನೆರವೇರಿಸಿದ್ದಾರೆ.ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here